ad

ಯಾವ ಎಪಿಎಲ್ ಮತ್ತು ಬಿಪಿಎಲ್ ಕಾರ್ಡುಗಳು ರದ್ದಾಗೊಲ್ಲ-ಸಚಿವ ಮುನಿಯಪ್ಪ ಸ್ಪಷ್ಟನೆ-APL and BPL cards will not be cancelled - Minister Muniyappa clarifies

 SUDDILIVE || SHIVAMOGGA

ಯಾವ ಎಪಿಎಲ್ ಮತ್ತು ಬಿಪಿಎಲ್ ಕಾರ್ಡುಗಳು ರದ್ದಾಗೊಲ್ಲ-ಸಚಿವ ಮುನಿಯಪ್ಪ ಸ್ಪಷ್ಟನೆ-APL and BPL cards will not be cancelled - Minister Muniyappa clarifies

APL, BPL


ಯಾವ ಬಿಪಿಎಲ್  ಮತ್ತು ಎಪಿಎಲ್ ಕಾರ್ಡುಗಳು ರದ್ದಾಗೊಲ್ಲ ಎಂದು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ. 

ಶಿವಮೊಗ್ಗದ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಅಕ್ಕಿ ಕೊಡೋದು ತಡವಾದ ಕಾರಣ ಹಣಕೊಟ್ಟು ನಂತರ 10 ಕೆಜಿ ಅಕ್ಕಿ ನೀಡುತ್ತಿದ್ದವೆ. ಉಪಯೋಗ ಕಡಿಮೆ ಕಾಣಿಸಿತು ಕಾಳಸಂತೆಗೆ ಹೋಗಲು ಆರಂಭಿಸಿದ್ದರಿಂದ ಮತ್ತು ಕಾಳು ಬೇಳೆ ಎಣ್ಣಕೊಟ್ಟಕಾರಣ ಸರ್ವೆ ಹೇಳಿದಂತೆ ಮೂರು ಕೆಜಿ ಅಕ್ಕಿ ಎರಡು ಕೆಜಿ ರಾಗಿ. ಉತ್ತರ ಕರ್ನಾಟಕದಲ್ಲಿ ಎರಡು ಕೆಜಿ ಜೋಳ, ದಕ್ಷಿಣಕನ್ನಡ ಮೂರು ಕೆಜಿ ಅಕ್ಕಿ ನೀಡಲಾಗುತ್ತಿದೆ. ಬದಲಾಗಿ ಆದಷ್ಟು ಬೇಗ ಎರಡು ತಿಂಗಳು ಒಳಗಡೆ ಕಾನೂನು ಪ್ರಕಾರ ಟೆಂಡರ್ ಕರೆದು ಗುಣಮಟ್ಟವನ್ನು ಕಾಪಾಡಿ ತೂಕವನ್ನು ಕಾಪಾಡಿ ಉತ್ತಮವಾದಂತಹ ಪದಾರ್ಥಗಳನ್ನು ಬೇಳೆ ಸಕ್ರೆ ಗಳನ್ನು ಕೊಡಲಾಗುತ್ತದೆ ಎಂದರು. 

ಪಿಡಿಎಸ್ ಕೇಂದ್ರಗಳಿಗೆ ವಿತರಣವಾಗಿದೆ ರೇಷನ್ ವಿತರಣೆಯಾಗಿದ್ದರೂ ಕಮಿಷನ್ ಬಂದಿಲ್ಲ ಎಂದು ಪಿಡಿಎಸ್ ಕೇಂದ್ರದ ಅಧ್ಯಕ್ಷರೂ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸರ್ಕಾರ ನಿರ್ಣಯ ತೆಗೆದುಕೊಂಡು ಕ್ಲಿಯರ್ ಮಾಡಲಾಗಿದೆ. ಒಂದು ವಾರದ ಒಳಗಡೆ ಈ ಹಣ ತಲುಪಲಿದೆ ಎಂದು ಸ್ಪಷ್ಟಪಡಿಸಿದರು. 

ಶಿವಮೊಗ್ಗದಲ್ಲಿ  ಡಿಡಿ ಹಾಗೂ ಅಧಿಕಾರಿಗಳು ಎಲ್ಲರೂ ಒಳ್ಳೆ ಕೆಲಸ ಮಾಡ್ತಾಯಿದ್ಸಾರೆ. ಇಲಾಖೆ ಗೋಡಾನ್ ಗಳಲ್ಲಿ ಸಮೃದ್ಧ ಸ್ಟಾಕ್ ಇಡಲಾಗಿದೆ. ಪ್ರತಿತಿಂಗಳು 10 ತಾರೀಖಿನಲ್ಲಿ ರೇಷನ್  ಕೊಡಲು ನಿರ್ಧರಿಸಲಾಗಿದೆ ಡಿಸೆಂಬರ್ ನಿಂದ ಪ್ರತಿ ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿತಿಂಗಳು ರೇಷನ್ ನೀಡಲಾಗುವುದು ಎಂದರು. 

ರಾಜ್ಯದಲ್ಲಿ ಅಂತ್ಯೋದಯ ಮತ್ತುಬಿಪಿಎಲ್ ಕಾರ್ಡ್ 1 ಕೋಟಿ 20 ಲಕ್ಷ 95,000 ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಗಳಿವೆ. 4.50 ಕೋಟಿ ಜನರಿಗೆ ಇದು ಅನುಕೂಲವಾಗಲಿದೆ. ಶಿವಮೊಗ್ಗದಲ್ಲಿ 3.81 ಲಕ್ಷ ಬಿಪಿಎಲ್ ಕಾರ್ಡ್ ಗಳಿವೆ. 17 ಲಕ್ಷ ಗ್ರಾಹಕರಿದ್ದಾರೆ. ಸಕಾಲಕ್ಕೆ ದಿನಸಿಗಳು  ನೀಡಲಾಗುತ್ತಿದೆ. ಪೌಷ್ಠಿಕ ಆಹಾರ ನೀಡಿದಂತಾಗುತ್ತಿದೆ ಎಂದರು.

ಬಿಪಿಎಲ್ ಕಾರ್ಡ್ ಯಾವುದೂ ರದ್ದಾಗಲ್ಲ. ಎಪಿಎಲ್ ಆಗೊಲ್ಲ. ಬಿಪಿಇಎಲ್ ನಲ್ಲಿರುವ ಅನರ್ಹರನ್ನ ಎಪಿಎಲ್ ನಲ್ಲಿರಿಸುತ್ತೇವೆ. ಕೇಂದ್ರದ ನಿಯಮಗಳನ್ನ‌ಅನುಸರಿಸುತ್ತಿದ್ದೇವೆ. ಬಿಪಿಎಲ್ ನಲ್ಲಿ ತೆರಿಗೆ ಕಟ್ಟುವವರಿದ್ದಾರೆ. ಜಿಲ್ಲೆಯಲ್ಲಿ 3600 ಕಾರ್ಡಲ್ಲಿ ಪರಿಷ್ಕರಿಸಲಾಗಿದೆ. ಜಮೀನಿರುವವರ ಬಗ್ಗೆ ಪರಿಷ್ಕರಿಸಲಾಗುವುದು. ಬಾಡಿಗೆ ಕಾರುಗಳಿಗೆ ಪರಿಷ್ಕರಿಸಲಾಗುವುದು. ಮನೆಕಟ್ಟಲು ಸಾಲಕಟ್ಟವರನ್ನ ಪರಿಗಣಿಸುತ್ತಿಲ್ಲ. 1.20 ಲಕ್ಷ ಇನ್ ಕಂ ಪರಿಷ್ಕರಿಸಬೇಕಿದೆ. ಪರಿಶೀಲಿಸಲಾಗುವುದು.  ಇದು ಪೂರ್ತಿಯಾದ ನಂತರ ಬಿಪಿಎಲ್ ಕಾರ್ಡ್ ಕೊಡ್ತೀವಿ. 

ಬಿಪಿಎಲ್ ನಿಂದ ಎಪಿಎಲ್ ಗೆ 10-15% ಹೋಗುತ್ತಾರೆ. ಒನ್ ನೇಷನ್ ಒನ್ ರೇಷನ್ ಅಳವಡಿಸಲಾಗುತ್ತಿದೆ. ರಾಜ್ಯದ ಮೂಲೆ ಮೂಲೆಯಲ್ಲಿ ಕೊಡ್ತೀವಿ. ಸ್ಥಳದಲ್ಲಿಯೇ ಅಧಿಕಾರಿಗಳಿಗೆ ನಮ್ಮ ರೇಷನ್ ಕೊಟ್ಟಮೇಲೆ ಕೊಡುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದರು. 

ಉತ್ತರಾಧಿಕಾರಿ ಕುರಿತು ನಾನು ಯಾವುದಕ್ಕೂ ಉತ್ತರಿಸೊಲ್ಲ ಹೈಕಮಾಂಡ್ ನಿರ್ಧರಿಸಲಿದೆ. ನಾನು ರಾಷ್ಟ್ರರಾಜಕಾರಣದಲ್ಲಿದ್ದೆ. ನಾನು ಒಂದು ಹೇಳಿದರೆ ಇನ್ನೊಂದು ಪ್ರಕಟವಾಗುತ್ತದೆ ಹಾಗಾಗಿ ನಾನೇನು ಉತ್ತರಿಸುವುದಿಲ್ಲವೆಂದು ಹೇಳಿದರು.

APL and BPL cards will not be cancelled - Minister Muniyappa clarifies

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close