ad

ಮುಂದಿನ ದಲಿತ ಸಿಎಂ ಎಂದು ಸಚಿವ ಮುನಿಯಪ್ಪರಿಗೆ ಅವರ ಬೆಂಬಲಿಗರಿಂದ ಘೋಷಣೆ-Minister Muniyappar declared by his supporters that he will be the next Dalit CM

 SUDDILIVE || SHIVAMOGGA

ಮುಂದಿನ ದಲಿತ ಸಿಎಂ ಎಂದು ಸಚಿವ ಮುನಿಯಪ್ಪರಿಗೆ ಅವರ ಬೆಂಬಲಿಗರಿಂದ ಘೋಷಣೆ-Minister Muniyappar declared by his supporters that he will be the next Dalit CM

Muniyappa, dalitacm


ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎರಡುವರೆ ವರ್ಷ ಕಳೆದಿದ್ದು ಈಗ ಸಿಎಂ ಬದಲಾವಣೆ ಮತ್ತು ದಲಿತ ಸಿಎಂ ಕುರಿತು ಗುಸು-ಗುಸು ನಡೆಯುತ್ತಿರುವ ಬೆನ್ನಲ್ಲೇ ಶಿವಮೊಗ್ಗದಲ್ಲಿ ಆಹಾರ ಸಚಿವ ಕೆಎಚ್ ಮುನಿಯಪ್ಪ ಅವರನ್ನು ಮುಂದಿನ ದಲಿತ ಮುಖ್ಯಮಂತ್ರಿ ಎಂದು ಅವರ ಬೆಂಬಲಿಗರು ಘೋಷಣೆ ಕೂಗಿದ್ದಾರೆ.



ಸೊರಬದಲ್ಲಿ ಇಂದು ಸಂಜೆ ನಡೆಯಲಿರುವ ಬಂಗಾರಪ್ಪನವರ 93ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗಿಯಾಗಲು ಶಿವಮೊಗ್ಗದ ಐಬಿಗೆ ಬಂದಿದ್ದ ಆಹಾರ ಸಚಿವ ಕೆಹೆಚ್ ಮುನಿಯಪ್ಪ ಮೊದಲು ಅಧಿಕಾರಿಗಳ ಸಭೆ ನಡೆಸಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. 

ಮಾಧ್ಯಮಗಳೊಂದಿಗೆ ಮಾತನಾಡಿ ನಂತರ ಮತ್ತೊಂದು ಕೊಠಡಿಗೆ ತೆರಳುವಾಗ ಅವರ ಹಿಬಾಲಕರು ಮುಂದಿನ ದಲಿತ ಸಿಎಂ ಕೆ.ಹೆಚ್ ಮುನಿಯಪ್ಪನವರಿಗೆ ಜೈ ಎನ್ನುವ ಮೂಲಕ ರಾಜ್ಯದಲ್ಲಿ ನಡೆಯುತ್ತಿರುವ ಸಿಎಂ ಬದಲಾವಣೆ ಮತ್ತು ದಲಿತ ಸಿಎಂ ಮಾಡುವ ಹಿನ್ನಲೆಯಲ್ಲಿ ನಡೆಯುತ್ತಿರುವ ಚರ್ಚೆಗೆ ಹಿಂಬಾಲಕರು ಕಿಚ್ಚನ್ನ ಹೊತ್ತಿಸಿದ್ದಾರೆ. 

Minister Muniyappar declared by his supporters that he will be the next Dalit CM

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close