SUDDILIVE || SHIVAMOGGA
ಗೋಡೆ ಕುಸಿದು ಕಾರ್ಮಿಕ ಸಾವು, ಮತ್ತೋರ್ವನಿಗೆ ಗಂಭೀರಗಾಯ-Worker dies, another seriously injured in wall collapse
ತಾಲೂಕಿನ ಕೋಟೆಗಂಗೂರಿನಲ್ಲಿರುವ ಸಿದ್ಲೀಪುರದಲ್ಲಿರುವ ಕಾರ್ಮಿಕ ಇಲಾಖೆಯ ವತಿಯಿಂದ ನೂತನವಾಗಿ ಕಟ್ಟಿರುವ ಸಮುಚ್ಚಾಯ ಕಟ್ಟಡದ ಗೋಡೆ ಕುಸಿದು ಕಾರ್ಮಿಕನೋರ್ವ ಸಾವನ್ನಪ್ಪಿದ್ದು ಆತನ ಸಹೋದನಿಗೆ ಕೈ ಕಾಲುಗಳು ಮುರಿದಿರುವ ಘಟನೆ ಇಂದು ಸಂಜೆ ಸಂಭವಿಸಿದೆ.
ಸಿದ್ಲೀಪುರದ ಕಾರ್ಮಿಕ ಇಲಾಖೆಯ ಸಮುಚ್ಛಾಯ ಭವನದ ಕಟ್ಟಡವನ್ನ ಇತ್ತೀಚೆಗೆ ಉದ್ಘಾಟನೆಯಾಗಿತ್ತು. ಇಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಶಿವಮೊಗ್ಗದಲ್ಲಿರುವಾಗಲೇ ಈ ಘಟನೆ ನಡೆದಿರುವುದು ದುರಂತ
ಸಮುಚ್ಚಾಯ ಕಟ್ಟಡದ ಉದ್ಘಟನೆಗೊಂಡಿದ್ದರೂ ಅದರಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಬಂದಿದ್ದ ಕಾರ್ಮಿಕರಿಗೆ ಉಳಿದುಕೊಳ್ಳಲು ನಿರ್ಮಿಸಲಾಗಿದ್ದ ಕಟ್ಟಡವನ್ನ ಕೆಡವಲು ಮುಂದಾಗಿದ್ದ ಸಿದ್ಲೀಪುರ ಗ್ರಾಮದ ನಿವಾಸಿ ಮಂಜು(35) ಮತ್ತು ಆತನ ಸಹೋದರ ಮುತ್ತು ಎಂಬುವನಿಗೆ ಕೈಕಾಲು ಮುರಿದಿವೆ. ಮುತ್ತುವನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾಮಸ್ಥರು ಆಕ್ಷೇಪ
ಸಿದ್ಲೀಪುರದಲ್ಲಿ ನಡೆದ ಅವಘಡಕ್ಕೆ ಕಾರ್ಮಿಕ ಸಾವನ್ನಪ್ಪಿದ್ದು ಇದುವರೆಗೂ ಆತನ ಕುಟುಂಬಕ್ಕೆ ಸಾಂತ್ವಾನ ಹೇಳಲು ಗುತ್ತಿಗೆದಾರನಾಗಲಿ ಅಥವಾ ಕಾರ್ಮಿಕ ಇಲಾಖೆಯಾಗಲಿ ಸ್ಥಳಕ್ಕೆ ಬಂದಿಲ್ಲ. ಈ ಕುರಿತು ಗ್ರಾಮಸ್ಥರೊಂದಿಗೆ ಸಂಘಟನೆ ಪ್ರತಿಭಟಿಸಲಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಜು ಮತ್ತು ಮುತ್ತು ಇಬ್ಬರೂ ಸಿದ್ಲೀಪುರದ ನಿವಾಸಿಗಳಾಗಿದ್ದಾರೆ. ಅವರಿಬ್ಬರನ್ನ ಕರೆದುಕೊಂಡು ಹೋಗಿ ಯಾವುದೇ ಸುರಕ್ಷಿತ ಕ್ರಮಜರುಗಿಸದೆ ಕೆಲಸಕ್ಕೆ ಬಿಡಲಾಗಿದೆ. ಈಗ ಅವಘಡ ಸಂಭವಿಸಿದಾಗ ಗುತ್ತಿಗೆದಾರ ಮೇಸ್ತ್ರೀ ಮತ್ತು ಅಧಿಕಾರಿಗಳು ನಾಪತ್ತೆಯಾಗಿದ್ದಾರೆ ಎಂದು ದೂರಿದ್ದಾರೆ.
Worker dies, another seriously injured in wall collapse
