ad

ಅಕ್ಬರ್ ನ ಕಾಲಿಗೆ ಗುಂಡು- Akbar was shot in the leg

 SHIVAMOGGA || SHIVAMOGGA

ಅಕ್ಬರ್ ನ ಕಾಲಿಗೆ ಗುಂಡು-  Akbar was shot in the leg



ಶಿವಮೊಗ್ಗದಲ್ಲಿ ಮತ್ತೊಬ್ಬನ ಆರೋಪಿ ಕಾಲಿಗೆ ಗುಂಡೇಟು ತಗುಲಿದೆ. ಇದರಿಂದ ಬಹಳ ದಿನಗಳ ನಂತರ ಆರೋಪಿಗಳ ಹುಟ್ಟಡಗಿಸಲು ನಡೆಯುತ್ತಿದ್ದ ಪೊಲೀಸರ ಕಾರ್ಯಾಚರಣೆ ಮುಂದುವರೆದಿದೆ. 

ಎರಡು ಕೊಲೆ ಮತ್ತು ಒಂದು ಸುಲಿಗೆಯ ಆರೋಪದಲ್ಲಿ ಭಾಗಿಯಾಗಿದ್ದ ಅಕ್ಬರ್ ಎಂಬ 22 ವರ್ಷದ ಯುವಕನ ಕಾಲಿಗೆ ಗುಂಡೇಟು ತಗುಲಿದೆ. ಈ ಅಕ್ಬರ್ ಮೊನ್ನೆ ನಡೆದ ಅಮ್ಜದ್ ಎಂಬಾತನ ಚಾಕು ಇರಿತದ ಪ್ರಕರಣದಲ್ಲಿಯೂ ಭಾಗಿಯಾಗಿದ್ದನು. ಈಗಾಗಲೇ ಈ ಪ್ರಕರಣದಲ್ಲಿ  ಆರನೇ ಆರೋಪಿಯಾಗಿದ್ದಾನೆ. 

ಗಾಯಗೊಂಡ ಪಿಸಿ ಚಂದ್ರನಾಯ್ಕ

 ಸುಬ್ಬಯ್ಯ  ಮೆಡಿಕಲ್ ಕಾಲೇಜಿನ ಹಿಂಭಾಗದಲ್ಲಿ ಅಕ್ಬರ್ ಇದ್ದ ಎಂಬ ಮಾಹಿತಿಯ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಬಂಧನಕ್ಕೆ ತೆರಳಿದ್ದರು. ಬಂಧಿಸಲು ಮುಂದಾದಾಗ ಅಕ್ಬರ್  ಪೊಲೀಸರ ಮೇಲೆ ಎಗುರಿದ್ದಾನೆ. ಎಚ್ಚರಿಕೆ ನೀಡಿದಾಗ್ಯ ಸಹ  ಆತ ಪೊಲೀಸರ ಮೇಲೆ ದಾಳಿ ನಡೆಸಿದ್ದಾನೆ. ಆತನ ದಾಳಿಯಲ್ಲಿ  ಚಂದ್ರ ನಾಯ್ಕ ಎಂಬ ಪಿಸಿ ಗಾಯಗೊಂಡಿದ್ದಾನೆ. ಈ ಹಿನ್ನಲೆಯಲ್ಲಿ ಪೊಲೀಸರು ಅಕ್ಬರ್ ನ ಕಾಲಿಗೆ ಗುಂಡು ಹೊಡೆದು ರಕ್ಷಿಸಲಾಗಿದೆ. 
Akbar, shot

ಅಕ್ಬರ್ ನ ಬಲಗಾಲಿಗೆ ಗುಂಡು ತಗುಲಿದೆ. ದೊಡ್ಡಪೇಟೆ ಪೊಲೀಸ್ ಸಿಬ್ಬಂದಿ ಚಂದ್ರನಾಯ್ಕನ ಮೇಲೆ ದಾಳಿ ನಡೆದಿದೆ. ಚಂದ್ರನಾಯಗಕನನ್ನ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. 

ಈ ಕುರಿತು ಮಾಹಿತಿ ನೀಡಿರುವ ಎಸ್ಪಿ ಮಿಥುನ್ ಕುಮಾರ್ ಈತ ರೌಡಿಶೀಟರ್ ಆಗಿದ್ದನು. ಎರಡು ಕೊಲೆ ಮತ್ತು ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಅಮ್ಜದ್ ಪ್ರಕರಣದ ಆರನೇ ಆರೋಪಿಯಾಗಿದ್ದ ಅಕ್ಬರ್ ಪೊಲೀಸರು ಎಚ್ಚರಿಕೆ ನೀಡಿದಾಗ್ಯೂ ಸಹ ದಾಳಿ ಮುಂದು ವರೆಸಿದ ಪರಿಣಾಮ ಎಡಗಾಲಿಗೆ ಗುಂಡೇಟು ಹೊಡೆದು ರಕ್ಚಿಸಲಾಗಿದೆ ಎಂದರು. 


Akbar was shot in the leg 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close