ad

ಆಚಾರ್ಯತ್ರಯ ಭವನದಲ್ಲಿ ಧಾರ್ಮಿಕ ಜಾಗೃತಿ ನಡೆಯಲಿ-ಶೃಂಗೇರಿ ಶ್ರೀಗಳು- Let religious awareness be spread in Acharyatraya Bhavan - Sringeri Sri

 SUDDILIVE || SHIVAMOGGA

ಆಚಾರ್ಯತ್ರಯ ಭವನದಲ್ಲಿ ಧಾರ್ಮಿಕ ಜಾಗೃತಿ ನಡೆಯಲಿ-ಶೃಂಗೇರಿ ಶ್ರೀಗಳು-Let religious awareness be spread in Acharyatraya Bhavan - Sringeri Sri

Acharyatraya, bhavana



ಆಚಾರ್ಯತ್ರಯ ಭವನ ಸುಂದರವಾಗಿ ಮೂಡಿಬಂದಿದ್ದು, ಈ ಭವನದಲ್ಲಿ ಧಾರ್ಮಿಕ ಜಾಗೃತಿಯಾಗಲಿ ಜೊತೆಗೆ ನಿರಂತರವಾಗಿ ಧಾರ್ಮಿಕ ಅನುಷ್ಟಾನ ಕಾರ್ಯಕ್ರಮಗಳು ನಡೆಯಲಿ ಎಂದು ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಆಶಿಸಿದರು.

ಅವರು ಇಂದು ನಗರದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವತಿಯಿಂದ ಕೋಟೆ ರಸ್ತೆಯ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಾಲಯದ ಆವರಣದಲ್ಲಿರುವ ಆಚಾರ್ಯತ್ರಯರ ಭವನಕ್ಕೆ ತಮ್ಮ ಪ್ರಥಮ ಭೇಟಿನೀಡಿ, ಭಕ್ತಾಧಿಗಳಿಗೆ ಆಶೀರ್ವಚನ ನೀಡಿದರು.

ಈ ಭವನದ ನಿರ್ಮಾಣಕಾರ್ಯದಲ್ಲಿ ಸಹಕಾರ ಮಾಡಿದ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹಾಗೂ ಸಂಬಂಧಪಟ್ಟ ಎಲ್ಲರನ್ನೂ ಕೂಡ ಅವರು ಅಭಿನಂದಿಸಿದರು. ಕೋಟೆ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಿಯ ದಿವ್ಯ ಸಾನಿಧ್ಯದಲ್ಲಿ ಈ ಭವನ ನಿರ್ಮಾಣಗೊಂಡಿದೆ. ತ್ರಿಮತಸ್ಥ ಬ್ರಾಹ್ಮಣರಿಗೆ ಇದು ಅನುಕೂಲವಾಗಲಿದೆ. ಸದಾ ಈ ಭವನದಲ್ಲಿ ಮಂಗಳ ಕಾರ್ಯಗಳು, ಧಾರ್ಮಿಕ ಕಾರ್ಯಗಳು ನಡೆಯಲಿ. ಸಮಾಜದಲ್ಲಿ ಧರ್ಮಜಾಗೃತಿ ಉಂಟಾಗಲಿ . ನಿರಂತರವಾಗಿ ಒಳ್ಳೆಯ ಕಾರ್ಯಗಳು ನಡೆಯಲಿ ಎಂದು ನಾನು ಆಶೀರ್ವಾದ ಮಾಡುತ್ತೇನೆ. ಶ್ರೀ ಶಾರದಾಂಬೆಯ ಕೃಪೆ ಎಲ್ಲರ ಮೇಲಿರಲಿ ಎಂದು ಹಾರೈಸಿದರು.

ಇದಕ್ಕೂ ಮುನ್ನ ಪುರಪ್ರವೇಶ ಮಾಡಿದ ಶ್ರೀಗಳಿಗೆ ಅದ್ಧೂರಿ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಿಯ ದರ್ಶನ ಪಡೆದು, ಬಳಿಕ ಆಚಾರ್ಯತ್ರಯರ ಭವನಕ್ಕೆ ಪಾದಸ್ಪರ್ಶ ಮಾಡಿ, ಜ್ಯೋತಿ ಬೆಳಗಿಸಿ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಆಗಮಿಕ ವಿದ್ವಾನ್ ಶಂಕರಾನಂದ ಜೋಯ್ಸ್, ಎಕೆಬಿಎಂಎಸ್‌ನ ಉಪಾಧ್ಯಕ್ಷ ಎಸ್. ದತ್ತಾತ್ರಿ, ಜಿಲ್ಲಾ ಪ್ರತಿನಿಧಿ ಎಂ.ರಘುರಾಮ್, ಮುಖಂಡರಾದ ಎಂ.ಶಂಕರ್, ರಾಘವೇಂದ್ರ ಉಡುಪ, ಪ್ರಕಾಶ್‌ಭಟ್, ರವಿಶಂಕರ್, ಅನಂತ್ ಜಿ.ಎಸ್., ಮಧುಮತಿ, ಶ್ರೀಕಾಂತ್, ಗಣೇಶ್ ಪ್ರಸಾದ್, ಸೂರ್ಯನಾರಾಯಣ್, ವೆಂಕಟೇಶ್‌ರಾವ್ ಮತ್ತಿತರರಿದ್ದರು.

Let religious awareness be spread in Acharyatraya Bhavan - Sringeri Sri

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close