ad

ಶಿವಮೊಗ್ಗ ಏರ್ ಪೋರ್ಟ್ ಅಭಿವೃದ್ಧಿ ಕುರಿತು ನೂತನ ಅಧ್ಯಕ್ಷರ ಮಾತು-New director's remarks on shivamogga airport development

 SUDDILIVE || SHIVAMOGGA

ಶಿವಮೊಗ್ಗ ಏರ್ ಪೋರ್ಟ್ ಅಭಿವೃದ್ಧಿ ಕುರಿತು ನೂತನ ನಿರ್ದೇಶಕರ ಮಾತು-New director's remarks on shivamogga airport 

Shivamogga, Airport

6 ನೇ ತಾರೀಕಿಗೆ ಕೆಎಸ್ಐಐಡಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದೇನೆ ಎಂದು ನೂತನ ಅಧ್ಯಕ್ಷ ನಂಜನಯ್ಯ ಮಠ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಶಿವಮೊಗ್ಗದ ಏರ್ ಪೋರ್ಟ್ ವ್ಯವಸ್ಥೆಗೆ ಅಭಿವೃದ್ಧಿ ಆಗಬೇಕಿದೆ, ಗೋವಾ, ಹೈದ್ರಬಾದ್ ಮೊದಲಾದ ವಿಮಾನ ಹಾರಾಟ ಹಗಲಿನಲ್ಲಿದೆ. ರಾತ್ರಿ ಸೇವೆಯಿಲ್ಲ. ನೈಟ್ ಲ್ಯಾಂಡಿಂಗ್ ಆಗಿದೆ. ತಂತ್ರಿಕ ಕೆಲಸವಿದೆ. ನೆವಿಗೇಷನ್ ಟರಂಡರ್, ಎಕ್ಯೂಪ್ ಮೆಂಟ್ ಬಂದಿದೆ ಸಿವಿಲ್ ಟೆಂಡರ್ ಕರೆಯಲಾಗಿದೆ. ಇಲ್ಲಿಂದ ಮುಂಬೈಗೆ ಸಂಪರ್ಕ ಹೊಂದಬೇಕಿದೆ ಎಂದರು.

ಕೇಂದ್ರ ಸರ್ಕಾರದಿಂದ ಕೆಲ ಅನುಮತಿ ಬೇಕಿದೆ. ಆಲ್ ಇಂಡಿಯಾ ವಿಮಾನ ನಿಲ್ದಾಣವಲ್ಲದ ಕಾರಣ,ಅಭಿವೃದ್ಧಿ ನಿಧಾನವಾಗಿದೆ. 780 ಎಕರೆ ಏರ್ ಪೋಚಚ್ಚಿಸಲಾಗುತ್ತದೆಂದು ಕಡೆ ಒತ್ತುವರಿಯಿದೆ.  ಇದರಲ್ಲಿ 111 ಎಕರೆ ಜಮೀನಿಗೆ ಬಿಟ್ಟುಖಾಲಿಯಾದ ಜಾಗವಿದೆ. ಅಲ್ಲಿ ಮಾಲ್ ಮತ್ತು ವಾಣಿಜ್ಯ ಕಟ್ಟಡ ಕಟ್ಟಬೇಕಿದೆ. ಅದರ ಬಗ್ಗೆ ಚಚ್ಚಿಸಲಾಗುತ್ತಿದೆ. ಲೀಸ್ ಗೆ ನೀಡುವ ಬಗ್ಗೆ ಯೋಚಿಸಲಾಗಿದೆ. 2023-24 ರಲ್ಲಿ 17479 ಜನ ವಿಮಾನದಲ್ಲಿ ಪ್ರಯಾಣಿಸಿದ್ದಾರೆ , 24-25 ರಲ್ಲಿ 92 ಸಾವಿರ ಜನ ಪ್ರಯಾಣಿಸಿದ್ದು, ಇದುವರೆಗೆ 1 ಲಕ್ಷ 9 ಸಾವಿರ ಜನ ಪ್ರಯಾಣಿಸಿದ್ದಾರೆ  ಎಂದರು. 

ನಿನ್ನೆ ಏರ್ ಪೋರ್ಟ್ ವೀಕ್ಷಿಸಿದ್ದೇನೆ. ಕಾಮಗಾರಿಗಳ ಬಗ್ಗೆ  ಬೋರ್ಡ್ ನಲ್ಲಿ ಚರ್ಚಿಸಲಾಗುವುದು. ನೈಟ್ ಲ್ಯಾಂಡಿಂಗ್ ಗೆ ಲೈಟಿಂಗ್ ವ್ಯವಸ್ಥೆ ಆಗಿದೆ ಕೆಲ ತಾಂತ್ರಿಕ ಅಂಶದಲ್ಲಿ ಪೂರ್ಣಗೊಳಿಸಲು ನಾಲ್ಕೈದು ತಿಂಗಳು ಬೇಕಿದೆ. 20 ಲಕ್ಷವನ್ನ ರಾಜ್ಯ ಸರ್ಕಾರದ ವತಿಯಿಂದ  ದಂಡಕಟ್ಟಬೇಕಿದೆ. ಡಿಸಿಸಿ ಅವರು ಏರ್ ಪೋರ್ಟ್ ವೀಕ್ಷಣೆಗೆ ಬಂದಾಗ ದಂಡಹಾಕಿದ್ದಾರೆ. ಈಗ ಪರವಾನಗಿ ನವೀಕರಣ ಬಂದಿದೆ. ಹಳೆ ದಂಡ ಕಟ್ಟಬೇಕಿದೆ ಅ.23,24 ರಲ್ಲಿ ನವೀಕರಣವಾಗಬೇಕಿದೆ. ಈ ವೇಳೆ ದಂಡ ಕಟ್ಟುವ ಪ್ರಯತ್ನ ನಡೆಯಲಿದೆ ಎಂದರು. 

ಏರ್ ಪೊರ್ಟ್ 50% ಲಾಸ್ ನಲ್ಲಿದೆ. ಅಭಿವೃದ್ಧಿಗೆ 10 ವರ್ಷ ಬೇಕಿದೆ. ನಿವೇಶನ ಹಂಚಿಕೆ ಆಗದ ಹಿನ್ನಲೆಯಲ್ಲಿ ರೈತರು ಪ್ರತಿಭಟಿಸುತ್ತಿರುವ ಬಗ್ಗೆ ಹೆಚ್ಚಿನ ಮಾಹಿತಿ ಪಡೆದಿಲ್ಲ. ರೈತರಿಗೆ ಸಂಪೂರ್ಣ ಬೆಂಬಲವಿದೆ. ಕೆಐಡಿಬಿಯಿಂದ ಜಮೀನು ನಮಗೆ ಹಸ್ತಾಂತರಿಸಿಲ್ಲ. ಇದರ ಬಗ್ಗೆ ಸಚಿವರ ಜೊತೆ ಚರ್ಚಿಸುತ್ತೇನೆ ಎಂದರು. 

ಶಿವಮೊಗ್ಗದಲ್ಲಿ ಸಮಾಜವಾದದ ಬೀಜಬಿತ್ತಲಾಗಿದೆ. ಶಾಂತವೇರಿ ಗೋಪಾಲಗೌಡ, ಬಂಗಾರಪ್ಪ, ಜೆಹೆಚ್ ಪಟೇಲ್ ಮೊದಲಾದವರು ಕಾಣಿಕೆ ಈ ಜಿಲ್ಲೆಯಲ್ಲಿದೆ. ಇವರ ಜೊತೆಗೆ ಯಡಿಯೂರಪ್ಪನವರಿಗೂ ಕಾಣಿಕೆಯಿದೆ ಏರ್ ಪೋರ್ಟ್ ಗೆ ಬಿಎಸ್ ವೈ ಕೊಡುಗೆ ಇದೆ. 

ರಾಯಚೂರು ಹಾಸನವನ್ನ ಕೆಎಸ್ಎಸ್ಐಡಿಸಿಯಲ್ಲಿ ನಡೆಸಲಾಗುತ್ತಿದೆ. ಬಿಜಾಪುರದ ಏರ್ ಫೊರ್ಟ್ ಸುಪ್ರೀಂ‌ಕೋರ್ಟ್ ಗೆ ಹೋಗಲಾಗಿದೆ. ಶಿವಮೊಗ್ಗದ ಏರ್ ಪೋರ್ಟ್ ನಲ್ಲಿ ಹಕ್ಕಿಗಳ ಮೂವ್ ಮೆಂಟ್ ಇರುವುದರಿಂದ ದಿನಾಲು ಪಟಾಕಿ ಸಿಡಿಸಲಾಗುತ್ತಿದೆ. ಇದಕ್ಕೆ 8 ಜನರನ್ನ ನಿಯೋಜಿಸಲಾಗಿದೆ ಎಂದರು.

New director's remarks on shivamogga airport development

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close