SUDDILIVE || SHIVAMOGGA
ಅಮ್ಜದ್ ಗುಣಮುಖರಾಗುತ್ತಿದ್ದಾನೆ-ಎಸ್ಪಿ-Amjad is recovering - SP
ನಿನ್ನೆ ಅಮ್ಜದ್ ಮತ್ತು ಶಾಹಿದ್ ಎಂಬುವರ ಮೇಲೆ ನಡೆದ ಮಾರಣಾಂತಿಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಮಿಥುನ್ ಕುಮಾರ್ ಪ್ರತಿಕ್ರಿಯಿಸಿದ್ದು ಸಣ್ಣ ವಯಸ್ಕನರಿಂದ ಹಲ್ಲೆ ನಡೆಸಿರುವುದಾಗಿ ಹೇಳಿದ್ದಾರೆ.
ನಿನ್ನೆ ಸಂಜೆ 7-45 ರ ವೇಳೆ ಅಮ್ಜದ್ ಎಂಬ ವ್ಯಕ್ತಿಯನ್ನ ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದ ಸಣ್ಣ ಹುಡುಗರು ಹುಡುಗರು ಮೊದಲು ಹಿಂಬದಿಯಿಂದ ಹಲ್ಲೆ ನಡೆಸಿದ್ದಾರೆ. ಅಮ್ಜದ್ ಬೈಕ್ ನಿಂದ ಕೆಳಗೆ ಬಿದ್ದಾಗ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಈ ಪ್ರಕರಣದಲ್ಲಿ ಹಲ್ಲೆ ನಡೆಸಲು ಬಂದ ಓರ್ವನ ಮೇಲೂ ಸ್ಥಳೀಯರೆ ತಡೆದು ಹೊಡೆದಿದ್ದಾರೆ. ಆತನನ್ನೂ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಪ್ರಕರಣದಲ್ಲಿ ಐದು ಜನ ಆರೋಪಿಗಳನ್ನ ಬಂಧಿಸಲಾಗಿದೆ ಎಂದಿದ್ದಾರೆ.
ಗಾಯಗೊಂಡಿದ್ದ ಅಮ್ಜದ್ ಗೆ ನಿನ್ನೆ ನಾಲ್ಕು ಗಂಟೆ ಆಪರೇಷನ್ ನಡೆದಿದೆ. ವೆಂಟಿಲೇಟರ್ ನಲ್ಲಿರುವ ಆತ ರಿಕವರಿಯಾಗುತ್ತಿರುವುದಾಗಿ ತಿಳಿದು ಬಂದಿದೆ ಎಂದರು.
ಮಾಹಿತಿ ಪ್ರಕಾರ ವ್ಯಾಗನರ್ ಕಾರು ಮತ್ತು ಬೈಕ್ ನಲ್ಲಿ ಬಂದ ಸಣ್ಣ ಹುಡುಗರು ಮೊದಲು ಬೈಕ್ ನಲ್ಲಿ ಬಂದವರು ಅಮ್ಜದ್ ಮೇಲೆ ದಾಳಿ ನಡೆಸುತ್ತಾರೆ. ನಂತರ ವ್ಯಾಗನ್ ಆರ್ ಕಾರಿನಲ್ಲಿ ಬಂದವರು ಚಾಕುವಿನಿಂದ ಚುಚ್ಚಿದ್ದಾರೆ ಎಂಬ ಮಾಹಿತಿಯೂ ಇದೆ.
Amjad is recovering - SP

