ಮಗಳನ್ನ ಕೊಂದು ಆಕೆಯ ದೇಹದ ಮೇಲೆ ನಿಂತು ತಾಯಿ ನೇಣಿಗೆ ಶರಣು- The mother killed her daughter and stood over her body, hanging herself

SUDDILIVE || SHIVAMOGGA

ಮಗಳನ್ನ ಕೊಂದು ಆಕೆಯ ದೇಹದ ಮೇಲೆ ನಿಂತು ತಾಯಿ ನೇಣಿಗೆ ಶರಣು-The mother killed her daughter and stood over her body, hanging herself

Mother, Daughter

ಶಿವಮೊಗ್ಗದಲ್ಲಿ ಮಗಳನ್ನ ಕೊಂದು, ತಾಯಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ SOCO ಟೀಮ್ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಘಟನಾ ಸ್ಥಳದಲ್ಲಿ ತಜ್ಞರ ತಂಡ.ಮಾಹಿತಿ ಸಂಗ್ರಹಿಸುತ್ತಿದೆ. 

ಘಟನಾ ಸ್ಥಳಕ್ಕೆ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿ- ಸಿಬ್ಬಂದಿಯಿಂದ ಮಾಹಿತಿ ಪಡೆದ ಎಸ್ಪಿ ನಂತರ ಮಾಧ್ಯಮಕ್ಕೆ ಮಾತನಾಡಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮರ್ಡರ್- ಸುಸೈಡ್ ಪ್ರಕರಣ ದಾಖಲಾಗಿದೆ.

ಪೂರ್ವಿಕಾ ಎಂಬ ಸಣ್ಣ ಹುಡುಗಿಯ ಕೊಲೆಯಾಗಿದೆ. ಪೂರ್ವಿಕಾಳ ತಲೆ, ಮುಖದ ಭಾಗಕ್ಕೆ ಚುಚ್ಚಿ ಭೀಕರವಾಗಿ ಕೊಲೆಯಾಗಿದೆ. ಮಗಳ ಮೃತ ದೇಹದ ಮೇಲೆ ನಿಂತು ತಾಯಿ ಶೃತಿ ನೇಣು ಬಿಗಿದುಕೊಂಡಿದ್ದಾರೆ ಎಂದು ವಿವರಿಸಿದ್ದಾರೆ. 

ಈ ಸ್ಥಿತಿಯಲ್ಲಿ ಎರಡು ದೇಹ ಪತ್ತೆಯಾಗಿದೆ. ರಾಮಣ್ಣ ಎಂಬುವವರು ಮೆಗ್ಗಾನ್ ನಲ್ಲಿ ಲ್ಯಾಬ್ ಟೆಕ್ನಷಿಯನ್ ಕೆಲಸ ಮಾಡ್ತಾರೆ. ರಾಮಣ್ಣ ಅವರ ಹೆಂಡತಿ ಹಾಗೂ ಮಗಳು ಇವರು. ನೈಟ್ ಡ್ಯೂಟಿ ಕೆಲಸಕ್ಕೆ ಹೋಗಿದ್ದರು. ಬೆಳಿಗ್ಗೆ ಬಂದಾಗ ಬಾಗಿಲು ತೆಗೆದಿಲ್ಲ. ನಂತರ ಅಕ್ಕಪಕ್ಕದವರ ಸಹಾಯದಿಂದ ಬಾಗಿಲು ತೆಗೆದು ನೋಡಿದ್ದಾರೆ. ಪತ್ನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 

ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಕೆ ಮೆಡಿಕಲ್ ಟ್ರೀಟ್ಮೆಂಟ್ ಅಲ್ಲಿ ಇದ್ರು ಎಂದು ಗಂಡ ಹೇಳಿದ್ದಾರೆ. ಮೆಡಿಕಲ್ ಡಾಕ್ಯುಮೆಂಟ್ಸ್ ಹಾಗೂ ವೈದ್ಯರ ಒಪಿನಿಯನ್ ಕೂಡ ಪಡೆಯುತ್ತೇವೆ. ಎರಡು ಪ್ರಕರಣ ದಾಖಲಾಗಿದ್ದು, ತನಿಖೆ ನಂತರ ಎಲ್ಲವು ತಿಳಿಯುತ್ತೆ ಎಂದು ಅವರು ವಿವರಿಸಿದರು. 

ಕುಂಸಿ ಮರ್ಡರ್ ಪ್ರಕರಣ

ಕುಂಸಿಯಲ್ಲಿ ಬಸಮ್ಮ ಎಂಬ ಮಹಿಳೆಯ ಕೊಲೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ ಮಿಥುನ್ ಕುಮಾರ್, ಕುಂಸಿಯ ಮುಖ್ಯರಸ್ತೆಯಿಂದ ಮೂರನೆ ಮನೆಯಿತ್ತು. ನಿನ್ನೆ ಮಾಹಿತಿ ಬಂದಾಗ ಹೊಟ್ಟೆ ಮತ್ತಿತರ ಹತ್ತಿರ ಕೊಲೆಯಾಗಿದೆ. ಮರ್ಡರ್ ಪ್ರಕರಣ ದಾಖಲಾಗಿದೆ. ಅದನ್ನೂ ಸಹ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದರು. 

The mother killed her daughter and stood over her body, hanging herself.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close