SUDDILIVE || SHIVAMOGGA
ಜಾತಿಗಣತಿಯ ಸರ್ವೆಯ ಹೆಸರಿನಲ್ಲಿ ಮಹಿಳೆಯ ಮೇಲೆ ಹಲ್ಲೆ-Woman attacked in the name of caste census survey
ಜಾತಿಗಣತಿಯ ಸಮೀಕ್ಷೆಯ ಹೆಸರಿನಲ್ಲಿ ದರೋಡೆಗೆ ಯತ್ನ ನಡೆದಿದೆ. ಮನೆಗೆ ನುಗ್ಗಿ ಮಹಿಳೆಯ ಮೇಲೆ ಹಲ್ಲೆ ನಡೆದಿದೆ. ಮಾರಕಾಸ್ತ್ರ ಹಿಡಿದು ಹಲ್ಲೆ ನಡೆಸಲು ಯತ್ನಿಸಿದ ಮಹಿಳೆಯನ್ನ ಸ್ಥಳೀಯರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಆಜಾದ್ ನಗರದ 2 ನೇ ತಿರುವಿನಲ್ಲಿ ನಡೆದಿದೆ.
ಜಾತಿಜನಗಣತಿಗೆ ಬಂದಿದ್ದೇವೆ ಎಂದು ಆಜಾದ್ ನಗರದ 2 ನೇ ತಿರುವಿನಲ್ಲಿರುವ ದಿಲ್ಶಾದ್ ಎಂಬ 45 ವರ್ಷದ ಮಹಿಳೆ ಮನೆಗೆ ತೆರಳಿದ ತಸ್ಮೀಯ ಎಂಬ ಮಹಿಳೆ ಆಧಾರ್ ಕಾರ್ಡ್ ಕೊಡಿ ಎಂದು ಕೇಳಿದ್ದಾಳೆ. ಪತಿ ನಮಾಜ್ ಗೆ ತೆರಳಲು ಹೊರಟ ಕಾರಣ ದಿಲ್ಶಾದ್ ಮನೆಯ ಬಾಗಿಲು ತೆಗೆದಿದ್ದಾರೆ.
ಬಾಗಿಲು ತೆಗೆದರೂ ಅಲ್ಲೇ ಇದ್ದ ಮಹಿಳೆಯನ್ನ ನೋಡಿ ಆಧಾರ್ ಕಾರ್ಡ್ ತೆಗೆದುಕೊಡಲು ಬೀರುವಿನ ಬಳಿ ದಿಲ್ಶಾದ್ ಹೋಗಿದ್ದಾರೆ. ದಿಲ್ಶಾದ್ ಒಳಗೆ ಹೋಗುತ್ತಿದ್ದಂತೆ ತಸ್ಮೀಯ ಸಹ ಹತ್ಯಾರಗಳನ್ನ ತಂದ ಬ್ಯಾಗ್ ನೊಂದಿಗೆ ಒಳಗೆ ಹೋಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಕಬ್ಬಿಣದ ರಾಡಿನೊಂದಿಗೆ ಹಲ್ಲೆ ನಡೆಸಲಾಗಿದ್ದು ಮಹಿಳೆ ದಿಲ್ಶಾದ್ ರನ್ನ ಓಟಿ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸರ್ವೆಗೆ ಬಂದ ಮಹಿಳೆಯ ದಾಳಿಯಿಂದ ತಪ್ಪಿಸಿಕೊಂಡ ದಿಲ್ಶಾದ್ ರಸ್ತೆಗೆ ಬಂದು ಕೂಗಿದ್ದಾರೆ. ನೆರೆಹೊರೆಯವರ ಸಹಾಯದಿಂದ ಮಹಿಳೆಯನ್ನ ಹಿಡಿದು 112 ಗೆ ಕರೆ ಮಾಡಲಾಗಿದೆ.
ನಂತರ ಮಹಿಳೆಯನ್ನ ದೊಡ್ಡಪೇಟೆ ಠಾಣೆಗೆ ಒಪ್ಪಿಸಲಾಗಿದೆ. ಈ ಘಟನೆ ನಡೆದ ನಂತರ ಸ್ಥಳಕ್ಕೆ ತಹಶೀಲ್ದಾರ್ ಮತ್ತಿತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪೊಲೀಸರ ತನಿಖೆಯಿಂದ ಸತ್ಯ ಹೊರಬರಬೇಕಿದೆ.
Woman attacked in the name of caste census survey

