ad

ದಕ್ಷ ಎಸ್ಪಿ ಮೇಲೆ ಬಿಜೆಪಿ ಮಹಿಳಾ ಘಟಕ ಗಂಭೀರ ಆರೋಪ-BJP women's unit makes serious allegations against Daksha SP

 SUDDILIVE || SUDDILIVE

ದಕ್ಷ ಎಸ್ಪಿ ಮೇಲೆ ಬಿಜೆಪಿ ಮಹಿಳಾ ಘಟಕ ಗಂಭೀರ ಆರೋಪ-BJP women's unit makes serious allegations against Daksha SP

Sp, daksha

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಮಹಿಳೆಯರ ಮೇಲೆ ಅತಿಹೆಚ್ಚು ದೌರ್ಜನ್ಯ ಹೆಚ್ಚಾಗಿದ್ದು  ರಕ್ಷಣೆಯಿಲ್ಲ ಎಂಬಂತಾಗಿದೆ ಎಂದು ಬಿಜೆಪಿ ಜಿಲ್ಲಾ ಮಹಿಳ ಘಟಕದ ಅಧ್ಯಕ್ಷೆ ಗಾಯಿತ್ರಿ ಮಲ್ಲಪ್ಪ ಆರೋಪ ವ್ಯಕ್ತಪಡಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಸ್ಥಾನ್, ಪ.ಬಂಗಾಳ, ಬಿಹಾರ ಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನೋಡ್ತಾಯಿದ್ವಿ, ಕೇಳ್ತಾಯಿದ್ವಿ ಈಗ ಕರ್ನಾಟಕದಲ್ಲೂ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗಿದೆ ಎಂದು ದೂರಿದರು. 

ರಾಜ್ಯದಲ್ಲಿ 68 ಮಹಿಳೆಯರ ಕೊಲೆ ಪ್ರಕರಣ ನಡೆದಿದೆ. ಬಹಳಷ್ಟು ಬಾರಿ ಬಿಜೆಪಿ ಮಹಿಳಾ ಘಟಕ ಆಕ್ಷೇಪಿಸಿದರೂ ರಾಜ್ಯ ಸರ್ಕಾರ ಕೇಳುವ ಸ್ಥಿತಿಯಲ್ಲಿಯಿಲ್ಲದಂತಾಗಿದೆ. 1400 ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ. 20 ಕ್ಕೈ ಹೆಚ್ಚೂ ಅಧಿಕಾರಿಗಳು ಸಾವು ಕಂಡಿದ್ದಾರಡ.  7 ಜನ ಅಧಿಕಾರಿಗಳು ಆತ್ಮಹತ್ಯೆಯಾಗಿದ್ದಾರೆ. ಶಿವಮೊಗ್ಗದಲ್ಲಿ ವಾಲ್ಮೀಖಿ ನಿಗಮದ ಅಧಿಕಾರಿ ಆತ್ಮಹತ್ತೆ ಮಾಡಿಕೊಂಡಿದ್ದು ಆ ಬಗ್ಗೆ ಸರ್ಕಾರ ತಲೆನೇ ಕೆಡೆಸಿಕೊಂಡಂತೆ ಕಾಣುತ್ತಿಲ್ಲ ಎಂದು ದೂರಿದರು.

15 ಜನ ಗುತ್ತಿಗೆದಾರರು ಆತ್ಮಹತ್ಯೆಯಾಗಿದೆ. 750 ಕ್ಕೂ ಹೆಚ್ಚು ಬಾಣಂತಿಯರ ಸಾವಾಗಿದೆ. 1300 ಕ್ಕೂ ಹೆಚ್ಚು ನವಜಾತ ಶಿಶುಗಳ ಸಾವಾಗಿದೆ. ಎರಡು ವರೆ ವರ್ಷದಿಂದ 5000 ಹೆಣ್ಣು ಭ್ರೂಣ ಹತ್ಯೆಯಾಗಿದೆ.  ಕಾಂಗ್ರೆಸ್ ನ ಸದಸ್ಯರೇ ಡ್ರಗ್ ಕಾರ್ಖಾನೆಯಲ್ಲಿ ಪಾಲ್ಗೊಂಡಿದ್ದಾರೆ. ಸಚಿವರ ಆಪ್ತರು ಡ್ರಗ್ ಪ್ರಕರಣದಲ್ಲಿ ಪತ್ತೆಯಾಗಿದ್ದಾರೆ. ಬಿಜೆಪಿಯ ಸರ್ಕಾರದಲ್ಲಿ ರಸ್ತೆ ನಿರ್ಮಿಸಲಾಗಿತ್ತು. ಅದರ ನಿರ್ವಾಹಣೆಯನ್ನೂ ಕಾಂಗ್ರೆಸ್ ಮಾಡಲಿಲ್ಲ ಎಂದು ದೂರಿದರು. 

ಗೃಹಸಚಿವರು ಅಸಮರ್ಪಕರಿದ್ದಾರೆ. ಶಿವಮೊಗ್ಗದಲ್ಲಿ ಚೆಡ್ಡಿಗ್ಯಾಂಗ್ ಕಾಣಿಸಿಕೊಂಡಿದ್ದರೂ ಕ್ರಮ ಕೈಗೊಂಡಿಲ್ಲ. ಎಸ್ಪಿ ಮತ್ತು ಸಿಬ್ಬಂದಿಗಳ ವಿಫಲರಾಗಿದ್ದಾರೆ.  ಮದ್ದೂರು ಮತ್ತು ಇತರೆಡೆಗಳಲ್ಲಿ ಮಹಿಳೆಯರ ಮೇಲೆ ಲಾಠಿ ಪ್ರವಾಹ ನಡೆದಿದೆ. ಯಾವುದೇ ರೈತನಿಗೂ ಪರಿಹಾರದ ಹಣ ನೀಡಿಲ್ಲ. ಆನೆ ತುಳಿತದಿಂದ 25 ಜನ ರಾಜ್ಯದಲ್ಲಿ ನಡೆದಿದೆ ಆದರೆ ಪರಿಹಾರ ನೀಡಿಲ್ಲ. ಜನಗಣತಿಯ ವೇಳೆ ಅಧಿಕಾರಿಗಳಿಗೆ ನೋವಿ ಅನುಭವಿಸಿ ಐವರು ಸಾವು ಕಂಡಿದ್ದಾರೆ. ಇದರಲ್ಲಿ ಮಹಿಳ ಶಿಕ್ಷಕಿಯೂ ಇದ್ದಾರೆ. 

ಇದಕ್ಕೆ ಸೂಕ್ತ ಕಾನೂನು ರೂಪಿಸಬೇಕು. ಯಾವುದೇ ಕುಂದಕೊರತೆಯನ್ನ ಸರ್ಕಾರದ ಸಚಿವರು ಆಲಿಸುತ್ತಿಲ್ಲ. ಇಲಾಖೆ ಅನುದಾನ ಬಳಸಿ ಗ್ಯಾರೆಂಟಿ ಗೆ ಬಳಸಲಾಗುತ್ತಿದೆ ವಿನಃ ಸಾರ್ವಜನಿಕರ ನೋವುಗಳು ಬಗೆಹರಿಸುತ್ತಿಲ್ಲ. ಇದರ ವಿರುಧ್ಧ ಪ್ರತಿಭಟಿಸಲಾಗಿದೆ. ಇನ್ಮುಙದಾದರೂ ಸಾರ್ವಜನಿಜರ ಸಮಸ್ಯೆ ಬಗ್ಗೆ ಗಮನ ಹರಿಸಿ ರಕ್ಷಣೆ ನೀಡಬೇಕೆಂದರು. 

BJP women's unit makes serious allegations against Daksha SP

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close