ಬೆಂಕಿಗೆ ಬೇಕರಿ ಸಂಪೂರ್ಣ ಕರಕಲು- Bakery completely gutted in fire

SUDDILIVE || SHANKARAGHATTA

ಬೆಂಕಿಗೆ ಬೇಕರಿ ಸಂಪೂರ್ಣ ಕರಕಲು- Bakery completely gutted in fire

Fire, gutted

ಕುವೆಂಪು ವಿಶ್ವವಿದ್ಯಾಲಯದ ಮುಂಭಾಗ  ಐಯಂಗಾರ್ ಕೇಕ್ ಮನೆ ಎಂಬ ಬೇಕರಿಗೆ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಬೇಕರಿಯಲ್ಲಿದ್ದ ವಸ್ತುಗಳು ಸಂಪೂರ್ಣ ಸುಟ್ಟು ಹೋಗಿವೆ.

ಶಂಕರಘಟ್ಟ ಮುಖ್ಯ ರಸ್ತೆಯಲ್ಲಿರುವ ಬೇಕರಿಯಲ್ಲಿ ರಾತ್ರಿ 3 ಗಂಟೆ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದೆ. ಅಕ್ಕಪಕ್ಕದ ಮನೆಯವರು, ಸ್ಥಳೀಯರು ಎಚ್ಚರವಾಗಿ ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸುವಷ್ಟರಲ್ಲಿ ಬೇಕರಿ ಸಂಪೂರ್ಣ ಸುಟ್ಟು ಕರಕಲಾಗಿದೆ.


ಬೇಕರಿ ಒಳಗಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ ಎಂದು ತಿಳಿದು ಬಂದಿದೆ. ಶಾರ್ಟ್‌ ಸರ್ಕಿಟ್‌ನಿಂದಾಗಿ ಬೆಂಕಿ ಹೊತ್ತಿರುವ ಶಂಕೆ ಇದೆ. ಭದ್ರಾವತಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ

ಬೇಕರಿ ಮಾಲೀಕರು ಅರಸಿಕೆರೆ ಯವರಾದ ಶ್ರೀಧರ್ ಎಂದು ತಿಳಿದು ಬಂದಿದೆ. ಬಾಡಿಗೆ ಪಡೆದು ನಡೆಸುತ್ತಿದ್ದ ಬೇಕರಿಗೆ ಇಂದು ಬೆಳಗಿನ ಜಾವ ಅವಘಡ ಸಂಭವಿಸಿದೆ.  ಶೆಟರ್ ಒಡೆದು ನೋಡಿದಾಗ ಬೇಕರಿ ರ‌್ಯಾಕ್ಸ್, ಮಿಷನರಿಗಳು, ಫ್ರಿಡ್ಜ್, ಬೇಕರಿ ಐಟಂಗಳು ಸುಟ್ಟು ಕರಕಲಾಗಿದೆ. ಲಕ್ಷ ರೂ. ಸುಟ್ಟುಹೋಗಿದೆ ಎಂದು ಮಾಲೀಕರು ತಿಳಿಸಿದ್ದಾರೆ.

Bakery completely gutted in fire

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close