ad

ಸ್ನೇಹಿತನಿಂದಲೇ 13 ಲಕ್ಷ ರೂ. ವಂಚನೆ-ದೂರು ದಾಖಲು- Rs 13 lakh fraud by friends - complaint filed

 SUDDILIVE || SHIVAMOGGA

ಸ್ನೇಹಿತನಿಂದಲೇ 13 ಲಕ್ಷ ರೂ. ವಂಚನೆ-ದೂರು ದಾಖಲು- Rs 13 lakh fraud by friends - complaint filed   

Fraud, complaint

ಒಟ್ಟಿಗೆ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿದ್ದ ಸ್ನೇಹಿತರಲ್ಲಿ ಹಣದ ವ್ಯವಹಾರದಲ್ಲಿ  ವಂಚನೆ ನಡೆದಿದೆ.  ಕಾಲೇಜಿನ ಸ್ನೇಹಿತನಿಂದ 13‌ಲಕ್ಷ ರೂ. ಹಣ ಪಡೆದು ಡಬ್ಬಲ್ ನೀಡುವುದಾಗಿ ವಂಚಿಸಿದ ಪ್ರಕರಣ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಎಅಪ್ಐಆರ್ ದಾಖಲಾಗಿದೆ. 

ನಗರದ ಪ್ರತಿಷ್ಠಿತ ಇಂಜಿನಿಯರ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮಧು ಮತ್ತು ಆಕಾಶ್ ತಾಂತ್ರಿಕ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಇಬ್ಬರಿಗೂ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿದೆ. ರಜೆ ಬಂದಾಗಲೆಲ್ಲ ಇಬ್ವರೂ ಊರಿಗೆ ಬರುವುದು ಮತ್ತು ಪರಸ್ಪರ ತಮ್ಮ ಮನೆಗಳಿಗೆ ಹೋಗಿ ಬರುವುದನ್ನ ರೂಢಿಯಲ್ಲಿದ್ದಿದ್ದರಿಂದ ಮನೆ ಮಂದಿಯವರೆಲ್ಲ ಇವರಿಗೆ ಪರಿಚಯವಿದ್ದಿದ್ದಾರೆ. 

ಒಮ್ಮೆ ಸ್ನೇಹಿತ ಮಧು  ಆಕಾಶ್ ಬಳಿ 25 ಸಾವಿರ ರೂ. ಹಣವನ್ನ ಹಾಕಿಸಿಕೊಂಡು 28 ಸಾವಿರ ರೂ. ಹಿಂದಿರುಗಿಸಿದ್ದ. ಇಂದರಿಂದ ನಂಬಿಕ ಆಕಾಶ್ 13 ಲಕ್ಷ ರೂ. ಹಣವನ್ನ ಹಂತ ಹಂತವಾಗಿ ಮಧುವಿನ ಮತ್ತು ಅವರ ತಾಯಿಯ ಬ್ಯಾಂಕ್ ಖಾತೆಗೆ  ಹಾಕಿದ್ದಾರೆ. ಯಾವ ಹಣವೂ ಬಾರದೆ ಹಿನ್ನಲೆಯಲ್ಲಿ ಮಧು ಹೇಳುತ್ತಿದ್ದ ಫೈನಾನ್ಸ್ ನ್ನ ಆಕಾಶ್ ಹುಡುಕಿದ್ದಾರೆ. 

ಮಧು ಎಲ್ಲೂ ಹಣ ತೊಡಗಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಆಕಾಶ್ ಭದ್ರಾವತಿಯಲ್ಲಿದ್ದ ಮಧುವಿನ ಮನೆಗೆ ತೆರಳಿ ಹಣ ಕೇಳಿದಾಗ ಉಡಾಫೆ ಉತ್ತರ ಬಂದಿದೆ. ಮತ್ತೊಮ್ಮೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂಬ ಬೆದರಿಕೆಯನ್ನೂ ಹಾಕಲಾಗಿದೆ. ಅಂದು 25 ಸಾವಿರ ರೂ. ಹಣಕ್ಕೆ ಬೆರಳೆಣಿಕೆ ದಿನದ ಒಳಗೆ 28 ಸಾವಿರ ರೂ. ಹಣ ನೀಡಿದ್ದ ಸ್ನೇಹಿತ ಇಂದು 13 ಲಕ್ಷ ರೂ. ಹಣವನ್ನ ಒಂದು ವರ್ಷವಾದರೂ ಅಸಲು ಸಹ ನೀಡಿಲ್ಲವೆಂದು ವಿನೋಬ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

Rs 13 lakh fraud by friends - complaint filed

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close