ಎರಡೂ ಟೋಲ್ ಗಳನ್ನ ಕಿತ್ತೊಗೆಯಬೇಕು. ಟೋಲ್ ಇಟ್ಟುಕೊಂಡು ರೌಡಿಜಂ ಮಾಡುಲಾಗುತ್ತಿದೆ-ಸಂಸದ-Both tolls should be removed

 SUDDILIVE || SHIVAMOGGA

ಎರಡೂ ಟೋಲ್ ಗಳನ್ನ ಕಿತ್ತೊಗೆಯಬೇಕು. ಟೋಲ್ ಇಟ್ಟುಕೊಂಡು ಸರ್ಕಾರ ರೌಡಿಜಂ ಮಾಡಲಾಗುತ್ತಿದೆ-ಸಂಸದ-Both tolls should be removed. The government is committing rowdiness by keeping the tolls - MP

Toll, remove


ಕುಟ್ರಳ್ಳಿ ಟೋಲ್ ವಿರೋಧಿಸಿ ಕರೆದಿರುವ ಬಂದ್ ಗೆ ವ್ಯಾಪಕ ಬೆಂಬಲ ದೊರೆಯುತ್ತಿದ್ದು, ಅದರಂತೆ ಶಿವಮೊಗ್ಗದಲ್ಲಿ ಸಂಸದರು ಟೋಲ್ ತೆರವುಗೊಳಿಸುವ ಬಗ್ಗೆ ಆಗ್ರಹಿಸಿದ್ದಾರೆ. ಟೋಲ್ ತೆರವುಗೊಳಿಸುವಂತೆ ಆಗ್ರಹಿಸಿ ಕರೆಯಲಾಗಿರುವ ಅ.9 ರ ಶಿಕಾರಿಪುರ ಬಂದ್ ಗೆ ತಮ್ಮ ಸಮ್ಮತಿ ಇರುವುದಾಗಿ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ.

ಕುಟ್ರಳ್ಳಿ ಟೋಲ್ ಮತ್ತು  ಸವಳಂಗ ಬಳಿಯ ಕಲ್ಲಾಪುರ ಟೋಲ್ ಗೆ ಕಳೆದ ಒಂದು ವರ್ಷದಿಂದ ಟೋಲ್ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ನೀತಿಗೆಟ್ಟ ಸರ್ಕಾರ ಕೆಎಸ್ ಐಡಿಸಿ ಮೂಲಕ ಎರಡು ತಿಂಗಳು ನಡೆಸಿ ನಂತರ ಅದೇ ಗುತ್ತಿಗೆದಾರನಿಗೆ  ಮರು ಟೆಂಟರ್ ಮಾಡಿಕೊಡಲಾಗಿದೆ. ಬಡವರ ವಿರುದ್ಧ ಈ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಗುಡುಗಿದರು. 

ದಿನ ಶಿರಾಳಕೊಪ್ಪದಿಂದ ಶಿಕಾರಿಪುರದ ತಾಲೂಕು ಕಚೇರಿಗೆ ಬರುವ ಬಡವನಿಗೆ 100 ರೂ. ಬೇಕಿದೆ. ಸೊರಬದಿಂದ ಶಿವಮೊಗ್ಗಕ್ಕೆ ಬರಲು 200 ರೂ. ಕರ್ಚಾಗಲಿದೆ. ನಾನು ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ಇಬ್ಬರೂ ಮೊನ್ನೆ ಪಿಡಬ್ಲೂಡಿ ಸಚಿವ ಸತೀಶ್ ಜಾರಕಿಹೊಳೆ ಬಳಿ ಹೋಗಿ ಟೋಲ್ ಸಮಸ್ಯೆ ಹೇಳಬೇಕೆಂದುಕೊಂಡಿದ್ವಿ. ಸಕ್ಕರೆ ಕಾರ್ಖಾನೆಯ ಚುನಾವಣೆ ಹಿನ್ಬಲೆಯಲ್ಲಿ ಅವರ ಭೇಟಿಯನ್ನ ಕೈ ಬಿಡಲಾಯಿತು ಎಂದರು.


ಎರಡೂ ಟೋಲ್ ಗಳನ್ನ ಕಿತ್ತು ಒಗೆಯಬೇಕು. ಹಾಗಾಗಿ ಅ.9 ರಂದು ಟೋಲ್ ವಿರುದ್ಧ ಕರೆದಿರುವ ಬಂದ್ ಗೆ ನಮ್ಮ ಬೆಂಬಲವಿದೆ. ಸರ್ಕಾರದ ರಕ್ಷಣೆಯಿದೆ ಎಂದು ಟೋಲ್ ನವ ಗೂಂಡಾಗಿರಿ ಮಾಡುತ್ತಿದ್ದಾನೆ. ರಿಟೆಂಡರ್ ಮಾಡಿ ಸರ್ಕಾರ ಜನ ವಿರೋಧಿ ಯಾಗಿ ಸರ್ಕಾರ ಎಂದು ಹೇಳಿದರು. 

Both tolls should be removed

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close