ಚಿಕಿತ್ಸೆ ಫಲಕಾರಿಯಾಗದೆ ಅಮ್ಜದ್ ನಿಧನ-Amjad dies after treatment fails

 SUDDILIVE || SHIVAMOGGA

ಚಿಕಿತ್ಸೆ ಫಲಕಾರಿಯಾಗದೆ ಅಮ್ಜದ್ ನಿಧನ-Amjad dies after treatment fails    

Amjad, dies

ಅ.2 ನೇ ತಾರೀಕು ಎನ್ ಟಿ ರಸ್ತೆಯಲ್ಲಿ ನಡೆದ ಮಾರಣಾಂತಿಕ ಹಲ್ಲೆಯಲ್ಲಿ ತೀವ್ರಗಾಯಗೊಂಡು ಮ್ಯಾಕ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಆರ್ ಎಂಎಲ್ ನಗರದ ನಿವಾಸಿ ಅಮ್ಜದ್ ಚಿಕಿತ್ಸೆ ಫಲಕಾರಿಯಾಗದೆ ಸಾವುಕಂಡಿದ್ದಾರೆ. 

ಅಮ್ಜದ್ ಮೇಲೆ ಹಲ್ಲೆ ಒಂದು ವ್ಯಾಗನರ್ ಮತ್ತು ಬೈಕ್ ನಲ್ಲಿ ಬಂದ ಯುವಕರ ಗುಂಪೊಂದು ಮಾರಕಾಸ್ತಗಳಿಂದ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಹೋಗಿತ್ತು. ಅಮ್ಜದ್ ಅವರನ್ನ ಮೆಗ್ಗಾನ್ ಗೆ ದಾಖಲಿಸಿ ನಂತರ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಹಲ್ಲೆಯಾಗಿ ಮೂರು ದಿನಗಳ ನಂತರ ಅಮ್ಜದ್ ಚಿಕಿತ್ಸೆ ಪಲಕಾರಿಯಾಗದೆ ಸಾವುಕಂಡಿದ್ದಾರೆ. ಅಮ್ಜದ್ (38)  ಮೇಲೆ ಹಲ್ಲೆಗೆ ಹಣದ ವಿಚಾರದಲ್ಲಿ ಎಂದು ಹೇಳಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಐವರನ್ನ ಪೊಲೀಸರು ಬಂಧಿಸಿ ನಿನ್ನೆ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. 

ಮ್ಯಾಕ್ಸ್ ಆಸ್ಪತ್ರೆಯ ಬಳಿ ನಿನ್ನೆ ರಾತ್ರಿಯಿಂದಲೇ ಅಮ್ಜದ್ ಕಡೆಯವರು ನಿಯೋಜನೆಗೊಂಡಿದ್ದರು. ಇಂದು ಆತನ ಸಾವು ಕುಟುಂಬ ಮತ್ತು ಸ್ನೇಹಬಳಗದಲ್ಲಿ ಗರಬಡಿದಂತೆ  ಸುದ್ದಿ ಎರಗಿ ಬಂದಿದೆ. 


ಇಂದು ಮ್ಯಾಕ್ಸ್ ನಿಂದ ಮೆಗ್ಗಾನ್ ಆಸ್ಪತ್ರೆಗೆ ಅಮ್ಜದ್ ನ ಮೃತದೇಹವನ್ನ ಸಾಗಿಸಲಾಗಲು ಸಿದ್ದತೆ ನಡೆದಿದೆ. ನಂತರ ಮನೆಗೆ ತೆಗೆದುಕೊಂಡು ಹೋಗಿ ಧಾರ್ಮಿಕ ವಿಧಿವಿಧಾನದಂತೆ ಶಿವಮೊಗ್ಗದ ಬಸ್ ನಿಲ್ದಾಣದ ಬಳಿಯಿರುವ ಸ್ಮಶಾನದಲ್ಲಿ ಆತನ ಅಂತ್ಯಕ್ರಿಯೆ ನಡೆಯುವ ನಿರೀಕ್ಷೆಯಿದೆ. ಅಪರಾಧದ ಸಮಯದಲ್ಲಿ ಅಮ್ಜದ್ ಪೊಲೀಸರಿಗೆ ಒಳ್ಳೆಯ ಮಾಹಿತಿದಾರನೂ ಆಗಿದ್ದರು. 

ಬಿಗಿ ಬಂದೋ ಬಸ್ತ್



ಮ್ಯಾಕ್ಸ್ ಆಸ್ಪತ್ರೆಯ ಬಳಿ‌ಪೊಲೀಸ್ ಬಂದೋಬಸ್ ಮಾಡಲಾಗಿದೆ. ಅಮ್ಜದ್ ಮೃತದೇಹವನ್ನ ಅಂಬ್ಯುಲೆನ್ಸ್ ನಲ್ಲಿ ಮೆಗ್ಗಾನ್ ಗೆ ಸಾಗಿಸಲಾಗುತ್ತಿದೆ. ನಂಜಪ್ಪ ಕಡೆಯಿಂದ ಮತ್ತು ಸರ್ಜಿ ಕಡೆಯಿಂದ ಬರುವ ರಸ್ತೆಯನ್ನ ಬಂದ್ ಮಾಡಲಾಗಿದೆ. 


ಎಫ್ಐಆರ್ ನಲ್ಲಿ ಏನಿದೆ 

ಮೊಹಮದ್ ಶೋಯೆಬ್ ಯಾನೆ ಎಂದ್ರಿಲಾನ ಗ್ಯಾಂಗ್  ಅಮ್ಜ್ ಮಾಡಿರುವುದಾಗಿ ದೂರು ದಾಖಲಾಗಿದೆ. ಅಮ್ಜದ್ ಅವರು ಕೇರಂ ಕ್ಲಬ್ ಎನ್ ಟಿ ರಸ್ತೆಯ ಬಳಿಯಿದೆ. ಎಂದ್ರಿಲಾ ಮತ್ತು ಸಂತೂ ನಡೆಉವೆ ನಡೆದ  ಕೇರಂ ಆಟದಲ್ಲಿ ಎಂದ್ರಿಲಾ ಸೋತಿದ್ದಾನೆ. ಎಂದ್ರಿಲಾ ಸಂತು ಬಳಿ ಹಣ ಕಳೆದುಕೊಂಡ ಕಾರಣ ಜಗಳವಾಡಿರುವುದಾಗಿ ದೂರಿನಲ್ಲಿ ಉಲ್ಲೇಖವಾಗಿದೆ, ಸಂತೂ ಈ ವಿಷಯವನ್ನ  ಅಮ್ಜದ್ ಗೆ ತಿಳಿಸಿದ್ದಾನೆ. ಅಮ್ಜದ್ ಎಂದ್ರಿಲಾಗೆ  ಕರೆಮಾಡಿ ಬೈದಿದ್ದಾನೆ. ಎಂದ್ರಿಲಾ ಸ್ನೇಹಿತರ ಬಳಿ ಅಮ್ಜದ್ ಬೈದಿದ್ದನ್ನ ಹಂಚಿಕೊಂಡು ಅಮ್ಜದ್ ಗೆ ಹೆದರಿಸುವುದಾಗಿ ಪ್ಲ್ಯಾನ್ ಮಾಡಿದ್ದಾರೆ.  

ಗೌರ್ನರ್ ಎಂಬಾತನ ಬಳಿ ಹೋದ ಗ್ಯಾಂಗ್ ಲಾಂಗನ್ನ ಪಡೆದು ಎಂದ್ರಿಲಾ ಸ್ನೇಹಿತನ ಬಳಿಯಿಂದ ವ್ಯಾಗನರ್ ವಾಹನ ಪಡೆದು ತಂದಿದ್ದ ವಾಹನದಲ್ಲಿ ಐದು ಜನರನ್ನ ಕರೆದುಕೊಂಡು ಭಾರತ್ ಫೌಂಡರಿ ಬಳಿ ಬಂದಿದ್ದಾನೆ. ಅಲ್ಲಿ ಅಮ್ಜದ್ ಬೈಕ್ ನಲ್ಲಿ ಬರುತ್ತಿದ್ದಾಗ  ದಾಳಿ ನಡೆಸಿರುವುದಾಗಿ ಎಫ್ಐಆರ್ ಆಗಿದೆ. 

Amjad dies after treatment fails    

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close