SUDDILIVE || SHIVAMOGGA
ಸಿಂದೂರ, ಸಾವರ್ಕರ್, ಅಯೋದ್ಯ ಪಟಾಕಿ ಮಳಿಗೆಗಳಲ್ಲಿ ವ್ಯಾಪಾರ ಬಿರುಸು-Business booms at Sindoor, Savarkar, Ayodhya firecracker shops
ದೀಪಾವಳಿ ಹಿನ್ನೆಲೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಪಟಾಕಿ ವ್ಯಾಪಾರ ಆರಂಭವಾಗಿದೆ. ಬೆಳಗ್ಗೆಯಿಂದಲೆ ಗ್ರಾಹಕರು ಪಟಾಕಿ ಖರೀದಿ ಮಾಡುತ್ತಿದ್ದು, ವ್ಯಾಪಾರ ಬಿರುಸಾಗಿದೆ.
ಫ್ರೀಡಂ ಪಾರ್ಕ್‌ನಲ್ಲಿ ಮೂರು ಪ್ರತ್ಯೇಕ ಲೇನ್‌ಗಳಲ್ಲಿ 94 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಕಳೆದ ವರ್ಷ 74 ಅಂಗಡಿಗಳ ಮಳಿಗೆ ಕೂರಿಸಲಾಗಿದ್ದರೂ 66 ಮಳಿಗೆ ಮಾತ್ರ ವ್ಯಾಪಾರಕ್ಕಿಳಿದಿದ್ದವರು. ಈ ವರ್ಷ 94 ಅಂಗಡಿಗಳೂ ವ್ಯಾಪಾರ ನಡೆಸುತ್ತಿವೆ. ನಿನ್ನೆಯಿಂದ ಆರಂಭಗೊಂಡ ವ್ಯಾಪಾರ ವಹಿವಾಟು ಇಂದು ಬೆಳಗ್ಗೆಯಿಂದಲೆ ಪಟಾಕಿ ವಹಿವಾಟು ಆರಂಭವಾಗಿದೆ. ಸಿಂದೂರ, ಸಾವರ್ಕರ್, ಅಯೋದ್ಯ ಹೆಸರಿನಲ್ಲಿ ಪಟಾಕಿ ಮಾರಾಟ ಮಳಿಗೆಗಳಲ್ಲಿ ವ್ಯಾಪಾರ ಬಿರುಸಾಗಿದೆ.
ಹಸಿರು ಪಟಾಕಿ ಮಾರಾಟ ಕಡ್ಡಾಯಗೊಳಿಸಿರುವ ಹಿನ್ನೆಲೆ ಎಲ್ಲ ಅಂಗಡಿಗಳಲ್ಲು ಅವುಗಳನ್ನೆ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರು ಕೂಡ ಹಸಿರು ಪಟಾಕಿ ಕೇಳಿ ಖರೀದಿ ಮಾಡುತ್ತಿದ್ದಾರೆ. ಈ ಬಾರಿ ಬಿಡಿ ಪಾಟಕಿಗಿಂತಲು ಬಾಕ್ಸ್‌ಗಳಿಗೆ ಹೆಚ್ಚು ಡಿಮಾಂಡ್ ಇದೆ ಅನ್ನುತ್ತಾರೆ ವ್ಯಾಪಾರಿಗಳು.
ಒಂದು ಸಾವಿರ ರುಪಾಯಿಯಿಂದ ಪಟಾಕಿ ಬಾಕ್ಸ್‌ಗಳು ಲಭ್ಯವಿವೆ. ಹೆಚ್ಚು ಐಟಂಗಳಿದ್ದರೆ ಬಾಕ್ಸ್ ದರ ದುಬಾರಿಯಾಗಲಿದೆ. ಲಕ್ಷ್ಮೀ ಪಟಾಕಿ ಬಂಡಲ್ 300 ರೂವಿನಿಂದ 1000 ರೂ. ಗೂ ಹೆಚ್ಚು ಮಾರಾಟವಾಗುತ್ತಿದೆ. ಸಣ್ಣ ಫ್ಯಾಮಿಲಿ ಪಟಾಕಿ ಬಾಕ್ಸ್ 950 ರೂ.ನಿಂದ 1650 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಸಣ್ಣ ಫ್ಯಾಮಿಲಿ ಪ್ಯಾಕ್ ನಲ್ಲಿ 50 ಪಟಾಕಿಗಳು, ದೊಡ್ಡ ಫ್ಯಾಮಿಲಿ ಪ್ಯಾಕ್ ನಲ್ಲಿ 71 ಪಟಾಕಿಗಳು ಲಭ್ಯವಾಹುತ್ತಿದೆ.
ಇನ್ನು, ಬಿಡಿ ಪಟಾಕಿ ಮಾರಾಟವು ಸಾಮಾನ್ಯವಾಗಿದೆ. ಲಕ್ಷ್ಮಿ ಪಟಾಕಿ, ಬಿಜಲಿ, ಸುರ್‌ಸುರ್ ಬತ್ತಿ, ಹೂವಿನ ಕುಂಡ, ಹೈಡ್ರೋ ಬಾಂಬ್, ರಾಕೆಟ್‌ಗಳು, ವಿವಿಧ ಕಾರ್ಟೂನ್ ಮಾದರಿಯ ಪಟಾಕಿಗಳು ಹೆಚ್ಚಾಗಿ ಬಿಡಿ ಮಾರಾಟ ಮಾಡಲಾಗುತ್ತಿದೆ.
ಪ್ರತಿವರ್ಷದಂತೆ ಈ ವರ್ಷವೂ ಸುರಕ್ಷತೆಯ ದೃಷ್ಠಿಯಿಂದ ಪ್ರತಿ ಅಂಗಡಿಯ ಎದುರು ಬಕೆಟ್, ನೀರು ಇಡಲಾಗಿದೆ. ಇನ್ನೂ ಆರಂಭದ ದಿನವಾದುದರಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಬಜಾರ್ ನಲ್ಲಿ ಖರೀದಿ ಜೋರು
ಹಬ್ಬದ ಹಿನ್ಬಲೆಯಲ್ಲಿ ಗಾಂಧಿ ಬಜಾರ್ ನಲ್ಲಿ ಖರೀದಿ ಜೋರಾಗಿದೆ. ಹೂವು, ಹಣ್ಣು ಹಣತೆಗಳ ಮಾರಾಟ ಜೋರಾಗಿದೆ. ಮಧ್ಯಾಹ್ನದ ಹೊತ್ತಿಗೆ ಬಜಾರ್ ನಲ್ಲಿ ಕಾಲಿಡದಷ್ಟು ಜನರ ದಟ್ಟಣೆ ಜೋರಾಗಿದೆ. ದ್ವಿಚಕ್ರ ವಾಹನ ಹೊರತುಪಡಿಸಿ ಇತರೆ ವಾಹನಗಳ ನಿರ್ಬಂಧ ರದ್ದುಗೊಳಿಸಲಾಗಿದೆ. ವೀರಶೈವ ಕಲ್ಯಾಣ ಮಂದಿರದಿಂದ ಬಿಹೆಚ್ ರಸ್ತೆಯ ಎಸ್ ಎನ್ ವೃತ್ತದ ಮೂಲಕ ಬಜಾರ್ ಗೆ ಹೋಗಲು ಬ್ಯಾರಿಕೇಡ್ ಹಾಕಲಾಗಿದೆ.
Business booms at Sindoor, Savarkar, Ayodhya firecracker shops