SUDDILIVE || SHIVAMOGGA
ಜಿಲ್ಲೆಯ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸಲು "ಕಾಯಕ ಸೇತು" ಜಾಬ್ ಪೋರ್ಟಲ್ ಲೋಕಾರ್ಪಣೆ- "Kayaka Setu" job portal launched
ರಾಜ್ಯದಲ್ಲಿ 4,430 ಪದವಿ ಕಾಲೇಜುಗಳು ಹಾಗೂ 26 ವಿಶ್ವವಿದ್ಯಾಲಯಗಳಿವೆ. ಪ್ರತಿ ವರ್ಷ ಸುಮಾರು 3 ಲಕ್ಷ ವಿದ್ಯಾರ್ಥಿಗಳು ಪದವಿ ಮುಗಿಸಿ ಹೊರಬರುತ್ತಾರೆ. ಬಹುತೇಕರು ಉದ್ಯೋಗದ ಭಾಗ್ಯ ಕಾಣದೆ ಪರಿತಪಿಸುತ್ತಾರೆ. ನಿರುದ್ಯೋಗದ ಸಮಸ್ಯೆ ಕರ್ನಾಟಕದ ಯುವಕ-ಯುವತಿಯರಿಗೆ ಅತಿಯಾಗಿ ಬಾಧಿಸುತ್ತಿದೆ. ಕೆಲವರು ತಮ್ಮ ಓದಿಗೆ ಸಂಬಂಧವೇ ಇಲ್ಲದ ಕೆಲಸ ಪಡೆದು ಹೊಟ್ಟೆ ಪಾಡು ಸಾಗಿಸುತ್ತಿದ್ದರೆ, ಇನ್ನು ಕೆಲವರು ಮತ್ತೆ ಊರಿನ ದಾರಿ ಹಿಡಿಯುತ್ತಿದ್ದಾರೆ. ವಿದ್ಯಾರ್ಹತೆಗೆ ತಕ್ಕ ಉದ್ಯೋಗವಿಲ್ಲ. ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯ ಪದವೀಧರ ಯುವಕ ಯುವತಿಯರಿಗೆ ಜಿಲ್ಲೆಯ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ಕಲ್ಪಿಸಿಕೊಡಬೇಕು ಹಾಗೂ ಅವರಿಗೊಂದು ವೇದಿಕೆ ನಿರ್ಮಾಣ ಮಾಡಬೇಕೆಂದು ಶಿವಮೊಗ್ಗ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ "ಕಾಯಕ ಸೇತು" ಎಂಬ ಉಚಿತ ಜಾಬ್ ಪೋರ್ಟಲ್ ನಿರ್ಮಿಸಿ ಉದ್ಯೋಗ ಕಲ್ಪಿಸಿಕೊಡುವ ಮಹತ್ತರವಾದ ಕಾರ್ಯವನ್ನು ಡಾ. ಧನಂಜಯ ಸರ್ಜಿಯವರು ತಮ್ಮ ಎಂ ಎಲ್ ಸಿ ಸಂಪರ್ಕ ಕಚೇರಿಯಿಂದ ಮಾಡುತ್ತಿದ್ದಾರೆ. ಮುಂದೆ ಇದನ್ನು ತಮ್ಮ ಕ್ಷೇತ್ರದ ಉಳಿದೆಲ್ಲ ಜಿಲ್ಲೆಗಳಿಗೂ ವಿಸ್ತರಿಸಿ ನಂತರ ಅವಶ್ಯಕತೆ ಇದ್ದಲ್ಲಿ ರಾಜ್ಯಾದ್ಯಂತ ವಿಸ್ತರಿಸುವ ಯೋಜನೆ ಅವರ ಮುಂದಿದೆ.
ಸ್ಥಳೀಯ ಪ್ರತಿಭೆಗಳಿಗೆ ಸ್ಥಳೀಯವಾಗಿ ಉದ್ಯೋಗ ದೊರಕಿಸುವ ಹಾಗು ಅಭ್ಯರ್ಥಿಗಳಲ್ಲಿ ಇರುವ ತಾಂತ್ರಿಕತೆ ಮತ್ತು ಕೌಶಲ್ಯದ ಕೊರತೆಯನ್ನು ಗಮನಿಸಿ ಅವುಗಳನ್ನು ಬಲಪಡಿಸುವ ಕೆಲಸವೂ ಕೂಡ ಡಾ. ಧನಂಜಯ ಸರ್ಜಿಯವರ ಕಚೇರಿಯು ನಿರ್ವಹಿಸಲಿದೆ. ವಿಶೇಷವಾದ ಈ ಪ್ರಯತ್ನವು ಉದ್ಯೋಗ ನೀಡುವವರಿಗೂ ಉದ್ಯೋಗ ಬಯಸುವವರಿಗೂ ಉಚಿತವಾಗಿರಲಿದೆ.
ಜಾಬ್ ಪೋರ್ಟಲ್ ಹೇಗೆ ಕಾರ್ಯ ನಿರ್ವಹಿಸುತ್ತದೆ.
ಶಿವಮೊಗ್ಗದ ಎಲ್ಲಾ ಪ್ರತಿಷ್ಠಿತ ಸಂಸ್ಥೆಗಳ ಹೆಚ್.ಆರ್ ಗಳು ಈ ಜಾಬ್ ಪೋರ್ಟಲ್ ಅಲ್ಲಿ ಉದ್ಯೋಗದ ಮಾಹಿತಿ ಹಂಚಿಕೊಳ್ಳುತ್ತಾರೆ.
ಪದವೀಧರರು ತಮ್ಮ ರೆಸ್ಯುಮ್ ಅಥವಾ ಸಿ.ವಿ ಯನ್ನು (ವೈಯಕ್ತಿಕ ವಿವರ) ಹಿಡಿದು ಸಂಸ್ಥೆಗಳಿಗೆ ತಿರುಗಾಡುವ ಬದಲು ಈ ಜಾಬ್ ಪೋರ್ಟಲ್ ಅಲ್ಲಿ ತಮ್ಮ ರೆಸ್ಯುಮ್ ಅಥವಾ ಸಿ.ವಿಯನ್ನು ಅಪ್ಲೋಡ್ ಮಾಡಿದರೆ ವಿದ್ಯಾರ್ಹತೆಗೆ ತಕ್ಕ ಉದ್ಯೋಗಕ್ಕಾಗಿ ಪ್ರತಿಷ್ಠಿತ ಸಂಸ್ಥೆಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಆಯ್ಕೆಯಾದ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಜಾಬ್ ಪೋರ್ಟಲ್ ಅಲ್ಲಿ ಎಲ್ಲ ಹೆಚ್.ಆರ್‌ಗಳಿಗೆ ಮಾಹಿತಿ ರವಾನೆಯಾಗುತ್ತದೆ.ಆಯ್ಕೆಯಾಗದ ಅಭ್ಯರ್ಥಿಗಳಲ್ಲಿ ಯಾವ ಕೌಶಲ್ಯದ ಕೊರತೆ ಇದೆ ಎಂದು ಪರಿಗಣಿಸಿ ಅವರನ್ನು ಸರ್ಜಿ ಫೌಂಡೇಶನ್ ವತಿಯಿಂದ ಆ ಕೌಶಲ್ಯಗಳನ್ನೂ ಕಲಿಸುವ ಚಿಂತನೆಯನ್ನು ಕೂಡ ಮಾಡಲಾಗಿದೆ.
ಕೇವಲ ರೆಸ್ಯುಮ್ ಅಪ್ಲೋಡ್ ಮಾಡಿ ವರ್ಷವಾದರೂ ಅದನ್ನು ಅಷ್ಟೇಟ್ ಮಾಡದೇ ಹಾಗೆ ಉಳಿದಿರುವುದನ್ನು ಸಾಕಷ್ಟು ಪಾವತಿ ಜಾಬ್ ಪೋರ್ಟಲ್ ಗಳಲ್ಲಿ ನೋಡಿದ್ದೇವೆ. ಆದ್ದರಿಂದ ಈ ಕಾಯಕ ಸೇತು ಜಾಬ್ ಪೋರ್ಟಲ್ ಅಲ್ಲಿ ಆಯ್ಕೆ ಆಗದೆ ಹಾಗೆ ಉಳಿದ ಅಭ್ಯರ್ಥಿಗಳು ಪ್ರತಿ 6 ತಿಂಗಳಿಗೊಮ್ಮೆ ತಮ್ಮ ಪ್ರೊಫೈಲ್ ಅಷ್ಟೇಟ್ ಮಾಡಬೇಕು. ಆನ್ ಲೈನ್ ಎಂಟ್ರೆನ್ಸ್ ಟೆಸ್ಟ್ ಮುಖಾಂತರ ಅಭ್ಯರ್ಥಿಯ ಆಯ್ಕೆಗೆ ಅವಕಾಶವಿರುತ್ತದೆ.
"Kayaka Setu" job portal launched