ಕೆಪಿಎಸ್ ಶಾಲೆ ಉದ್ಘಾಟನೆಗೆ ಸಿಎಂ, ಶಿವಮೊಗ್ಗದಲ್ಲೇ ನಡೆಯಲಿದೆ ಕಾರ್ಯಕ್ರಮ-ಸಚಿವ ಮಧು ಬಂಗಾರಪ್ಪ-CM to inaugurate KPS school, program to be held in Shivamogga - Minister Madhu Bangarappa

 SUDDILIVE || SHIVAMOGGA

ಕೆಪಿಎಸ್ ಶಾಲೆ ಉದ್ಘಾಟನೆಗೆ ಸಿಎಂ, ಶಿವಮೊಗ್ಗದಲ್ಲೇ ನಡೆಯಲಿದೆ ಕಾರ್ಯಕ್ರಮ-ಸಚಿವ ಮಧು ಬಂಗಾರಪ್ಪ-CM to inaugurate KPS school, program to be held in Shivamogga - Minister Madhu Bangarappa

Madhu, Bangarappa


3000 ಕೋಟಿ ವೆಚ್ಚದಲ್ಲಿ 800 ಕೆಪಿಎಸ್ ಶಾಲೆಗಳನ್ನ ಸಿದ್ದತೆ ಮಾಡಿಕೊಳ್ಳಲಾಗುತ್ತಿದ್ದು ನವೆಂಬರ್ ತಿಂಗಳ ಎರಡನೇ ವಾರದಲ್ಲಿ ಸಿಎಂ ಮೂಲಕ ಉದ್ಘಾಟನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018 ರಲ್ಲಿ ಈ ಶಾಲೆ ಆರಂಭವಾದರೂ ಯಾವುದೇ ಕಾರ್ಯಕ್ರಮಗಳು ನಡೆದಿಲ್ಲ. ಕೆಲ ಕೆಪಿಎಸ್ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಿವೆ. ಕೆಲವೊಂದಕ್ಕೆ ಇಲ್ಲ. ಪಿಯು, ಹಿರಿಯ, ಪ್ರಾಥಮಿಕ ಶಾಲೆ ಸೇರಿಸಿ ಒಙದೇ ಸೂರಿನಡಿ ತರಲಾಗುತ್ತದೆ.  ಪ್ರತಿ ವಿಧಾನ ಸಭೆ ಕ್ಷೇತ್ರದಲ್ಲಿ ಕನಿಷ್ಠ 3 ಕೆಪಿಎಸ್ ಶಾಲೆ ಆರಂಭಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕದಲ್ಲಿ 9 ಶಾಲೆಗಳು ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕವನ್ನ ಕರಾವಳಿ ಕರ್ನಾಟಕದ ಮಕ್ಕಳ ಮಟ್ಟಕ್ಕೆ ಫಲಿತಾಂಶ  ನಿರೀಕ್ಷಿಸಬಹುದಾಗಿದೆ. ಈ ಕಾರ್ಯಕ್ರಮವನ್ನ ನವೆಂಬರ್ ತಿಂಗಳ ಎರಡನೇವಾರದಲ್ಲಿ ಸಿಎಂ ಸಿದ್ದರಾಮಯ್ಯರನ್ನ ಕರೆತಂದು ಶಿವಮೊಗ್ಗದಿಂದಲೇ ಚಾಲನೆ ನೀಡಲಿದ್ದೇವೆ ಎಂದರು. 

ಕೆಪಿಎಸ್ ಶಾಲೆಗೆ ಸೇರಲು ಮಕ್ಕಳಿಗೆ ಗೌರ್ನಿಂಗ್ ಕೌನ್ಸಿಲ್ ಮೂಲಕ ಸೇರ್ಪಡೆ ಮಾಡಲು ಯೋಚಿಸಲಾಗುತ್ತಿದೆ. ಈಗಿನ ಕೆಪಿಎಸ್ ಶಾಲೆಗಳಲ್ಲಿ ಎಂಟ್ರೆನ್ಸ್ ಪರೀಕ್ಷೆಯಿದೆ. ಈ ಶಾಲೆಗಳನ್ನ ರನ್ನಿಂಗ್ ಮಾಡುವ ಬಗ್ಗೆ ನಿಯಮಗಳು ಇಲ್ಲ. ನಾವು ತರುತ್ತಿದ್ದೇವೆ ಎಂದರು. 

ಸಮೀಕ್ಷೆಯನ್ನ 92.12 ರಷ್ಟು ಮುಗಿಸಲಾಗಿದೆ. ಮೀಟರ್ ಲೆಕ್ಕ ತೆಗೆದುಕೊಂಡರೆ ಹೆಚ್ಚಾಗಲಿದೆ.  ಇನ್ನುಮುಂದೆ ಶಿಕ್ಷಕರು ಬೇಕೆಂದಿಲ್ಲ ಪಾಲಿಕೆ ಅಧಿಕಾರಿ ಮತ್ತಿತರನ್ನ ಬಳಸಿಕೊಳ್ಳಬಹುದು ಎಂದರು.  

ಇಂಡಸ್ಟ್ರಿಯಲ್ ಗಳು ಸರ್ಕಾರದ ಜೊತೆ ಕೈಜೋಡಿಸಿ ಡೇಟಾ ನೀಡಿದಾಗ ಮಾತ್ರ ಯೋಜನೆಗಳು ಮತ್ತು ಇತರೆ ಸೌಲಬ್ಯಗಳು ಲಭ್ಯವಾಗಲಿದೆ. ಜಿಲ್ಲೆಯಲ್ಲಿ ಭಾಗಿಯಾಗದವರು ಸರ್ಕಾರದ ಜೊತೆ ಮಾಹಿತಿ ಹಂಚಿಕೊಳ್ಳಿ ಎಂದು ಹೇಳಿದರು. ಕಳೆದ ಬಾರಿ ಸಮೀಕ್ಷೆ ಹೆಚ್ಚಾಗಿದೆ. ಶಿಕಾರಿಪುರದಲ್ಲಿ 97.4% ಮುಗಿಸಲಾಗಿದೆ. 

ಟೋಲ್ ಗೆ ಅನುಮತಿ ನೀಡಿ ಮತ್ತೆ ಅದರ ವಿರುದ್ಧ ಹೋರಾಡುವಂತೆ ಮಾಡುವುದು ಬಿಜೆಪಿಗರ ಕೆಲಸವೆಂದು ಕುಟ್ಟಳ್ಳಿ ಟೋಲ್ ಹೆಸರನ್ನ‌ಹೇಳದೆ ತಿರುಗೇಟು ನೀಡಿದರು. ನಿನ್ನೆಗೆ ಟೀಚರ್ಸ್ ಬೇಡ ಎಂದು ಸಿಎಂ ತೀರ್ಮಾನಿಸಿದ್ದಾರೆ. 220 ದಿನಗಳು ಶಿಕ್ಷಣ ನೀಡಬೇಕೆಂಬ ನಿಯಮವಿದೆ ಈಗ ನಮ್ಮ ಕೈಯಲ್ಲಿ 229 ದಿನಗಳು ಇದೆ ಪ್ರತಿಭಟನೆ ಮತ್ತಿತರ ರಜೆಗಳು ಬಂದರೆ ತಾಳೆಯಾಗಲಿದೆ ಎಂದ ಅವರು ನಿಮಗೆ ನೀಡಿದ ಸ್ವಾತಂತ್ರ್ಯವನ್ನ ಸದ್ಬಳಕೆ ಮಾಡದಿದ್ದರೆ ನೀವೆ ವಿರೋಧಿಯಾಗುತ್ತೀರಿ ಎಂದರು. 

13 ಸಾವಿರ ಸರ್ಕಾರಿ ಶಿಕ್ಷಕರ ಕೆಲಸಕ್ಕೆ ತೆಗೆದುಕೊಳ್ಳಲು ನೋಟಿಫಿಕೇಷನ್ ಹೊರಡಿಸಲಾಗಿದೆ. ಅ. 23 ರಿಂದ ಅರ್ಜಿ ಸಲ್ಲಿಸಲು ಅವಕಾಶವಿದೆ ಡಿ.7 ರಂದು ಟಿಇಟಿ ಪರೀಕ್ಷೆ ನಡೆಯಲಿದೆ. ಇದರ ಮೂಲಕ ಸಿದ್ದರಾಮಯ್ಯ ಟೀಕಾಕಾರಿಗೆ ಉತ್ತರ ನೀಡಿದ್ದಾರೆ. ಕಳೆದ ಸರ್ಕಾರ ಟೀಚರ್ಸ್ ಗಳೆ ಇಲ್ಲವಾಗಿತ್ತು. ನಾವು 51 ಸಾವಿರ ಗೆಸ್ಟ್ ಲೆಕ್ಚರ್ ನ್ನ ತೆಗದುಕೊಳ್ಳಲಾಗಿದೆ. ಕಾಪಿ ಹೊಡೆಯುವುದನ್ನ, ಹೆಚ್ಚಿನ ಅಂಕ ಬರುವಂತೆ ನೋಡಿಕೊಂಡಿದ್ದೇವೆ. ಎರಡು ವರ್ಷದ  ಒಳಗೆ 14 ಸಾವಿರ ಟೀಚರ್ಸ್ ತೆಗೆದುಕೊಂಡಿದ್ದೇವೆ.

ಕಳೆದ ಸರ್ಕಾರ 4 ಸಾವಿರ ಟೂಚರ್ರ್ಸ್ ತೆಗೆದುಕೊಂಡಿದ್ದಾರೆ. ಅನುದಾನಿತ ಶಾಲೆಗಳಿಗೂ 6 ಸಾವಿರ ಶಿಕ್ಷಕರನ್ನ ತೆಗೆದುಕೊಳ್ಳಲು ಅವಕಾಶ ಮಾಡಿಕೊಡುತ್ತೇವೆ. ಪಾಸಿಂಗ್ ಮಾರ್ಕ್ 33 ಇರಲಿ ಎಂದು 708 ಪತ್ರಗಳು 35 ಮಾರ್ಕ್ಸ್  ಗೆ 8 ಪತ್ರಗಳು ಬಂದಿವೆ. ರಾಜ್ಯದಲ್ಲಿ ನಮ್ಮ ಸರ್ಕಾರದ ಮೊದಲು ಕೆಪಿಎಸ್ ಶಾಲೆಗಳು 308  ಇತ್ತು. ಈಗ 500 ಹೆಚ್ಚಿಸಿ 800 ಕೆಪಿಎಸ್ ಶಾಕೆಗಳನ್ನ ಉಚಿತ ಸಾರಿಗೆಯಲ್ಲಿ ಶಿಕ್ಷಣ ನೀಡಲಾಗಿದೆ. 

ಬೈಲಿಂಗ್ವೆಲ್ ಭಾಷೆಯಲ್ಲಿ ಶಿಕ್ಷಣ ನೀಡಲಾಗುತ್ತಿದೆ. 1-5 ನೇ ತರಗತಿಯ ತನಕ ನೀಡಲಗುವುದು. 6 ನೇ ತರಗತಿಯಿಂದ ಭಾಷಾ ಮಾಧ್ಯಮಗಳ ಆಯ್ಕೆಗೆ ಅವಕಾಶ ನೀಡಲಾಗಿದೆ. ಆದರೆ ಕನ್ನಡ ಭಾಷೆ ಕಂಪಲ್ಸರಿ ಎಂದರು.  ಪಿಯು, ಪ್ರೌಢ, ಹಿರಿಯ ಪ್ರಾಥಮಿಕ ಶಾಲೆಗಳನ್ನ ಒಟ್ಟಿಗೆ ತಂದು ಶಾಸಕರ ನೇತೃತ್ವದಲ್ಲಿ 800 ಶಾಲೆಗಳನ್ನ ನವೆಂಬರ್ ತಿಂಗಳಲ್ಲಿ ನಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದರು. 

ಆಧುನಿಕ ದಿನಗಳಲ್ಲಿ ಎಐ ಬೇಸ್ಡ್ ತರಬೇತಿ ಕೊಡಲು ಹೇಳಿದ್ದರು. ಇನ್ನುಮುಂದೆ 1 ನೇ ತರಗತಿಯಿಂದಲೇ ಕೊಡಲು ನಿರ್ಧರಿಸಲಾಗಿದೆ. 6 ನೇ ತರಗತಿಯಿಂದ ಎಲ್ಲಾ ಕೆಪಿಎಸ್ ಶಾಲೆಗಳಲ್ಲಿ ಸ್ಕಿಲ್ ಎಟ್ ಸ್ಕೂಲ್ ಆರಂಭಿಸಲಾಗುತ್ತಿದೆ. 


ಸಂಸದರು ಗೆದ್ದಿದ್ದು ಹೇಗೆ


2009 ರಲ್ಲಿ ಸಂಸದ ರಾಘವೇಂದ್ರ ನಮ್ಮ ತಂದೆ ವಿರುದ್ಧ ಗೆಲ್ಲಲು ಬಿಎಸ್ ವೈ ಅವರು ಅಂಬ್ಯೂಲೆನ್ಸ್ ಮೂಲಕ ಹಣ ತಂದು ಹಂಚಿದ್ದರು. ದೀಪಾವಳಿ ಗಿಫ್ಟ್ ಎಂದು ಜಿಎಸ್ ಟಿ ತೆಗೆದಯಲಾಗಿದೆ ಎಂದು ಹೇಳಲಾಗುತ್ಯಿದೆ. 8 ವರ್ಷ ಕಟ್ಟಿದ ಹಣವನ್ನ ವಾಪಾಸ್ವಕೊಡದೆ ಗಿಫ್ಟ್ ಎನ್ನುತ್ತಾರೆ. ಇದೆಲ್ಲ ಪೊಲಿಟಿಕಲ್ ಸ್ಟೇಟ್ ಮೆಂಟ್ ಅಷ್ಟೆ. ದಿಪಾವಳಿ ಗಿಫ್ಟ್ ಎನ್ನುವುದಕ್ಕೆ ನಾಲಾಯಕ್ ಎಂದರು. 


ಆರ್ ಎಸ್ ಎಸ್ ನೋಂದಣಿ ಆಗದ ಸಂಸ್ಥೆ


ಅಶೋಕ್, ವಿಜೇಂದ್ರ ಅವರ ಚಾಲಕರು ಮತ್ತು ಅವರ ಆಳುಕಾಳುಗಳು ಸಿದ್ದರಾಮಯ್ಯನವರ ಗ್ಯಾರೆಂಟಿಯಿಂದ ಹೊರತು ಮೋದಿ ಗ್ಯಾರೆಂಟಿಯಿಂದ ಅಲ್ಲ. ಆರ್ ಎಸ್ ಎಸ್ ಭೂ ನಿರ್ಬಂಧಕ್ಕೆ ಅವರು ನೋಂದಣಿಯಾಗದ ಸಂಸ್ಥೆಯಾಗಿದೆ. ಅವರ ನಡುವಳಿಕೆಯನ್ನ ತಿದ್ದಲು ನಮ್ಮ ಕೆಪಿಎಸ್ ಶಾಲೆ ಕಾರಣವಾಗಿದೆ. ದೇಶದ ಜನಗಣ ಮನ ಹೇಳದ ಆರ್ ಎಸ್ ಎಸ್ ಗೆ ಕಾನೂನು ಇದೆ. ಕಾನೂನು ಇವರ ಮೇಲೆ ಚಾಪ ಹೊಡೆಯುತ್ತದೆ. ಆರ್ ಎಸ್ ಎಸ್  ಬದಲಾವಣೆ ಒಂದೇ ಚಡ್ಡಿಯಿಂದ ಪ್ಯಾಂಟ್ ಗೆ ಬಂದರು ಎಂದರು. 


ಸಕ್ರೆಬೈಲಿನ ಆನೆಗಳ ಆರೋಗ್ಯ ಬಗ್ಗೆ ಮಾಹಿತಿ ಪಡೆಯುವೆ


ಸಕ್ರಬೈಲಿನಲ್ಲಿ ಆನೆಗಳ ಪರಿಸ್ಥಿತಿ ಗಂಭೀರವಾಗಿದೆ. ದಸರಾ ಮೆರವಣಿಗೆಗೆ ಬಂದಿದ್ದ ಸಾಗರ್ ಮತ್ತು ಬಾಲಣ್ಣನ ಪರಿಸ್ಥಿತಿ ಗಂಭೀರವಾಗಿದೆ. ಆ ಆನೆಗಳನ್ನ ಕಾಡಾನೆಗಳಿಂದ ದಾಳಿಯಾಗಿವೆ ಎಂಬ ಮಾಧ್ಯಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ಬಗ್ಗೆ ಮಾಹಿತಿ ಪಡೆಯುವುದಾಗಿ ಮಾತ್ರ ಹೇಳಿದರು. ಬಾಲಣ್ಣ ದಸರಾಕ್ಕೆ ಬಾರದೆ ಇರುವ ಸ್ಥಿಯಲ್ಲಿದ್ದರೂ ಅದನ್ನ ಕಳುಹಿಸಿ ಮತ್ತೆ ಅದರ ಆರೋಗ್ಯ ಹದಗೆಟ್ಡಿದೆ. ಈ ಬಗ್ಗೆ ಸಚಿವರ

CM to inaugurate KPS school, program to be held in Shivamogga - Minister Madhu Bangarappa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close