ಆಯನೂರು ಗೇಟ್ ಬಳಿ ಸರಣಿ ಅಪಘಾತ- Serial accident near Ayanur Gate

SUDDILIVE || SHIVAMOGGA

ಆಯನೂರು ಗೇಟ್ ಬಳಿ ಸರಣಿ ಅಪಘಾತ- Serial accident near Ayanur Gate   

Accident, Ayanurugate

ಶಿವಮೊಗ್ಗದಲ್ಲಿ ಸರಣಿ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಮೂವರಿಗೆ ಗಾಯಗಳಾಗಿದ್ದು ಮೂವರಲ್ಲಿ ಒಬ್ಬರಿಗೆ ಹೆಡ್ ಇಂಜುರಿಯಾಗಿದೆ. ಶಿವಮೊಗ್ಗ ನಗರದ ಆಯನೂರು ಗೇಟ್ ಬಳಿ ಘಟನೆ ನಡೆದಿದೆ. 

ಘಟನೆಯಲ್ಲಿ ಗಂಭೀರಗೊಂಡ ಬೈಕ್ ಸವಾರ ಫುಡ್ ಡೆಲಿವರಿ ಬಾಯ್ ಯಡವಟ್ಟಿನಿಂದ ಆದ ಸರಣಿ ಅಪಘಾತ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಪಘಾತದಿಂದ ಮೂರು ಬೈಕ್ ಎರಡು ಕಾರುಗಳು ಜಖಂಗೊಂಡಿದೆ. 

ಸಿಗ್ನಲ್ ಬ್ರೇಕ್ ಮಾಡಿದ ಫುಡ್ ಡೆಲಿವರಿ ಬಾಯ್ ಗೆ ಶರಾವತಿ ನಗರದ  ಕಡೆಯಿಂದ ಬರುತ್ತಿದ್ದ ಎರಿಟಿಗಾ ಕಾರು ಫುಡ್ ಡೆಲಿವರಿ ಬಾಯ್ ಉಳಿಸಲು ಹೋಗಿ  ನಿಯಂತ್ರಣ ತಪ್ಪಿ ಡಿವೈಡರ್ ಹತ್ತಿ ಮತ್ತೊಂದೆಡೆ ರಸ್ತೆಯ ಸಿಗ್ನಲ್ ನಲ್ಲಿ ನಿಂತಿದ್ದ ವಾಹನ ಸವಾರರ ಮೇಲೆ ಹರಿದಿದೆ. ವಾಹನಗಳ ಮೇಲೆ ಹರಿದ ಪರಿಣಾಮ ಇಬ್ಬರಿಗೆ ಗಾಯವಾಗಿದೆ, ಒಬ್ಬನಿಗೆ ಗಂಭೀರವಾಗಿ ತಲೆಗೆ ಪೆಟ್ಟಾಗಿದೆ. 

ಬೈಕ್ ನಲ್ಲಿದ್ದ ಕಿರಣ್, ಅರುಣ್ ಪ್ರವೀಣ  ಗಾಯಾಳುಗಳು ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಬೈಕ್ ಮತ್ತು ಕಾರನ್ನ ಠಾಣೆಗೆ ರವಾನಿಸಲಾಗಿದೆ.  ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅದೇ ರೀತಿ ಅಮೀರ್ ಅಹ್ಮದ್ ವೃತ್ತದ ಬಳಿ ರಸ್ತೆ ಅಪಘಾತ ಸಂಭವಿಸಿದೆ. ಹಬ್ಬಕ್ಕೆ ವಾಹನಗಳ ದಟ್ಟಣೆ ಹೆಚ್ಚಾಗಿ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ. 

Serial accident near Ayanur Gate

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close