ಕಾರು ಪಲ್ಟಿ ಹೊಡೆದು ವ್ಯಕ್ತಿ ಸಾವು-Man dies after car overturns

 SUDDILIVE || NAGARA

ಕಾರು ಪಲ್ಟಿ ಹೊಡೆದು ವ್ಯಕ್ತಿ ಸಾವು-Man dies after car overturns    

Car, overturn

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದು ಕಾರೊಂದು ಪಲ್ಟಿಯಾಗಿದೆ. ಘಟನೆಯಲ್ಲಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದು ಮೂವರು ಮಹಿಳೆಯರು  ಗಾಯಗೊಂಡಿದ್ದಾರೆ. ಹೊಸನಗರ ತಾಲೂಕು ಮಡೋಡಿ ಎಂಬಲ್ಲಿ ಘಟನೆ ಸಂಭವಿಸಿದೆ.

ಬಿ.ಕೆ.ಹರಿಭಟ್‌ (76) ಮೃತರು. ಇವರು ಪತ್ನಿ ಕಮಲಾಕ್ಷಿ, ಸುಜಾತಾ ಮತ್ತು ಲೀಲಾವತಿ ಎಂಬುವವರ ಜೊತೆಗೆ ಆಲ್ಟೋ ಕಾರಿನಲ್ಲಿ ಹೊಸನಗರದ ನಿಟ್ಟೂರಿನಿಂದ ಮತ್ತಿಕೈ ಗ್ರಾಮಕ್ಕೆ ತೆರಳುತ್ತಿದ್ದಾಗ ಅಪಘಾತವಾಗಿದೆ.

ನಿಟ್ಟೂರು – ನಾಗೋಡಿ ಸಮೀಪದ ಮಡೋಡಿ ಗ್ರಾಮದ ಬಳಿ ಹರಿಭಟ್‌ ಅವರು ಚಲಾಯಿಸುತ್ತಿದ್ದ ಕಾರು ಖಾಸಗಿ ಬಸ್ಸಿನ ಮಧ್ಯ ಭಾಗಕ್ಕೆ ಡಿಕ್ಕಿಯಾಗಿದೆ. ನಿಯಂತ್ರಣ ತಪ್ಪಿ ಶರಾವತಿ ಹಿನ್ನೀರಿನತ್ತ ಸಾಗಿ ಹಲವು ಬಾರಿ ಪಲ್ಟಿಯಾಗಿದೆ. ಈ ಸಂದರ್ಭ ಹರಿಭಟ್‌ ಅವರಿಗೆ ಗಂಭೀರ ಗಾಯವಾಗಿತ್ತು. ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರೆಳೆದಿದ್ದರು ಎಂದು ತಿಳಿದು ಬಂದಿದೆ. ಪತ್ನಿ ಕಮಲಾಕ್ಷಿ, ಸುಜಾತಾ ಮತ್ತು ಲೀಲಾವತಿ ಅವರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Man dies after car overturns

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close