ಬಸ್ ಪ್ರಯಾಣದ ವೇಳೆ ವ್ಯಕ್ತಿ ಸಾವು-Man dies after collapsing at KSRTC bus stand

 SUDDILIVE || SHIVAMOGGA

KSRTC ಬಸ್ ನಿಲ್ದಾಣದಲ್ಲಿ ದಿಡೀರ್ ಎಂದು ಕುಸಿದು ವ್ಯಕ್ತಿ ಸಾವು-Man dies after collapsing at KSRTC bus stand

KSRTC, Busstand


ಊರಿನಿಂದ ಕರ್ತವ್ಯಕ್ಕೆ ಹಾಜರಾಗಲು  ಶಿವಮೊಗ್ಗಕ್ಕೆ ಬರುತ್ತಿದ್ದ ವೇಳೆ KSRTC ಬಸ್ ನಲ್ಲಿಯೇ ಪ್ರಯಾಣಿಕರೊಬ್ವರು ನಿಧನರಾಗಿದ್ದಾರೆ. 

ರಜೆಯ ಕಾರಣ ತಮಿಳುನಾಡಿಗೆ ತೆರಳಿದ್ದ ಹಮೀದ್ ಎಂಬ ಸುಮಾರು 55 ರಿಂದ 60 ವರ್ಷದ ವ್ಯಕ್ತಿ ಮೈಸೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದಾರೆ. ಶಿವಮೊಗ್ಗ ಬಸ್ ನಿಲ್ದಾಣಕ್ಕೆ ಬಸ್ ತಲುಪಿದ ಬಳಿಕ ಅವರ ನಿಧನದ ವಾರ್ತೆ ತಿಳಿದು ಬಂದಿದೆ. 

ಹಮೀದ್ ತಮಿಳುನಾಡಿನಿಂದ ಶಿವಮೊಗ್ಗಕ್ಕೆ ವೈಸೂರು-ಶಿವಮೊಗ್ಗ ಬಸ್ ನಲ್ಲಿ ಪ್ರಯಾಣಿಸಿದ್ದಾರೆ. ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಕಂಡಕ್ಟರ್ ಬಂದು ಹಮೀದ್ ಗೆ ಎದ್ದೇಳಿಸುವಾಗ ಅವರ ನಿಧನ ಹೊಂದಿರುವುದು ತಿಳಿದು ಬಂದಿದೆ. ಸೀಟ್ ನಂಬರ್ 28 ರಲ್ಲಿ ಪ್ರಯಾಣಿಸುವಾಗ ಹಮೀದ್ ಕುಳಿತಲ್ಲಿಯೇ ನಿಧನರಾಗಿದ್ದಾರೆ.  ಅವರ ಮೃತ ದೇಹವನ್ನ ಶಿವಮೊಗ್ಗದ ಮೆಗ್ಗಾನ್ ಮರಣೊತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲಾಗಿದೆ.

 Man dies after collapsing at KSRTC bus stand

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close