ನಿಧನ ವಾರ್ತೆ-Death News

 SUDDILIVE || SHIVAMOGGA

ನಿಧನ ವಾರ್ತೆ-Death News

           ಪುಟ್ಟು ಸಿಂಗ್                     ಸುಧೀಂದ್ರ                  

ಶಿವಮೊಗ್ಗದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಇಬ್ಬರು ಗಣ್ಯರನ್ನ ಕಳೆದುಕೊಂಡಿದೆ. ನಿವೃತ್ತ ಪ್ರಾಂಶುಪಾಲ ಆರ್ ಪುಟ್ಟು ಸಿಂಗ್ ಮತ್ತು ಕೆಆರ್ ಪುರಂ ಬಡಾವಣೆಯ ಸುಧೀಂದ್ರ ಅವರು ನಿಧನರಾಗಿದ್ದಾರೆ. 

ಶಿವಮೊಗ್ಗ ನಗರದ ವಿನೋಬನಗರದ ನಿವಾಸಿಗಳಾದ ನಿವೃತ್ತ ಪ್ರಿನ್ಸಿಪಾಲರು 96 ವರ್ಷದ ಶ್ರೀ ಆರ್ ಪುಟ್ಟು ಸಿಂಗ್ ರವರು (ಪತ್ರಕರ್ತ ಭರತ್ ರಾಜ್ ಸಿಂಗ್ ರವರ ತಂದೆ ) ಇಂದು ಬೆಳಗ್ಗೆ ದೈವಾಧೀನರಾಗಿದ್ದಾರೆ. 

ಮೃತರ ಅಂತ್ಯಕ್ರಿಯೆ ನಾಳೆ ಬೆಳಗ್ಗೆ 10 ಘಂಟೆಗೆ ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ನೆರವೇರಿಸಲು ಅವರ ಕುಟುಂಬ ವರ್ಗ ನಿಶ್ಚಯಿಸಿದೆ.

ಮೈಸೂರ್ ಬ್ಯಾಂಕ್ ನಿವೃತ್ತ ಉದ್ಯೋಗಿ, ನಗರದ ಕೆ.ಆರ್.ಪುರಂ ಬಡಾವಣೆಯ ನಿವಾಸಿ ಶ್ರೀಯುತ ಏನ್.ಆರ್.ಸುಧೀಂದ್ರ ಅವರು ಅನಾರೋಗ್ಯದ ಕಾರಣ ಶುಕ್ರವಾರ ಸಂಜೆ ಇಹ ಲೋಕ ಸೇರಿದರು. 

ಅವರ ಅಕಾಲಿಕ ಮರಣದ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದ ಸದಸ್ಯರಿಗೆ ಭಗವಂತ ಕರುಣಿಸಲಿ ಎಂದು, ನಮ್ಮ ಮೈಸೂರ್ ಬ್ಯಾಂಕ್ ನಿವೃತ್ತ ಸಂಘ,ಶಿವಮೊಗ್ಗ ಘಟಕದ ವತಿಯಿಂದ,ಅಗಲಿದ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು  ಅಧ್ಯಕ್ಷರು, ಪದಾಧಿಕಾರಿ,ಹಾಗೂ ಸದಸ್ಯರು, ಮೈಸೂರ್ ಬ್ಯಾಂಕ್ ನಿವೃತ್ತ ಸಂಘ, ಶಿವಮೊಗ್ಗ ಘಟಕ ಪ್ರಾರ್ಥಿಸಿದೆ

Death News

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close