ಈಶ್ವರಪ್ಪನವರ ಸಲಹೆಗೆ ನಾನು ರೆಡಿ-ಸಂಸದ-I am ready to take Eshwarappa's advice-MP

 SUDDILIVE || SHIVAMOGGA

ಈಶ್ವರಪ್ಪನವರ ಸಲಹೆಗೆ ನಾನು ರೆಡಿ-ಸಂಸದ-I am ready to take Eshwarappa's advice-MP

Eshwarappa, advise


ಕ್ಷೇತ್ರ ಅಭಿವೃದ್ಧಿ ವಿಚಾರದಲ್ಲಿ ಮಾಜಿ ಸಚಿವ ಈಶ್ವರಪ್ಪನವರ ಸಲಹೆಯನ್ನ ತೆಗೆದುಕೊಳ್ಳಲು ಸಿದ್ದ ಎಂದು ಸಂಸದರು ಘೋಷಿಸಿದ್ದಾರೆ. ಆದರೆ ಅವರ ಮಧ್ಯಸ್ಥಿಕೆಯನ್ನ ನಿರಾಕರಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ವಿಚಾರದಲ್ಲಿ ಮಾಜಿ ಡಿಸಿಎಂ ಈಶ್ವರಪ್ಪ ಸಚಿವ ಮತ್ತು ಸಂಸದರು ಒಂದಾಗಿ ಎಂದಿದ್ದರು. ಅಭಿವೃದ್ಧಿ ವಿಚಾರದಲ್ಲಿ ನಾವು ರೆಡಿ ಇದ್ದೇವೆ. ಆದರೆ ಸಚಿವರು ಹಗೂರವಾಗಿ ಮಾತನಾಡುವುದನ್ನ ಬಿಡಬೇಕು ಎಂದು ಸಲಹೆ ನೀಡಿದರು.

ಆದರೆ ಮಾಜಿ ಡಿಸಿಎಂ ಈಶ್ವರಪ್ಪ ನವರ ಮಧ್ಯಸ್ಥಿಕೆಯಲ್ಲಿ ಸಚಿವರು ಮತ್ತು ನನ್ನನ್ನ ಒಂದಾಗ್ತೀರಾ ಎಂದು ಕೇಳಿದ ಮಾಧ್ಯಮದವರ ಪ್ರಶ್ನೆಗೆ ಸಚಿವರು ಸಮಂಜಸವಾಗಿ ಅಲ್ಲಗೆಳೆದಿದ್ದು, ಜಿಲ್ಲೆಯಿಂದ ಜನರು ನನ್ನನ್ನ ಜನ ಆಯ್ಕೆ ಮಾಡಿದ್ದಾರೆ. ಸೊರಬ ಕ್ಷೇತ್ರದಲ್ಲಿ ಸಚಿವರನ್ನ‌ಜನ ಆಯ್ಕೆ ಮಾಡಿದ್ದಾರೆ. ನಮ್ಮ ದಾರಿ ಬೇರೆಯಿದೆ ಅವರ ದಾರಿ ಬೇರೆಯಿದೆ ಮಾಜಿ ಡಿಸಿಎಂ ಆಗಿರುವ ಈಶ್ವರಪ್ಪನವರ ಮಧ್ಯಸ್ಥಿಕೆಯಲ್ಲಿ ಒಂದಾಗುವುದು ಎಂದರೆ ಇದು ಸರಿಕಾಣಿಸುವುದಿಲ್ಲ. ಆದರೆ ಅಭಿವೃದ್ಧಿ ವಿಚಾರದಲ್ಲಿ ಒಮ್ಮತವಾಗಿರಲು ನಾನು ರೆಡಿ ಎಂದು ಸ್ಪಷ್ಟಪಡಿಸಿದರು. 

ಸಚಿವರನ್ನ ಕಾಂಗ್ರೆಸ್ಸೇ ಒಪ್ಪಲ್ಲ

ಶಿಕ್ಷಣ ಸಚಿವರು ಜಾತಿ ಗಣತಿ ವಿಚಾರದಲ್ಲಿ ಮಾತನಾಡಿರುವುದನ್ನ ನೋಡಿದರೆ ಸಮೀಕ್ಷೆ ಬಗ್ಗೆ ಅವರಿಗೆ ಅರ್ಥವಾಗಿಲ್ಲವೆಂಬುದು ಸ್ಪಷ್ಟವಾಗಿದೆ ಎಂದು ಸಂಸದರು ಆರೋಪಿಸಿದರು. 

ಸುಮ್ಮನೆ ಯಾರನ್ನೋ ಮೆಚ್ಚಿಸಲು ಬಾಯಿಗೆ ಬಂದಂತೆ ಸಚಿವರು ಮಾತನಾಡಿದ್ದಾರೆ. ವಿಪಕ್ಷವಾಗಿ ನಾವು ಗಂಭೀರವಾಗಿ ತೆಗೆದುಕೊಳ್ಳುವುದಕ್ಕಿಂತ ಕಾಂಗ್ರೆಸ್ ಪಕ್ಷವೇ ಸಚಿವರನ್ನ ಎಷ್ಟು ಗಂಭೀರವಾಗಿ ತೆಗೆದುಕೊಂಡಿದೆ ಎಂಬುದು ಪ್ರಶ್ನೆಯಾಗಿದೆ ಎಂದರು. 

ಶೆಡ್ಯೂಲ್ ತಿಳಿದುಕೊಳ್ಳಲಿ

ಜಾತಿ ಸಮೀಕ್ಷೆಯನ್ನ ವಿರೋಧಿಸುತ್ತಿರುವ ಬಿಜೆಪಿ ವಿರುದ್ಧ ಸುಪ್ರೀಂ ಸುಮೋಟೋ ಕೇಸ್ ಹಾಕಬೇಕು ಎಂದು ನಿನ್ನೆ ಸಚಿವ ಮಧುಬಂಗಾರಪ್ಪನವರ ಹೇಳಿಕೆಗೆ ಟಾಂಗ್ ನೀಡಿದ ಸಂಸದರು, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಬಗ್ಗೆ,  ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಗ್ಗೆ, ವಿಪಕ್ಷ ನಾಯಕ ಅಶೋಕ್ ಬಗ್ಗೆ ಶೇಮ್ ಆಗಬೇಕು ಎಂದಿದ್ದಾರೆ. ಸಂವಿಧಾನದ ಶೆಡ್ಯೂಲ್ 7 ರಲ್ಲಿ ಜನಗಣತಿಯನ್ನ  ನಡೆಸಲು ಕೇಂದ್ರ ಸರ್ಕಾರಕ್ಕೆ ಮಾತ್ರವಿದೆ ಎಂದು 1983 ರಲ್ಲಿ ತಿದ್ದುಪಡಿಯಲ್ಲಿ ನೀಡಲಾಗಿದೆ. ಆದರೆ ಸಚಿವರು ಇನ್ನೂ ನೆಹರೂ ಕಾಲದ ಶೆಡ್ಯೂಲ್ ಬಗ್ಗೆ ಮಾತನಾಡುತ್ತಾರೆ. ಅದು ತಿದ್ದುಪಡಿ ಮಾಡಿ ಅಂದಿನ ಕೇಂದ್ರ ಕಾಂಗ್ರೆಸ್ ಸರ್ಕಾರವೇ ಆದೇಶಿಸಿರುವುದು ಕಾಣದಿರುವುದು ದುರದೃಷ್ಠಕರ ಎಂದರು.  ಸಮೀಕ್ಷೆ ಕುರಿತು ಹೈಕೋರ್ಟ್ ನಲ್ಲಿ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ. ರಾಜ್ಯ ಸರ್ಕಾರಕ್ಕೆ ಜನಗಣತಿಯ ಸಮೀಕ್ಷೆಯಲ್ಲಿ ಜನರ ಮಾಹಿತಿ ನೀಡಿರುವುದು ಕಡ್ಡಾಯವಲ್ಲ ಎಂದಿದೆ. 

ಡೇಟಾ ಸಂಗ್ರಹದ ಪ್ರಕ್ರಿಯೆ ಅಷ್ಟೆ, ಜನರು ಸಮೀಕ್ಷೆಗೆ ಉತ್ತರಿಸಲೇ ಬೇಕೆಂಬ ಸ್ಪಷ್ಟತೆಯಿಲ್ಲ. ದಂಡ ವಿಧಿಸುವಂತಿಲ್ಲ ಎಂದು ಸ್ಪಷ್ಟಡಿಸಿದೆ. ರಾಜ್ಯ ಸರ್ಕಾರದ ಸಮೀಕ್ಷೆ ಬಗ್ಗೆ ಸಚಿವ ಸಂಪುಟದಲ್ಲಿ ಕಾಂಗ್ರೆಸ್ ನಾಯಕರೆ ಆಕ್ಷೇಪಿಸಿದ್ದಾರೆ.  

ಆದರೂ ಸಮೀಕ್ಷೆ ವಿಚಾರವಾಗಿ ನಿನ್ನೆ ಶಿಕ್ಷಕರನ್ನ ಸನ್ಮಾನಿಸಲಾಗಿದೆ. ಆದರೆ ಶಿಕ್ಷಕರು ಶಾಪ ಹಾಕುತ್ತಿದ್ದಾರೆ. ಹಬ್ಬದ ರಜಾ ದಿನಗಳನ್ನ ಆಚರಿಸಲು ಬಿಡದೆ ತಾಙತ್ರಿಕ ಲೋಪದೋಷಗಳಿಂದ ಕೂಡಿದ ಸಮೀಕ್ಷೆಗೆ  ಬಲವಂತವಾಗಿ ನಿಯೋಜಿಸಲಾಗಿದೆ ಎಂದು ಶಿಕ್ಷಜರು ಶಾಪಹಾಕುತ್ತಿದ್ದಾರೆ. ಹಿಂದೆ 158 ಕೋಟಿ ರೂ. ಹಣವನ್ನ ಹಾಳುಮಾಡಲಾಯಿತು. ಭ್ರಷ್ಠಾಚಾರ, ಗೊಂದಲಗಳಲ್ಲೇ ಸರ್ಕಾರ ಮುಂದುವರೆಯುತ್ತಿದೆ. ಗುತ್ತಿಗೆದಾರರ ಸಂಘ ಸುಸ್ತಾಗಿದ್ದಾರೆ. 2½ ಸಾವಿರ ನೀರಾವರಿ ಯೋಜನೆಗೆ ವ್ಯಯವಾಗಿರುವ  ಗುತ್ತಿಗೆದಾರರ ಹಣ ಸರ್ಕಾರದಿಂದ ಬರ್ತಯಿಲ್ಲ. ಈ ಸಂಧರ್ಭದಲ್ಲಿ 400 ಕೋಟಿ ಹಣ ವ್ಯಯಮಾಡಲಾಗುತ್ತಿದೆ. ಅಹಿಂದಾವನ್ನ‌ ಪ್ಲೀಸ್ ಮಾಡಲು ನಡೆಯುತ್ತಿರುವ ಸಮೀಕ್ಷೆಯಾಗಿದೆ. 

ರಾಜ್ಯ ಜಾತಿಗಣತಿ ಯಾವುದೇ ಪ್ರಯೋಜನವಿಲ್ಲ

ಜಾತಿಗಣತಿಯಿಂದ ಯಾವುದೇ ಪ್ರಯೋಜನವಾಗಿಲ್ಲ. ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದಾಗ 1961, 1971 ರಲ್ಲಿ 2011 ರಲ್ಲಿ ಜಾತಿಗಣತಿ ನಡೆಸಲಿಲ್ಲವೇಕೆ? ಮಾತು ಎತ್ತಿದರೆ ಅಸ್ಪೃಶ್ಯರು ಎನ್ನುವ ನೀವು ಆಗ ಇವರೆಲ್ಲಾ ಇರಲಿಲ್ಲವಾ ಎಂದು ಪ್ರಶ್ನಿಸಿದ ಸಂಸದ, ರಾಜ್ಯ ಸರ್ಕಾರ ಬಾಯಿಗೆ ಬಂದಂತೆ ನಡೆದುಕೊಳ್ಳುತ್ತಿದೆ. ಸರ್ಕಾರ ಬದಕಿದ್ದೇಯ ಅಥಾವಾ ಡಬ್ಬಲ್ ಇಂಜಿನ್ ಆರೋಪದ ಸರ್ಕಾರವಿದೆಯಾ ಎಂಬುದನ್ನ ಸಚಿವ ಮಧು ಬಂಗಾರಪ್ಪ ಮಾತನಾಡಬೇಕಿತ್ತು ಎಂದು ದೂರಿದರು. 


ಅಹಿಂದ ಗರೀಬಿ ಹಠಾವೋ ಘೋಷಣೆಗಳು ಘೋಷಣೆಯಾಗಿವೆ. ಭೂಸುಧಾರಣೆ ತಂದ ದೇವರಾಜ್ ಅರಸ್ ರನ್ನ ಕಾಂಗ್ರೆಸ್ ಉಚ್ಚಾಟಿದ್ದು ಯಾಕೆ? ಈಗ ಅಹಿಂದಾ ಚಾಂಪೀಯನ್ ಎಂದು ಹೇಳಿಕೊಂಡು ಬಂದ್ರಲ್ಲಾ? ಮೋದಿ ಅವರ ಸಂಸದರಲ್ಲಿ 27 ಸಚಿವರು ಬುಡಕಟ್ಟು ಜನಾಂಗದ ಸಚಿವರನ್ನ ಸಚಿವರನ್ನಾಗಿ ಮಾಡಿದೆ. ವೈದಿಕ ಶಿಕ್ಷಣದಲ್ಲಿ ಒಬಿಸಿ ಮೀಸಲು ಮಾಡಿದ್ದು ಮೋದಿ ಸರ್ಕಾರ, ಮಾತು ಎತ್ತಿದರೆ ಗೃಹಲಕ್ಷ್ಮೀ ಕಾಂಗ್ರೆಸ್ ಜಪ ಮಾಡುತ್ತದೆ. ಆಯುಷ್ ಮಾನ್, ಮುದ್ರಾ ಯೋಜನೆ ನೀಡಿ ಧೃಡ ಜನರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದ್ದು ಮೋದಿ ಸರ್ಕಾರ ಎಂದರು. 

ಬಿಎಸ್ ವೈ ವಿರುದ್ಧ ಮಾತನಾಡಲು ಯಾವ ನೈತಿಕತೆಯೂ ಇಲ್ಲ

ಯಡಿಯೂರಪ್ಪರ ಬಗ್ಗೆ ಜಾತಿ ರಾಜಕಾರಣ ಎನ್ನುವುದು ಮತ್ತು ವಿಜೇಂದ್ರ ಅವರನ್ನ ಬಚ್ಚಾ ಎಂದು ತೆಗಳುವ ಸಚಿವರಿಗೆ ಯೋಗ್ಯತೆ ನಿನಗೆ ಏನಿದೆ ಎಂದು ಪ್ರಶ್ನಿಸಿದ ಸಂಸದರು, ಬಿಎಸ್ ವೈ ಸಿಎಂ ಆಗದಿದ್ದರೆ ಮಠಮಾನ್ಯಗಳು ಬೀದಿಗೆ ಬರುತ್ತಿತ್ತು ಎಂದು ಮಾದರ ಚೆನ್ನಯ್ಯ ಹೇಳಿದ್ದಾರೆ. ಚೌಡಯ್ಯ ಅಭಿವೃದ್ದಿ ನಿಗಮ, ಕನಕದಾಸರ ಹುಟ್ಟೂರು ಬಾಡಾ ಅಭಿವೃದ್ಧಿ, ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ತೆರೆದವರು ಬಿಎಸ್ ವೈ ಸಿಎಂ ಕಾಲದಲ್ಲಿ. ಜಾತ್ಯಾತೀತ ಎನ್ನುವುದಕ್ಕೆ ಅವರ ಕಾರ್ಯಕ್ರಮವೇ ಸಾಕ್ಷಿಯಾಗಿದೆ. ಅವರ ಬಗ್ಗೆ ಮಾತನಾಡು ಸಚಿವರಿಗೆ ಅರ್ಹತೆಯಿಲ್ಲ ಎಂದರು. 

ದಸರಾ ಹಬ್ಬ ಅಚ್ಚುಕಟ್ಟಾಗಿ ಆಧ್ಯಾತ್ಮಿಕವಾಗಿ ಯಶಸ್ವಿಯಾಗಿ ಹಿಂದೂ ಬಾಂಧವರು ನಡೆಸಿದ್ದಾರೆ. ಹಿಂದುಳಿದ ಕಾಲೋನಿಗಳಲ್ಲೂ 9 ದಿನವೂ ಹಬ್ಬವನ್ನ ಆಚರಿಸಲಾಗಿದೆ. ಎಲ್ಲಾ ಗುಡಿಗೋಪುರಗಳಲ್ಲಿ ನಡಧು ಹಿಂದೂಗಳಿಗೆ ಹೆಚ್ಚುಶಕ್ತಿ ನೀಡುವ ಕಾರ್ಯ ನಡೆದಿದೆ ಎಂದರು.

I am ready to take Eshwarappa's advice-MP

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close