ತವನಂದಿ ಗ್ರಾಮಸ್ಥರಿಂದ ಜಿಂಕೆ ರಕ್ಷಣೆ-Deer saved by Tawanandi villagers

SUDDILIVE || SORABA

ತವನಂದಿ ಗ್ರಾಮಸ್ಥರಿಂದ ಜಿಂಕೆ ರಕ್ಷಣೆ-Deer saved by Tawanandi villagers    



ಆಹಾರ ಅರಸಿಕೊಂಡು ಕಾಡಿನಿಂದ ನಾಡಿಗೆ ಬಂದ ಜಿಂಕೆಯನ್ನು ಗ್ರಾಮಸ್ಥರು ರಕ್ಷಿಸಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ ಘಟನೆ ತಾಲೂಕಿನ ತವನಂದಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

ಸುಮಾರು ನಾಲ್ಕು ವರ್ಷದ ಹೆಣ್ಣು ಜಿಂಕೆಯೊಂದು ಆಹಾರ, ನೀರು ಅರಸಿ ಗ್ರಾಮದತ್ತ ಮುಖ ಮಾಡಿತ್ತು. ಅಷ್ಟರಲ್ಲಿಯೇ ನಾಯಿಗಳ ಹಿಂಡು ಜಿಂಕೆಯ ಮೇಲೆ ದಾಳಿ ಮಾಡಲು ಬೆನ್ನತ್ತಿದ್ದವು. ಕೂಡಲೇ ಗ್ರಾಮಸ್ಥರು, ನಾಯಿಗಳನ್ನು ಓಡಿಸಿ, ಜಿಂಕೆಯನ್ನು ರಕ್ಷಿಸಿದ್ದಾರೆ ನಂತರ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಜಿಂಕೆಯ ಆರೋಗ್ಯವನ್ನು ಪರಿಶೀಲಿಸಿ, ಜಿಂಕೆಯನ್ನು ಮರಳಿ ಕಾಡಿಗೆ ಬಿಡಲಾಯಿತು.

ಗ್ರಾಮಸ್ಥರ ಕಾರ್ಯಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಅಭಿನಂದಿಸಿದ್ದಾರೆ.

Deer saved by Tawanandi villagers

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close