SUDDILIVE || SHIVAMOGGA
ನ.9ಕ್ಕೆ ಕೆಯುಡಬ್ಲ್ಯೂಜೆ ಚುನಾವಣೆ-KUWJ elections on November 9th
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು 9000 ಸಾವಿರಕ್ಕೂ ಹೆಚ್ಚು ಸಕ್ರೀಯ ಕಾರ್ಯನಿರತ ಪತ್ರಕರ್ತ ಸದಸ್ಯರುಗಳನ್ನೊಳಗೊಂಡ ಬೃಹತ್ ಸಂಘಟನೆಯಾಗಿದ್ದು ನ.9 ರಂದು ಚುನಾವಣೆ ನಡೆಯಲಿದೆ ಎಂದರು.
ಕಾರ್ಮಿಕ ಇಲಾಖೆಯ ಉಸ್ತುವಾರಿಯಲ್ಲಿ ಸಂಘದ ರಾಜ್ಯ ಘಟಕವೂ ಸೇರಿದಂತೆ ಎಲ್ಲಾ ಜಿಲ್ಲಾ ಘಟಕದ ಆಡಳಿತ ಮಂಡಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯಲಿದೆ. ಅಕ್ಟೋಬರ್ 13 ರಂದು ಸೋಮವಾರ ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು ಎಂದರು.
ಅಂದೇ ವೇಳಾಪಟ್ಟಿ ಪ್ರಕಟಗೊಳ್ಳಲಿದ್ದು, ಮತದಾರರ ಕರಡು ಪ್ರತಿ ಪ್ರಕಟವಾಗಲಿದೆ.ಅಕ್ಟೋಬರ್ 19ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.ಅ.27 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಅ.28 ನಾಮಪತ್ರಗಳ ಪರಿಶೀಲನೆ, ಅ. 30 ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವ ಕೊನೆಯ ದಿನವಾಗಿರುತ್ತದೆ.ನವಂಬರ್ 9 ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೇಂದ್ರ (ಕೆಯುಡಬ್ಲ್ಯೂಜೆ )ಕಚೇರಿ ಕಂದಾಯ ಭವನ 3ನೇ ಮಹಡಿ, ಕೆಜಿ ರಸ್ತೆ, ಬೆಂಗಳೂರು -09 ಮತ್ತು ಆಯಾ ಜಿಲ್ಲಾ ಕೇಂದ್ರಗಳಲ್ಲಿ ಬೆಳಗ್ಗೆ 9 ರಿಂದ ಮದ್ಯಾಹ್ನ 3ಗಂಟೆ ವರೆಗೆ ಮತದಾನ ನಡೆಯಲಿದೆ. ಮತದಾನ ಬಳಿಕ
ಅದೇ ದಿನ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದ ಅವರು. ಮಾದರಿ ಚುನಾವಣೆ ನಡೆಸಲು ನಿರ್ಧಾರ. ಅಧಿಕೃತ ಸಭೆ ಸಮಾರಂಭವಿರಲ್ಲ. ಔತಣ ಕೂಟ ಇರಲ್ಲ. ಜನರಲ್ ಮ್ಯಾನರ್ಸ್ ಅನುಸರಿಸಲಾಗುವುದು. ಶ್ರೀನಿವಾಸ್ ಅಧಿಕೃತ ಚುನಾವಣೆ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದರು.
KUWJ elections on November 9th