ad

ನಿವೇಶನ ಹಂಚಿಕೆಯಲ್ಲಿ ವಿಳಂಬ-ಪ್ರತಿಭಟನೆಗೆ ದಿನಾಂಕ ನಿಗದಿ- Delay in site allocation - date set for protest

 SUDDILIVE || SHIVAMOGGA

ನಿವೇಶನ ಹಂಚಿಕೆಯಲ್ಲಿ ವಿಳಂಬ-ಪ್ರತಿಭಟನೆಗೆ ದಿನಾಂಕ ನಿಗದಿ- Delay in site allocation - date set for protest   

Delay, allocation

ವಿಮಾನ ನಿಲ್ದಾಣಕ್ಕೆ ಜಮೀನು ಕಳೆದುಕೊಂಡ ರೈತರಿಗೆ ನಿವೇಶನ ಹಂಚಿಕೆಯಲ್ಲಿ ವಿಳಂಭವಾಗುತ್ತಿದ್ದು, ವಿಳಂಭದ ವಿರುದ್ಧ ಸೋಗಾನೆ ಭೂಮಿ ಹಕ್ಕು ರೈತರ ಹೋರಾಟ ಸಮಿತಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಎಂ. ಬಿ. ಕೃಷ್ಣಪ್ಪ ಓತಿಘಟ್ಟ ಅ.9 ರಂದು ಗೇಟು ಮುಂದೆ  ಪ್ರತಿಭಟಿಸಲಾಗಿದೆ. ಸಂಸದರು, ಸಚಿವರು ನ್ಯಾಯಾಲಯದ ರೀತಿ ಹಂಚು ಎನ್ನಬೇಕಿತ್ತು. ಮಾಡಿಲ್ಲ. ಡಿಸಿ ಅವರು ಸರಿಯಾದ ಮಾಹಿತಿ ನೀಡದೆ ವಿಳಂಬವಾಗುತ್ತಿದೆ ಎಂದು ದೂರಿದರು. 

341 ನಿವೇಶನವನ್ನ ಸೋಗಾನೆ ಗ್ರಾಮದ ಸರ್ವೆ ನಂ.120 ರಲ್ಲಿ 34 ಎಕರೆ 9 ಗುಂಟೆ ಜಮೀನನ್ನ ವಶಪಡಿಸಿಕೊಂಡು ಹೌಸಿಂಗ್ ಬೋರ್ಡ್ ಅಭಿವೃದ್ಧಿ ಪಡಿಸಲಾಗಿತ್ತು. ಆದರೆ ನಿವೇಶನ ಹಂಚಲಾಗಿಲ್ಲ. ಹೈಕೋರ್ಟ್ ನಿವೇಶನ ಹಂಚಿಕೆಗೆ ಸಲ್ಲಿಸಿದ್ದ ಮೇಲ್ಮನವಿಯನ್ನ‌ಪುರಸ್ಕರಿಸಿ ನಿವೇಶನ ಹಂಚಲು ಸೂಚಿಸಿದರೂ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಲಾಗಿದೆ. 

ಹಾಗಾಗಿ ಅ.9 ರಂದು ಏರ್ ಪೋರ್ಟ್ ನ ಗೇಟ್ ನ‌ಮುಂಭಾಗದಲ್ಲಿ ಪ್ರತಿಭಟಿಸಲಾಗುವುದು ಎಂದರು.

Delay in site allocation - date set for protest 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close