ad

ನಾಳೆ ತ್ರಿಮತಸ್ಥ ಬ್ರಾಹ್ಮಣ ಸಮುದಾಯ ಭವನಕ್ಕೆ ಶೃಂಗೇರಿ ಶ್ರೀಗಳು-Sringeri Sris to visit Trimathastha Brahmin Community Hall tomorrow

 SUDDILIVE || SHIVAMOGGA

ನಾಳೆ ತ್ರಿಮತಸ್ಥ ಬ್ರಾಹ್ಮಣ ಸಮುದಾಯ ಭವನಕ್ಕೆ ಶೃಂಗೇರಿ ಶ್ರೀಗಳು-Sringeri Sris to visit Trimathastha Brahmin Community Hall 

Sringeri, sirsi

2016 ರಲ್ಲಿ ನಗರದ ಚಂಡಿಕಾ ದುರ್ಗ ಪರಮೇಶ್ವರಿಯ ದೇವಾಲಯದಲ್ಲಿ ಆಚರ್ಯತ್ರಯರ ಭೂಮಿ ಪೂಜೆ ನಡೆಸಲಾಗಿತ್ತು. ಉದ್ಘಾಟನೆಯಾಗಿತ್ತು ಆದರೆ ಯಾವ ಯತಿಗಳು ಭೇಟಿಯಾಗಿರಲಿಲ್ಲ. ನಾಳೆ ಶೃಂಗೇರಿ ಶ್ರೀಗಳು ಆಗಮಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಕೆಬಿ ಪ್ರಸನ್ನ ಕುಮಾರ್ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತ್ರಿಮತಸ್ಥರ ಭವನಕ್ಕೆ ತಾನು ಶಾಸಕರಾಗಿದ್ದಾಗ ಆಯವ್ಯಯದಲ್ಲಿ ಅನುಮೋದನೆ ಪಡೆದು ಎಲ್ಲಾ‌ಜಿಲ್ಲೆಗಳಲ್ಲಿ ಸ್ಥಾಪಿಸಲು ಮನವಿ ಮಾಡಿಕೊಂಡಿದ್ದೆ. ಶಿವಮೊಗ್ಗ ಹೊರತುಪಡಿಸಿ, ಎಲ್ಲೂ ನಿರ್ಮಾಣವಾಗಿಲ್ಲ. 8/2/23 ರಲ್ಲಿ ಕೆ.ಎಸ್ ಈಶ್ವರಪ್ಪನವರ ಅಧ್ಯಕ್ಷತೆಯಲ್ಲಿ ಬೊಮ್ಮಾಯಿ ಸಿಎಂ ಆಗಿದ್ದಾಗ ಲೋಕಾರ್ಪಣೆ ಮಾಡಲಾಯಿತು ಎಂದರು. 

Sringeri, thrimathastha

ಆ ಭವನಕ್ಕೆ ಯಾವುದೇ ಯತಿಗಳು ಉದ್ಘಾಟನೆ ಆದಾಗಿನಿಂದ ಬಂದಿರಲಿಲ್ಲ. ಶೃಂಗೇರಿ ಜಗದ್ಗುರುಗಳಿಗೆ ಮನವಿ ಮಾಡಿದಾಗ ಬರುವುದಾಗಿ ಹೇಳಿದ್ದು, ಅವರು ನಾಳೆ ಅ.8 ರಂದು 12 ಗಂಟೆಗೆ ಭವನಕ್ಕೆ ಬರಲಿದ್ದಾರೆ.  ಭವನದ ನಿರ್ವಹಣೆಗೆ ನಮ್ಮ ಸಮುದಾಯಕ್ಕೆ ಕೊಡಬೇಕೆಂದು ಸಚಿವರಲ್ಲಿ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು. 

ದತ್ತಾತ್ರಿ ಮಾತನಾಡಿ ತ್ರಿಮತಸ್ಥ ಬ್ರಾಹ್ಮಣರು ಈ ಭವನವನ್ನ ವಳಸಿಕೊಳ್ಳಬೇಕು ಮತ್ತು ಈ ಭವನದಲ್ಲಿಯೇ ಎಲ್ಲಾ ಚಟುವಟಿಕೆ ನಡೆಯಬೇಕಿದೆ. ಗೋಸಂವರ್ಧನ ಟ್ರಸ್ಟ್ ಕಾರ್ಯಕ್ರಮದ ಹಿನ್ನಲೆಯಲ್ಲಿ ನಗರಕ್ಕೆ ಆಗಮಿಸುತ್ತಿದ್ದಾರೆ. ನಂತರ ಭವನಕ್ಕೆ ಶ್ರೀಗಳು ಆಗಮಿಸಲಿದ್ದಾರೆ ಎಂದರು. 

Sringeri Sris to visit Trimathastha Brahmin Community Hall tomorrow

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close