SUDDILIVE || SHIVAMOGGA
ಪೂರ್ವಭಾವಿ ಸಭೆಯಲ್ಲಿ ಕನ್ನಡಪರ ಸಂಘಟನೆಗಳ ಬೇಡಿಕೆಗಳು- Demands of pro-Kannada organizations in preliminary meeting
ಪೂರ್ವಭಾವಿ ಸಭೆಯಲ್ಲಿ ಕನ್ನಡಪರ ಸಂಘಟನೆಗಳು ಕನ್ನಡ ನಾಮಫಲಕ ಹಾಕದ ಉದ್ಯಮುಗಳಿಗೆ ಸೂಚನಾಪತ್ರ ನೀಡಲು ಆಗ್ರಹಿಸಿವೆ.
ದಿನಾಂಕ 10.10.2025 ಶುಕ್ರವಾರದಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದಂತಹ ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆಯ ಜಿಲ್ಲಾ ಅಧ್ಯಕ್ಷರಾದ ಮಧುಸೂದನ್ ಎಸ್ಎಂ ರವರು ಹಲವು ಬೇಡಿಕೆಗಳನ್ನು ಜಿಲ್ಲಾಡಳಿತದ ಮುಂದೆ ಯಿಟ್ಟಿರುತ್ತಾರೆ ಅದರಲ್ಲಿ ಮೊದಲನೆಯದು ಎಲ್ಲಾ ವ್ಯಾಪಾರ ಆಸ್ಪತ್ರೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ತಮ್ಮ ತಮ್ಮ ನಾಮಫಲಕಗಳಲ್ಲಿ ಶೇಕಡ 60 ಕನ್ನಡವನ್ನು 40 ಆಂಗ್ಲ ಭಾಷೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಅದಕ್ಕೆ ಯಾರು ಪಾಲನೆ ಮಾಡುತ್ತಿಲ್ಲವೋ ಅವರನ್ನು ಗುರುತಿಸಿ ಅವರಿಗೆ ಸೂಚನಾ ಪತ್ರವನ್ನು ನೀಡಬೇಕೆಂದು ಆಗ್ರಹಿಸಿದರು
ಎಲ್ಲಾ ಸರ್ಕಾರಿ ಕಚೇರಿಗಳ ಮೇಲೆ ಕನ್ನಡದ ಬಾವುಟವನ್ನು ಕಟ್ಟುವ ಕೆಲಸಕ್ಕೆ ಸರಿಯಾದ ರೀತಿಯಲ್ಲಿ ಅಂದರೆ ಕೋಲುಗಳು ನೀರಿನ ಪೈಪುಗಳು ಎಲೆಕ್ಟ್ರಿಕಲ್ ಪೈಪ್ ಗಳು ಉಪಯೋಗವನ್ನು ಮಾಡದೆ ಸರಿಯಾದ ರೀತಿಯಲ್ಲಿ ಧ್ವಜ ಕಂಬಗಳನ್ನ ಬಳಸುವುದರ ಮೂಲಕ ಬಾವುಟ ಹಾರಿಸಬೇಕೆಂದು ಬೇಡಿಕೆ ಇಡಲಾಯಿತು.
ಎಲ್ಲಾ ಸರ್ಕಾರಿ ಶಾಲಾ ಮಕ್ಕಳೊಂದಿಗೆ ಖಾಸಗಿ ಶಾಲೆಯ ಆಂಗ್ಲ ಭಾಷೆಯ ಶಾಲೆಗಳ ಮಕ್ಕಳನ್ನು ಸಹ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಕರೆಸಿ ಅವರಲ್ಲಿ ಕನ್ನಡದ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಕಾರ್ಯೊನ್ಮುಖರಾಗಬೇಕೆಂದು ಬೇಡಿಕೆ ನೀಡಲಾಯಿತು ನಾಲ್ಕನೇ ಬೇಡಿಕೆ ಎಂದರೆ ಯಾವ ರೀತಿಯಲ್ಲಿ ದಸರಾ ಹಬ್ಬದಲ್ಲಿ ದೀಪಾಲಂಕಾರವನ್ನು ಮಾಡಲಾಗುತ್ತದೆಯೋ ಅದೇ ರೀತಿಯಲ್ಲಿ ನಾಡಹಬ್ಬ ಕನ್ನಡ ರಾಜ್ಯೋತ್ಸವಕ್ಕೆ ನಗರದಾದ್ಯಂತ ದೀಪಾಲಂಕಾರ ಮತ್ತು ಕನ್ನಡದ ಕಂಪನ್ನು ಸೂಸುವ ರಸಮಂಜರಿ ಕಾರ್ಯಕ್ರಮವನ್ನು ನೆರವೇರಿಸಬೇಕೆಂದು ಬೇಡಿಕೆ ಇಡಲಾಯಿತು.
ಈ ಸಂದರ್ಭದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಗುರುದತ್ತ ಹೆಗಡೆಯವರು ಎಲ್ಲವೂ ಉಚಿತವಾದಂತಹ ಬೇಡಿಕೆಯಾಗಿದ್ದು ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಬೇಡಿಕೆಗೆ ಸಭೆಗೆ ಬಂದಿದ್ದಂತಹ ಸಾಂಸ್ಕೃತಿಕ ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಮುಖ್ಯಸ್ಥರುಗಳಿಗೆ ಸಂಬಂಧಪಟ್ಟ ಬೇರೆ ಇಲಾಖೆಗಳಿಗೆ ಸ್ಥಳದಲ್ಲೇ ಆದೇಶವನ್ನು ನೀಡುಉದರ ಮೂಲಕ ಕರವೇ ಸಿಂಹ ಸೇನೆ ಬೇಡಿಕೆಗೆ ಸ್ಪಂದಿಸುತ್ತಾರೆ
ಸಂಘಟನೆಯ ಪರವಾಗಿ ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿಗಳಾದ ಅಭಿಜಿತ್, ನಗರ ಘಟಕದ ಅಧ್ಯಕ್ಷರಾದ ಕಾರ್ತಿಕ್ ಪೂಜಾರಿ ,ಜಿಲ್ಲಾ ಉಪಾಧ್ಯಕ್ಷರಾದ ನಯಾಜ್, ಪ್ರಶಾಂತ್ ರೆಡ್ಡಿ ,ಶ್ರೀನಿವಾಸ್ , ಜಿಲ್ಲಾಸಂಘಟನಾ ಕಾರ್ಯದರ್ಶಿ ರಾಘವೇಂದ್ರ ರವರು ಜಿಲ್ಲಾಧಿಕಾರಿ ಮಾನ್ಯ ಶ್ರೀಗುರುದತ್ತ ಹೆಗಡೆಯವರಿಗೆ ತುಂಬು ಹೃದಯದ ಧನ್ಯವಾದಗಳು ತಿಳಿಸಿರುತ್ತಾರೆ
Demands of pro-Kannada organizations in preliminary meeting