Rss ಪ್ರತಿಕೃತಿ ಪೊಲೀಸರ ವಶಕ್ಕೆ, RSS ವಿರುದ್ಧ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ-RSS replica seized by police

 SUDDILIVE || SHIVAMOGGA

Rss ಪ್ರತಿಕೃತಿ ಪೊಲೀಸರ ವಶಕ್ಕೆ, RSS  ವಿರುದ್ಧ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ-RSS replica seized by police, District Youth Congress protests against RSS

RSS, replica

ಆರ್ ಎಸ್ ಎಸ್ ನಿರ್ಬಂಧ ಹಾಕಿರುವ ವಿಷಯವಾಗಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಲಾಗಿದ್ದು, ಜೀವಬೆದರಿಕೆ ಹಾಕಿದ ಪ್ರಕರಣವನ್ನು ಉನ್ನತ ಮಠದ ತನಿಖೆ ಅಗ್ರಹಿಸಿ ಜಿಲ್ಲಾ ಯುವ ಕಾಂಗ್ರೆಸ್ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಿದೆ.


ರಾಜ್ಯದಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳನ್ನು ನಿರ್ಮಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿದ್ದು ಈ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಸಚಿವರ ತೇಜೋವಧೆ ಮಾಡುವ ಮತ್ತು ಬೆದರಿಸುವ ಕೆಲಸ ಮಾಡಲಾಗುತ್ತಿತ್ತು ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂಘಟನೆ ಆಗ್ರಹಿಸಿದೆ.

ಆರ್ ಎಸ್ ಎಸ್ ಸಂಘಟನೆಯು ಕೋಮು ಪ್ರಚೋದನೆ ನೀಡುತ್ತಾ ರಾಜ್ಯದಲ್ಲಿ ಅಶಾಂತಿಯ ವಾತಾವರಣವನ್ನು ಸೃಷ್ಟಿಸುತ್ತಿದೆ ಮತ್ತು ಇಂತಹ ಸಂಘಟನೆಯ ಚಟುವಟಿಕೆಗಳನ್ನು ನಿರ್ಬಂಧಿಸಬೇಕೆಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವ ಬ್ಯಾಂಕ್ ಖರ್ಗೆ ಸಿಎಂ ಅವರಿಗೆ ಪತ್ರ ಬರೆದಿದ್ದರು. ಆರ್ ಎಸ್ ಎಸ್ ಚಟುವಟಿಕೆಗಳನ್ನು ರಾಜ್ಯ ಸರ್ಕಾರ ನಿರ್ಬಂಧಿಸುವುದನ್ನು ಸಹಿಸಲಾಗದ ಕೆಲ ಮೂಲಭೂತ ಆದಿಗಳು ಸಚಿವರಿಗೆ ಬೆದರಿಕೆ ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಸಚಿವರಿಗೆ ಇಂತಹ ಬೆದರಿಕೆ ಕರೆಗಳು ಬಂದರೆ ಜನಸಾಮಾನ್ಯರ ಗತಿ ಏನು ಎಂದು ಸಂಘಟನೆ ಆತಂಕ ವ್ಯಕ್ತಪಡಿಸಿದೆ.

ಆದ್ದರಿಂದ ಪ್ರಿಯಾಂಕ ಖರ್ಗೆ ಅವರಿಗೆ ಬಂದಿರುವ ಬೆದರಿಕೆ ಕರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಾಡುತ್ತಿರುವ ನಿಬಂಧನೆಗಳ ಕುರಿತು ಮಾನ್ಯ ಗೃಹ ಸಚಿವರು ಉನ್ನತ ಮಟ್ಟದ ತನಿಖೆ ನಡೆಸಬೇಕು. ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಇನ್ನಷ್ಟು ಭದ್ರತೆ ಒದಗಿಸಬೇಕು. ಈ ಬೆದರಿಕೆ ಕರೆಗಳ ಹಿಂದೆ ಇರುವ ಕಾರಣದ ಕೈಗಳನ್ನು ಬಂಧಿಸಿ ಜೈಲಿಗೆ ಕಳಿಸಬೇಕು ಎಂದು  ಯುವ ಕಾಂಗ್ರೆಸ್ ಆಗ್ರಹಿಸಿದೆ.

ಈ ಬಗ್ಗೆ ಮಾತನಾಡಿದ ಹೆಚ್ ಸಿ ಯೋಗೇಶ್ ಮಾತನಾಡಿ, ಸಿಜೆಐ ತೋರಿಸಿದ ವಿಚಾರವಾಗಿ ಬಿಜೆಪಿ ಮಾತನಾಡದೆ ಆರ್ ಎಸ್ ಎಸ್ ವಿಷಯವಾಗಿ ಮಾತ್ರ ಮಾತನಾಡುತ್ತಿರುವುದು ಆತಂಕ ಕಾರಿ ವಿಷಯವೆಂದು ಹೇಳಿದರು. ಆರ್ ಎಸ್ ಎಸ್ ಸಂಸ್ಥೆಗಳಿಗೆ ದಯವಿಟ್ಟು ಯಾರ ಮಕ್ಕಳನ್ನು  ಕಳಿಸಬೇಡಿ ಸ್ಕೇಟಿಂಗ್ ಸ್ವಿಮ್ಮಿಂಗ್ ಪೂಲ್ ಬದಲಾದ ಚಟುಕೆಗಳನ್ನು ಕೆಲ ಸಂಸ್ಥೆಗಳೇ ನಡೆಸುತ್ತಿವೆ ಅಲ್ಲಿ ಕಳಿಸುವಂತೆ ಮನವಿ ಮಾಡಿದರು.

ಜಿಲ್ಲಾ ಯುವ ಕಾಂಗ್ರೆಸ್ ನ ಅಧ್ಯಕ್ಷ ಹರ್ಷಿತ್ ಗೌಡ ಮಾತನಾಡಿ, ಗಾಂಧಿಯನ್ನ ಕೊಂದ ರಕ್ತ ಆರ್ ಎಸ್ ಎಸ್ ಆಗಿದೆ. ಇದು ಮುಂದುವರೆದು ಸಚಿವರಿಗೆ ಬೆದರಿಕೆ ಕರೆ ಮಾಡಲಾಗಿದೆ. ಈ  ಹಿನ್ನಲೆಯಲ್ಲಿ ಸಂಘದ ನಿರ್ಬಂಧ ಅರ್ಥಪೂರ್ಣವಾಗಿದೆ ಎಂದರು. 

ಆರ್ ಎಸ್ ಎಸ್ ಪ್ರತಿಕೃತಿ ಪೊಲೀಸರ ವಶಕ್ಕೆ

ಗಣವೇಶಧಾರಿಯಾಗಿ ಪ್ರತಿಕೃತಿಯನ್ನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಿದ್ದಪಡಿಸಿ ಇಡಲಾಗಿತ್ತು. ಖಾಕಿ ಪ್ಯಾಂಟು, ಬಿಳಿ ಅಂಗಿ, ಕರಿಟೋಪಿ, ದಂಡಹಿಡಿದ ಪ್ರತಿಕೃತಿಯನ್ನ ಸಿದ್ದಮಾಡಿಕೊಳ್ಳಲಾಗಿತ್ತು. ಇದನ್ನ ನಗರದ ಗೋಪಿ ವೃತ್ತದಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ತೆಗೆದುಕೊಂಡು ಹೋಗಿ  ಸುಡುವ ಮೂಲಕ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಪೊಲೀಸರು ಆರ್ ಎಸ್ ಎಸ್ ಪ್ರತಿಕೃತಿಯನ್ನ ವಶಕ್ಕೆ ಪಡೆದು ಹತ್ತಿರದ ಠಾಣೆಗೆ ತೆಗೆದುಕೊಂಡು ಹೋದರು. 

RSS replica seized by police

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close