SUDDILIVE || SHIVAMOGGA
ವಿಮಾನ ನಿಲ್ದಾಣಕ್ಕೆ ಆಟೋ ಬಿಡಬೇಡಿ-ಪ್ರತಿಭಟನೆ-Don't let autos go to the airport - protest
ಶಿವಮೊಗ್ಗ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣದಲ್ಲಿ ಆಟೋ ಚಾಲಕರಿಂದ ಬಾಡಿಗೆ ಮಾಡಿ ಕಾನೂನು ಉಲ್ಲಂಘನೆ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವಂತೆ ಸೋಗಾನೆ ವಿಮಾನ ನಿಲ್ದಾಣ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘ ಪ್ರತಿಭಟನೆ ನಡೆಸಿ ಆರ್‌ಟಿಓ ಅವರಿಗೆ ಮನವಿ ನೀಡಿತು.
ಆಟೋ ಚಾಲಕರಿಗೆ ಬಸ್ ಸ್ಟ್ಯಾಂಡಿನಿಂದ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬಾಡಿಗೆ ಮಾಡಲು ಅನುಮತಿ ಇದ್ದರೂ ವಿಮಾನ ನಿಲ್ದಾಣ ಬಸ್ ಸ್ಟ್ಯಾಂಡಿನಿಂದ 14.50 ಕಿಲೋಮೀಟರ್ ಇದ್ದು ಪ್ರತಿನಿತ್ಯ ಇದರ ಉಲ್ಲಂಘನೆ ಆಗುತ್ತಿದೆ ಬಾಡಿಗೆ ಮಾಡುತ್ತಿರುವುದು ಜೊತೆಗೆ ಕೆಲವು ಆಪ್ಗಳನ್ನು ಬಳಸಿ ಬಾಡಿಗೆ ಮಾಡಲಾಗುತ್ತಿದೆ ಇದರಿಂದ ಕಾನೂನು ರೀತಿಯಲ್ಲಿ ರಿಜಿಸ್ಟರ್ ಆಗಿರುವ ಏರ್ಪೋರ್ಟ್ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರಿಗೆ ತೊಂದರೆಯಾಗುತ್ತಿದೆ ಎಂದು ಸಂಘಟನೆ ಮನವಿಯಲ್ಲಿ ಆಗ್ರಹಿಸಿದೆ.
ಇದೇ ರೀತಿಯಾಗಿ ಹಲವು ಬಾರೀ ಸಂಘ ಮನೆಯನ್ನು ಸಲ್ಲಿಸಿದರು ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂಘಟನೆ ದೂರಿದೆ ಮನವಿಯನ್ನು ಪರಿಗಣಿ ಪರಿಗಣನಿಗೆ ತೆಗೆದುಕೊಳ್ಳದೆ ಇದ್ದಲ್ಲಿ ಸೋಗಾನೆ ವಿಮಾನ ನಿಲ್ದಾಣ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘವು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಿದೆ ಎಂದು ಸಂಘಟನೆ ಮನವಿಯಲ್ಲಿ ದೂರಿದೆ.
Don't let autos go to the airport - protest
