SUDDILIVE || SORABA
ನಿನ್ನೆ ಸೊರಬದಲ್ಲೂ ಆರ್ ಎಸ್ ಎಸ್ ಪಥಸಂಚಲನಕ್ಕೆ ಬದಲೀ ಮಾರ್ಗ ಸೂಚಿಸಲಾಗಿತ್ತಾ?Was an alternative route suggested for the RSS procession in Soraba yesterday?
ಆರ್ ಎಸ್ ಎಸ್ ಗೆ ನಿರ್ಬಂಧವಹಿಸಿದ್ದ ಬೆನ್ನಲ್ಲೆ ಕಲ್ಬುರ್ಗಿಯಲ್ಲಿ ಅದರಲ್ಲೂ ಚಿತ್ತಾಪುರ ಮತ್ತು ಗುರುಮಿಠ್ಕಲ್ ಗಳಲ್ಲಿ ಆರ್ ಎಸ್ ಎಸ್ ಪಥ ಸಂಚಲನಕ್ಕೆ ಬ್ರೇಕ್ ಹಾಕಿದಂತೆ ಸೊರಬ ಕ್ಷೇತ್ರದಲ್ಲೂ ನಿನ್ನೆ ನಡೆದ ಪಥ ಸಂಚಲನಕ್ಕೆ ಬದಲೀ ಮಾರ್ಗ ಸೂಚಿಸಲಾಗಿದೆ ಎಂದು ಯೂಟ್ಯೂಬ್ ಮಾಧ್ಯಮವೊಂದು ಪ್ರಚಾರ ಪಡಿಸಿದೆ.
ಆರ್ ಎಸ್ ಎಸ್ ನ ಪಥ ಸಂಚಲನ ನಿನ್ನೆ ಸೊರಬದಲ್ಲಿ ನಿಗದಿಪಡಿಸಲಾಗಿದೆ. ನಿನ್ನೆ ಸಂಜೆ 4 ಗಂಟೆಗೆ ಪಥ ಸಂಚಲನ ಹಮ್ಮಿಕೊಳ್ಳಲಾಗಿದೆ. ಗಿರಿಜಾಶಂಕರ್ ಸಭಾಭವನದಿಂದ ಈ ಪಥಸಂಚಲನ ನಡೆಯಬೇಕಿತ್ತು. ಆದರೆ ಈ ಪಥಸಂಚಲನವನ್ನ ನಿನ್ನೆ ಬಂಗಾರಪ್ಪನವರ 93 ಹುಟ್ಟುಹಬ್ವದ ಪ್ರಯುಕ್ತ ಮಾಧ್ಯಮವು ಆರ್ ಎಸ್ ಎಸ್ ಗೆ ಬದಲೀಮಾರ್ಗ ಸೂಚಿಸಲಾಗಿತ್ತು ಎಂದು ಪ್ರಚಾರ ಪಡಿಸಿದೆ.
ಗಣವೇಷದಾರಿಯಾಗಿ ದಂಡ ಹಿಡಿದು ಪಥ ಸಂಚಲನ ಮಾಡುತ್ತಿದ್ದ ಆರ್ ಎಸ್ ಎಸ್ ಗೆ ಈ ಸ್ಥಿತಿಗೆ ಬರಲು ಬಿಜೆಪಿಯೇ ಕಾರಣ ಎಂದು ಮಾಧ್ಯಮ ವಿಷ್ಲೇಶಿಸಿದೆ. ಅಧಿಕಾರದಲ್ಲಿದ್ದ ಬಿಜೆಪಿ ಕಾರ್ಯಕರ್ತನನ್ನ ನಿರ್ಲಕ್ಷಿಸಿ ಭ್ರಷ್ಠಾಚಾರವನ್ನ ಮೈಗೂಡಿಸಿಕೊಂಡ ಪರಿಣಾಮ ಆರ್ ಎಸ್ ಎಸ್ ಗೆ ಈ ಸ್ಥಿತಿ ತಲುಪಿದೆ.
ಜನ ಬಿಜೆಪಿ ಆಡಳಿತದಿಂದ ಬೇಸತ್ತ ಪರಿಣಾಮ ಕಾಂಗ್ರೆಸ್ ಗೆ 135 ಸ್ಥಾನ ನೀಡಿದ್ದಾರೆ. ಕಾಂಗ್ರೆಸ್ ತಮ್ಮ ಸೈದ್ಧಾಂತಿಕವಾಹಿಗಿ ವಿರೋಧಿಯಾಗಿರುವವರನ್ನ ಹೊಸಕಿ ಹಾಕುವುದರಲ್ಲಿ ತಪ್ಪಿಲ್ಲ. ಆದರೆ ಬಿಜೆಪಿಯ ದುರಾಡಳಿತದಿಂದ ಆರ್ ಎಸ್ ಎಸ್ ಗೆ ಈ ಸ್ಥಿತಿ ಬಂದಿದೆ. ಈಗಲೂ ಎಚ್ಚೆತ್ತುಕೊಳ್ಳಬೇಕೆಂದು ಮಾಧ್ಯಮ ಎಚ್ಚರಿಸಿದೆ. ಒಟ್ಟಿನಲ್ಲಿ ಕಂಡ ಕಂಡಲ್ಲಿ ಆರ್ ಎಸ್ ಎಸ್ ನ್ನ ತುಳಿಯುವ ದೃಶ್ಯಗಳು ಹೆಚ್ಚಾಗಿ ಕಂಡು ಬರುತ್ತಿರುವುದರಿಂದ ಕಾಂಗ್ರೆಸ್ ಇದನ್ನ ಹೆಚ್ಚಾಗಿ ಮಾಡಿಕೊಂಡು ಹೋದರೆ ಅದೂ ಸಹ ಆ ಪಕ್ಷಕ್ಕೆ ಮುಳುವಾಗುವ ಸಾಧ್ಯತೆಯಿದೆ.
Was an alternative route suggested for the RSS procession in Soraba yesterday?

