ad

ಕಟ್ಟಡದಿಂದ ಬಿದ್ದು ಎಲೆಕ್ಟ್ರಿಷಿಯನ್ ಸಾವು-Electrician dies after falling from building

 SUDDILIVE || BHADRAVATHI

ಕಟ್ಟಡದಿಂದ ಬಿದ್ದು ಎಲೆಕ್ಟ್ರಿಷಿಯನ್ ಸಾವು-Electrician dies after falling from building

Electrician, building

ನೂತನ ಮನೆ ನಿರ್ಮಾಣಕ್ಕೆ ಎಲೆಕ್ಟ್ರಿಷಿಯನ್ ಕೆಲಸ ಮಾಡಲು ಮುಂದಾಗಿದ್ದ ಎಲೆಕ್ಟ್ರೀಷಿಯನ್ ಕಟ್ಟಡದಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಭದ್ರಾವತಿಯ ಹೆಬ್ಬಂಡಿಯಲ್ಲಿ ನಡೆದಿದೆ. 

ಹಬ್ಬದ ವೇಳೆ ಹೆಬ್ವಂಡಿಯಲ್ಲಿ ನೂತನ ಮನೆ ನಿರ್ಮಾಣವಾಗುತ್ತಿದ್ದ ಕಟ್ಟಡದಲ್ಲಿ ಎಲೆಕ್ಟ್ರೀಷಿಯನ್ ಕೆಲಸ ಮಾಡುತ್ತಿದ್ದ ಸುರೇಶ್ (42) ಕಟ್ಟಡದಿಂದ ಬಿದ್ದು ಗಾಯಗೊಂಡಿದ್ದರು. ಅವರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿತ್ತು. 


ಈ ಘಟನೆ ನಾಲ್ಕೈದು ದಿನಗಳ ಹಿಂದೆನಡೆದಿದೆ. ಇಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸುರೇಶ್ ಸಾವುಕಂಡಿದ್ದಾರೆ. ಸುರೇಶ್ ಅವರಿಗೆ ಮದುವೆಯಾಗಿದ್ದು ಸಣ್ಣಮಕ್ಕಳಿದ್ದಾರೆ. ಘಟನೆ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

Electrician dies after falling from building


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close