SUDDILIVE || SHIVAMOGGA
ಕನ್ನಡ ಬಳಕೆ ಕಡ್ಡಾಯಕ್ಕೆ ಕರವೇ ಸ್ವಾಭಿಮಾನಿ ಬಣ ಆಗ್ರಹ-Self-respecting people demand mandatory use of Kannada
ವಾಣಿಜ್ಯ ಮಳಿಗೆಯ ನಾಮಫಲಕ ಜಾಹೀರಾತು ಫಲಕ ಶಾಲೆ ಮತ್ತು ಶಾಲಾ ವಾಹನಗಳಲ್ಲಿನಾ ನಾಮಫಲಕ ಆಹಾರ ಸರಬರಾಜುಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ಒತ್ತಾಯಿಸಿ ಇಂದು ಕರವೇಸ್ವಾಭಿಮಾನಿ ಬಣ ಡಿಸಿಗೆ ಮನವಿ ಸಲ್ಲಿಸಿದೆ.
ಕನ್ನಡ ನಾಡು ಭಾಷೆ ಎಂದು ಭಾಷಣದಲ್ಲಿ ಮಾತ್ರ ಬೊಗಳೆ ಬಿಡುವ ರಾಜಕಾರಣಿಗಳು ಮತ್ತು ಅದಕ್ಕೆ ತಕ್ಕಂತೆ ವರ್ತಿಸುವ ಅಧಿಕಾರಿಗಳು ಎಲ್ಲಿಯೂ ಕನ್ನಡವನ್ನು ಬಳಸುವಂತೆ ಒತ್ತಾಯ ಪಡಿಸುವುದಾಗಲಿ, ಕಾನೂನನ್ನು ಪಾಲಿಸುವುದಾಗಲಿ ಯಾವುದನ್ನು ಮಾಡದೆ ಕನ್ನಡ ಉಳಿವಿಗಾಗಿ ಪತ್ರಗಳಲ್ಲಿ ಸುತ್ತೋಲೆಗಳಲ್ಲಿ ಮಾತ್ರ ಕಾಣುವುದು ವಿಪರ್ಯಾಸದ ಸಂಗತಿಯಾಗಿದೆ
ಕನ್ನಡ ಉಳಿವಿಗಾಗಿ ಹೋರಾಟ ಮಾಡುವ ನಾಯಕರ ಮಕ್ಕಳೇ ಆಂಗ್ಲ ಶಾಲೆಗೆ ಸೇರಿಸುವುದು ತಮ್ಮ ವ್ಯವಹಾರಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಆಸ್ಪತ್ರೆಗಳಲ್ಲಿ ತಾವುಗಳೇ ಕನ್ನಡ ಬಳಕೆಯನ್ನು ಮಾಡದೆ ಕನ್ನಡ ನಾಡಿಗೆ ಕನ್ನಡದ ಜನತೆಗೆ ದ್ರೋಹ ಎಸಗುತ್ತಿದ್ದಾರೆ
ಕರ್ನಾಟಕ ಸರ್ಕಾರ ಈಗಾಗಲೇ ಕನ್ನಡ ಉಳಿವಿಗಾಗಿ ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿದೆ ಅವುಗಳೆಲ್ಲವೂ ಕಾಗದಗಳಲ್ಲೇ ಉಳಿದುಹೋಗಿದೆ ಕಾನೂನಿನ ಪ್ರಕಾರ ಯಾವುದೇ ಅಂಗಡಿ ಮುಂಗಟ್ಟುಗಳ ಮುಂದೆ ಶೇಕಡ 60ರಷ್ಟು ಕನ್ನಡ ಭಾಷೆ ಹಾಗೂ ಶೇಕಡ 40ರಷ್ಟು ಅನ್ಯ ಭಾಷೆ ಬಳಸುವಂತೆ ಆದೇಶವಿದ್ದರೂ ಸಹ ಇದನ್ನು ಅನುಷ್ಠಾನ ತರಲು ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇರುವುದು ಅವರ ಭಾಷಾ ಪ್ರೀತಿ ಏನೆಂದು ಇಲ್ಲಿಯ ಗೊತ್ತಾಗುತ್ತದೆ
ಸಾಮಾನ್ಯವಾಗಿ ನಗರಗಳಲ್ಲಿ ಎಲ್ಲಿ ನೋಡಿದರೂ ಯಾವ ಜಾಹಿರಾತು ಫಲಕಗಳಲ್ಲಿಯೂ ಅಂಗಡಿ ಮುಂಗಟ್ಟುಗಳ ಮುಂದೆ ಪ್ರದರ್ಶನ ಮಾಡಿದ ನಾಮ ಪಲಕಗಳಲ್ಲಿ ಹಾಗೆಯೇ ಶಾಲೆಗೆ ಓಡಾಡುವ ವಾಹನಗಳಲ್ಲಾಗಲಿ, ಆಹಾರ ಪೂರೈಕೆಯ ಕಂಪನಿಗಳ ಹೆಸರು, ಸಮವಸ್ತ್ರ ಗಳಲ್ಲಾಗಲಿ ಕನ್ನಡ ಇಲ್ಲದೆ ಇಂಗ್ಲಿಷ್ ಭಾಷೆ ರಾರಾಜಿಸುತ್ತಿರುವುದು ಖಂಡನೀಯ ಇವೆಲ್ಲವನ್ನೂ ಅಧಿಕಾರಿಗಳು ಗೊತ್ತಿದ್ದರೂ ಕಂಡರೂ ಕಾಣದ ಹಾಗೆ ವರ್ತನೆ ಮಾಡುತ್ತಿರುವುದು ಕನ್ನಡ ನಾಡು ನುಡಿ ಭಾಷೆಗೆ ಮಾಡುವ ದ್ರೋಹವಾಗಿರುತ್ತದೆ ಹಾಗಾಗಿ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಜಾಹಿರಾತು ಫಲಕದಲ್ಲಿ ಪ್ರತಿಷ್ಠಿತ ಶಾಲೆಗಳ ಗೋಡೆ ಬರಹದಲ್ಲಾಗಲಿ ಶಾಲೆಗೆ ಓಡಾಡುವ ವಾಹನಗಳ ಫಲಕದಲ್ಲಾಗಲಿ, ಮನೆಮನೆಗೆ ಆಹಾರ ಪೂರೈಕೆ ಮಾಡುವ ಕಂಪನಿ ಗಳಲ್ಲಾಗಲಿ ಈ ಕೂಡಲೇ ಕನ್ನಡ ಬಳಕೆಯನ್ನು ಬಳಸುವಂತೆ ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಒತ್ತಾಯಿಸುತ್ತದೆ ಒಂದು ಪಕ್ಷದಲ್ಲಿ ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳದೆ ಇದ್ದಲ್ಲಿ ಸಂಘಟನೆಯು ಕಟ್ಟಾಳುಗಳ ಮುಂದಾಳತ್ವದಲ್ಲಿ ಕನ್ನಡ ಬಳಸದ ಜಾಹೀರಾತು ಬಳಕೆಗಳಿಗೆ ಮಸಿ ಬಳೆಯುವುದು ಹಾಗೂ ಕನ್ನಡ ಬಳಸದೆ ಓಡಾಡುವ ಶಾಲಾ ವಾಹನಗಳ ವಾಹನಗಳ ಅಡ್ಡ ಹಾಕುವುದು ಅಂತಹ ಶಾಲೆಯ ವಿರುದ್ಧ ಮುತ್ತಿಗೆ ಹಾಕಲಾಗುವುದು ಎಂದು ಸಂಘಟನೆ ಎಚ್ಚರಿಸುತ್ತದೆ ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ಎಚ್ಎಸ್ ಜಿಲ್ಲಾ ಖಜಾಂಚಿ ಗಣೇಶ್ ಜಿಲ್ಲಾ ಉಪಾಧ್ಯಕ್ಷರಾದ ವಿಜಯಕುಮಾರ್ ಜಿಲ್ಲಾ ಕಾರ್ಯದರ್ಶಿ ರಾಮು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಾಧಿಕ್ ನಗರಾಧ್ಯಕ್ಷ ಜೀವನ್ ಯುವ ಅಧ್ಯಕ್ಷ ಸಂತೋಷ್ ಮಹಿಳಾ ಘಟಕದ ಅಧ್ಯಕ್ಷ ಕವಿತಾ ಉಪಾಧ್ಯಕ್ಷರಾದ ಪದ್ಮ ಮಾಲತಿ ಪ್ರಧಾನ ಕಾರ್ಯದರ್ಶಿ ಆರ್ಥಿಕ ತಿವಾರಿ ಸಂಘಟನಾ ಕಾರ್ಯದರ್ಶಿ ಜ್ಯೋತಿ ನಾಗರಾಜ್ ಪ್ರದೀಪ್ ನೂರಲ್ಲಕಾನ್ ಪ್ರಚಾರ ಸಮಿತಿ ಅಧ್ಯಕ್ಷರಾದ ಮಾಲತೇಶ್ ಮುಂತಾದ ಪದಾಧಿಕಾರಿಗಳು ಕಾರ್ಯಕರ್ತರು ಹಾಜರಿದ್ದರು.
Self-respecting people demand mandatory use of Kannada
