SUDDILIVE || SHIVAOGGA
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ, ಸ್ಪಷ್ಟನೆ ನೀಡದ ಅಧಿಕಾರಿಗಳು-Sharavathi Pumped Storage Project is reasonable
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಯಾವುದೇ ಪರಿಸರ ನಾಶವಗೋದಿಲ್ಲ. ಇದರಿಂದ ಈ ಯೋಜನೆ ಮುಂದಿನ ದಿನಗಳಲ್ಲಿ ವಿದ್ಯುತ್ ಅಭಾವನ್ನ ತಪ್ಪಿಸಲಿದೆ ಎಂದು ಕೆಪಿಸಿಎಲ್ ಅಧಿಕಾರಿಗಳು ಸ್ಪಷ್ಟಪಡಿಸಿದರೂ ಯೋಜನೆಯ ಗ್ರೌಂಡ್ ರಿಪೋರ್ಟ್ ವಿವರಿಸುವಲ್ಲಿ ವಿಫಲರಾದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧಿಕಾರಿ ಶಿಲ್ಪ ಕೆಪಿಸಿಎಲ್ ವರದಿಯನ್ನ ರ್ಯಾಪ್ ಕೋಸ್ ಸೆಂಟ್ರಲೈಜಿಂಗ್ ಗೆ ಕೊಟ್ಟು ಸರ್ವೆ ಮಾಡಿಸಲಾಗಿದೆ. ಡ್ಯಾಂ ಮತ್ತು ಸೂಕ್ಷ್ಮ ಪ್ರದೇಶವಿರುತ್ತದೆ ಎಂದು ಮಾಹಿತಿ ಹಕ್ಕಿನ ಅಡಿ ಮಾಹಿತಿ ನೀಡಿಲ್ಲ. ಎಂಒಎಫ್ ನಲ್ಲಿ ಅರಣ್ಯ ಎಫ್ ಸಿ ಮತ್ತು ಎನ್ ವೆರೆಂಟ್ ಬಗ್ಗೆ ಮಾಹಿತಿ ಇದೆ. ಅಲ್ಲಿ ಸಾರ್ವಜನಿಕರು ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
2017 ರಿಂದ ಅಧ್ಯಾನ ನಡೆಸಲಾಗುತ್ತಿದೆ. ಪಿಎಫ್ಆರ್ 5000 ಕೋಟಿ ಇತ್ತು. ಪ್ರಾಜೆಕ್ಟ್ ಅಂದಾಜುವೆಚ್ಚ 2023ಯಲ್ಲಿ ಅಂದಿನ ಅಂದಾಜುವೆಚ್ಚದ ಪ್ರಕಾರ ಹಣ ಹೆಚ್ಚಾಗಿದೆ. ಇನ್ನೂ ಈ ಯೋಜನೆಗೆ ಕೇಂದ್ರದ ಅನುಮತಿ ಪಡೆಯಬೇಕಿದೆ ಪ್ರೋಸೆಸ್ ನಡೆಯುತ್ತಿದೆ ಎಂದರು.
ವನ್ಯಜೀವಿ ಪ್ರದೇಶದಲ್ಲಿ ಅನುಮತಿ ಪಡೆಯಲಿದೆಯಾ? ಡಿಎಜಿಎಫ್ ವರದಿ ಬೇಡ ಎಂದಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿ ವಿಜಯ್ ಮಾತನಾಡಿ ಅವರ ಬೇಡ ಎಂಬ ಪ್ರಶ್ನೆಗೆ ಉತ್ತರ ನೀಡಲಾಗಿದೆ. ವನ್ಯಜೀವಿ ಅರಣ್ಯ ಪ್ರದೇಶದ ಅನುಮತಿ ಸಿಗಬೇಕಿದೆ. ಅರಣ್ಯ ಕ್ಲಿಯರೆನ್ಸ್ ಆದ ಮೇಲೆ ವನ್ಯಜೀವಿ ಅನುಮತಿ ಪಡೆಯಲಾಗುವುದು. ಎನಾದರು ತೊಡಕು ಬಂದರೆ ಅದನ್ನ ನಿವಾರಿಸಲಾಗುವುದು ಎಂದು ತಿಳಿಸಿದರು.
ಸ್ಟಡಿ ರಿಪೋರ್ಟ್ ಏನಾಗಿದೆ ಎಂಬುದರ ಬಗ್ಗೆ ಅಧಿಕಾರಿಗಳ ಉತ್ತರ ದೊರೆತಿಲ್ಲ.0.37 ಟಿಎಂಸಿ ನೀರು ಶರಾವತಿ ಪಂಪ್ಡ್ ಸ್ಟೋರೇಜ್ ಬೇಕಿದೆ. 1.3 ಟಿಎಂಸಿ ಶರಾವತಿ ನದಿಯಲ್ಲಿ ಸ್ಟೋರೇಜ್ ಇರುವುದರಿಂದ ವ್ಯತ್ಯಾಸ ಬರೊಲ್ಲ. ಲ್ಯಾಂಡ್ ಸ್ಲೈಡ್ ಗೆ ವರಾಹಿಯಲ್ಲಿ ಆಗಿಲ್ಲ. ಅಲ್ಲಿ ಟನಲ್, ಅಂಡರ್ ಗ್ರೌಂಡ್ ಯೋಜನೆಇದೆ. ಅದರಂತೆ ಇಲ್ಲಿಯೂ ನಡೆಯಲಿದೆ ಎಂಬ ಸಮ್ಜಾಯಿಷಿಯನ್ನ ಅಧಿಕಾರಿ ನೀಡಿದ್ದಾರೆ.
12 ಸಾವಿರದಿಂದ 18000 ಮೆಗಾವ್ಯಾಟ್ಸ್ ಬೇಕಿದೆ. ಪ್ರತಿ ವರ್ಷ 15% ವಿದ್ಯುತ್ ಬೇಡಿಕೆ ಹೆಚ್ಚಾಗಲಿದೆ. ಇದು ಮುಂದಿನ ದಿನಗಳಲ್ಲಿ 38 ಸಾವಿರ ಮೆಗಾವ್ಯಾಟ್ಸ್ ಬೇಡಿಕೆಯಿದೆ. 220 ಕೆವಿ ಸಿಸ್ಟಮ್ ನಲ್ಲಿ ತೆಗೆದುಕೊಂಡು ಹೋಗುತ್ತಿದ್ದೇವೆ. ಗೇರ್ ಸೊಪ್ಪದಿಂದ ಎಸ್ ಟಿ ಆರ್ ಪಿಯಲ್ಲಿ 35 ಕಾರಿಡಾರ್ ನಲ್ಲಿ ವಿದ್ಯುತ್ ಸಂಪರ್ಕ ಸರಬರಾಜು ಮಾಡಲಾಗುವುದು.
Sharavathi Pumped Storage Project is reasonable
