ad

ಶರಾವತಿ ಪಂಪ್ಡ್ ಸ್ಟೋರೇಜ್ ಗೆ ರೈತ ಸಂಘ ಆಕ್ಷೇಪ- Farmers' association objects to Sharavati pumped storage

SUDDILIVE || SHIVAMOGGA

ಶರಾವತಿ ಪಂಪ್ಡ್ ಸ್ಟೋರೇಜ್ ಗೆ ರೈತ ಸಂಘ ಆಕ್ಷೇಪ-Farmers' association objects to Sharavati pumped storage

Sharavathi, pumpedstorage

ಶರಾವತಿ ಪಂಪ್ಡ್ ಸ್ಟೋರ್ ಯೋಜನೆಯನ್ನ ಕೈಬಿಡುವಂತೆ ರೈತನಾಯಕ ಕೆ.ಟಿ ಗಂಗಾಧರ್ ಅವರ ನೇತೃತ್ವದಲ್ಲಿ ರೈತ ಸಂಘ ಶಿವಮೊಗ್ಗದ ಡಿಸಿ ಕಚೇರಿಯಲ್ಲಿ ಪ್ರತಿಭಟಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಒಟ್ಟುಗೂಡಿ 2,000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಸುಮಾರು 8,000 ಕೋಟಿಗಿಂತ ಹೆಚ್ಚು ಮೊತ್ತದ ಯೋಜನೆಯನ್ನು ಶರಾವತಿ ಕಣಿವೆಯ ಸಿಂಗಳೀಕ ಅರಣ್ಯ ಪ್ರದೇಶದಲ್ಲಿ ಅನುಷ್ಠಾನಗೊಳಿಸಲು ಮುಂದಾಗುತ್ತಿದೆ. ಈ ಯೋಜನೆ ಕೈಬಿಡುವಂತೆ ಆರೋಪಿಸಿದೆ. 

ಇದಕ್ಕೆ 350 ಎಕರೆ ಜಾಗವನ್ನು ಗುರುತಿಸಿದೆ ಇದರಲ್ಲಿ ಖಾಸಗಿ ಜಮೀನು 200 ಎಕರೆ ಹಾಗೂ 150 ಎಕರೆ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಇರುತ್ತದೆ. ಸರ್ಕಾರಗಳು ಬೃಹತ್ ವಿದ್ಯುತ್ ಯೋಜನೆಗಳನ್ನ ಅನುಷ್ಠಾನಗೊಳಿಸುವಾಗ ಸ್ಥಳೀಯ ನಾಗರಿಕರು ಹಾಗೂ ಪರಿಸರವಾದಿಗಳ ಸಮಲೋಚನ ಸಭೆಗಳನ್ನು ನಡೆಸಿ ಯೋಜನೆಯ ಬಗ್ಗೆ ಸೂಕ್ತ ಮಾಹಿತಿಗಳನ್ನು ಸ್ಥಳೀಯ ನಾಗರೀಕರಿಗೆ ಒದಗಿಸುವ ಹಕ್ಕು ಸರ್ಕಾರದ್ದು. ಆದರೆ ಸರ್ಕಾರವು ಇದುವರೆಗೆ ಕನಿಷ್ಠ ಯೋಜನೆಯ ಡಿಪಿಆರ್ ನ್ನು ಸಾರ್ವಜನಿಕರ ಮುಂದೆ ಇರುವ ಕೆಲಸ ಮಾಡಿಲ್ಲ ಇದರ ಉದ್ದೇಶ ಏನು ಕಾರಣ ಏನು ಎಂದು ಪ್ರಶ್ನಿಸಿದೆ. 

ಉತ್ಪಾದನೆ ಮಾಡಿದಂತಹ ವಿದ್ಯುತ್ತನ್ನು ಸರಬರಾಜು ಮಾಡುವ ಸಂದರ್ಭದಲ್ಲಿ ವಿದ್ಯುತ್ ಕಂಬಗಳನ್ನ ಸ್ಥಾಪಿಸುವ ಸಂದರ್ಭದಲ್ಲಿ ಹೊಸ ರಸ್ತೆಗಳನ್ನು ಸಂಪರ್ಕಿಸುವ ಸಂದರ್ಭದಲ್ಲಿ ಮತ್ತಷ್ಟು ಜಮೀನುಗಳನ್ನು ರೈತರು ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿ ಇದೆ. ಸರ್ಕಾರವು ವಿದ್ಯುತ್ ಉತ್ಪಾದನೆಗೆ ಜಲಾಶಯಗಳಲ್ಲದೆ ಹೊಸ ತಂತ್ರಜ್ಞಾನಗಳಾದ ಪವನ ವಿದ್ಯುತ್ ಉತ್ಪಾದನೆ, ಸೌರಶಕ್ತಿ ವಿದ್ಯುತ್ ಉತ್ಪಾದನೆಗೆ ಹೆಚ್ಚು ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ ಜೊತೆಗೆ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ ಮೂಲಕ ವಿದ್ಯುತ್ ಉತ್ಪಾದನೆಯನ್ನು ಮಾಡಬಹುದು.

ಈ ಯೋಜನೆಗಳಿಂದ ಮಲೆನಾಡು ಪ್ರದೇಶಗಳನ್ನ ಹಾಗೂ ಅತಿ ಸೂಕ್ಷ್ಮ ವನ್ಯಜೀವಿ ಪ್ರದೇಶಗಳನ್ನ ಸಸ್ಯ ಸಂಕುಲವನ್ನು ಸಂರಕ್ಷಿಸಿ ಜೋಪಾನ ಮಾಡಿದಂತಾಗುತ್ತದೆ.ಈ ಯೋಜನೆಗಳನ್ನ ಮಲೆನಾಡು ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಕೈಗೆತ್ತಿಕೊಳ್ಳುವುದು ಸೂಕ್ತ. ಈ ಯೋಜನೆಯ ಪ್ರದೇಶಗಳಲ್ಲಿ ಶರಾವತಿ ಹಿನ್ನಿರಿನಲ್ಲಿ ಮತ್ತು ತಲಕಳಲೆ ಜಲಾಶಯದಿಂದ ಇತರ ಜಲಾಶಯಗಳ ಯೋಜನೆಗಳಿಂದ ಭೂಮಿಯನ್ನು ಕಳೆದುಕೊಂಡ ಸಂತ್ರಸ್ತರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ.

ಸರ್ಕಾರಗಳು ಸಂತ್ರಸ್ತ ಕುಟುಂಬಗಳಿಗೆ ಅನ್ಯಾಯವಾದ ರೀತಿ ಸೂಕ್ತ ಪರಿಹಾರವನ್ನು ನೀಡುವುದಾಗಿ ಭರವಸೆ ನೀಡುತ್ತಿದೆ. ಆದರೆ ಕೇವಲ 10 /20 ಕುಟುಂಬಸ್ಥರು ಮಾತ್ರ ಸೂಕ್ತ ದಾಖಲೆಗಳನ್ನು ಹೊಂದಿರುತ್ತಾರೆ.ಉಳಿದ ಕುಟುಂಬಗಳಿಗೆ ಅನ್ಯಾಯವಾಗದ ರೀತಿ ಸೂಕ್ತ ಪರಿಹಾರವನ್ನು ನೀಡುವುದಾಗಿ ಭರವಸೆ ನೀಡುತ್ತಿದೆ. ಆದರೆ ಕೇವಲ 10/ 20 ಕುಟುಂಬಸ್ಥರು ಸೂಕ್ತ ದಾಖಲೆಗಳನ್ನು ಹೊಂದಿರುತ್ತಾರೆ, ಉಳಿದ ಶೇ. 80 ಕುಟುಂಬಗಳ ಬಗರುಕುಂ ಅರಣ್ಯ ಭೂಮಿಗಳನ್ನು ಸಾಗುವಳಿ ಮಾಡುತ್ತ ತಮ್ಮ ಮನೆಗಳಿಗೂ ಹಕ್ಕುಪತ್ರಗಳನ್ನು ಪಡೆಯದೆ ಸರ್ಕಾರದ ಕಚೇರಿಗಳಿಗೆ ಹಕ್ಕುಪತ್ರ ಗಾಗಿ ಅಲೆದಾಡುತ್ತಿದ್ದಾರೆ.

ಸೂಕ್ತ ದಾಖಲೆಗಳಿಲ್ಲದೆ ಇರುವಂತಹ ಕುಟುಂಬಗಳಿಗೆ ಸುಮಾರು ವರ್ಷಗಳಿಂದ ವ್ಯವಸಾಯ ಕೃಷಿ ಚಟುವಟಿಕೆಗಳನ್ನು ಮಾಡಿಕೊಂಡು ಬಂದಂತಹ ಕುಟುಂಬಗಳು ಸರ್ಕಾರದ ಪರಿಹಾರದಿಂದ ವಂಚಿತರಾಗಿ ಬೀದಿಗೆ ಬೀಳುತ್ತದೆ.ಈ ಕುಟುಂಬಗಳ ಜವಾಬ್ದಾರಿ ಹಾಗೂ ಹೊಣೆ ಯಾರು, ಇವರು ಪ್ರತಿದಿನ ಕಣ್ಣೀರಿನಲ್ಲಿ ಜೀವ ಜೀವನ ಕಳೆಯುವಂತಾಗಿದೆ ಸರ್ಕಾರಗಳಿಗೆ ಇವರ ಕೂಗು ಕೇಳುತ್ತಿಲ್ಲ.

ಸರ್ಕಾರಗಳೇ ತಮ್ಮ ವರದಿಯಲ್ಲಿ ಅರಣ್ಯ ಭೂಮಿಗಳು ಕ್ಷೀಣಿಸುತ್ತಿದೆ ಅರಣ್ಯ ಪ್ರದೇಶಗಳಲ್ಲಿ ಬೃಹತ್ ಕೈಗಾರಿಕಾ ಯೋಜನೆಗಳನ್ನ ಅನುಷ್ಠಾನಗೊಳಿಸಲು ವಿರೋಧಿಸುತ್ತಿದೆ ಹಾಗೂ ಕಾನೂನುಗಳನ್ನು ರೂಪಿಸಿವೆ ಇಂತಹ ಸಂದರ್ಭದಲ್ಲಿ ಈ ಯೋಜನೆಯಿಂದ ನೂರಾರು ಎಕ್ಟರ್ ಅರಣ್ಯ ಪ್ರದೇಶಗಳು ನಶಿಸಿದಂತಾಗುತ್ತದೆ.ಇದರಿಂದ ಭೂ ಸವಕಳಿ ಭೂ ಕೊರೆತ ಭೂಕುಸಿತ ಅಪಾಯಗಳು ಹೆಚ್ಚಾಗುತ್ತವೆ ಈ ಕಾಮಗಾರಿಗಳಿಂದ ಅಭಿವೃದ್ಧಿ ಹೆಸರಿನಲ್ಲಿ ಹೆಚ್ಚು ನಷ್ಟವೇ ಅನುಭವಿಸಬೇಕಾಗುತ್ತದೆ.

ಸರ್ಕಾರವೇ ಸರ್ಕಾರದ ಕಾನೂನುಗಳನ್ನ ಉಲ್ಲಂಘಿಸಿ ಪರಿಸರವಾದಿಗಳು ಮತ್ತು ಪರಿಸರ ಇಲಾಖೆಗಳ ವರದಿಗಳನ್ನು ಮೂಲೆಗುಂಪು ಮಾಡಿ ಬದಿಗಿಟ್ಟು ಪ್ರಜಾಪ್ರಭುತ್ವದ ವಿರೋಧ ನೀತಿಯನ್ನು ಅನುಸರಿಸುತ್ತಿರುವುದನ್ನ ನಮ್ಮ ಸಂಘ ಖಂಡಿಸುತ್ತದೆ ಈ ಯೋಜನೆಯನ್ನ ಅರಣ್ಯ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಮಾಡಬಾರದೆಂದು ದಟ್ಟ ಅರಣ್ಯ ಪ್ರದೇಶಗಳನ್ನು ಹೊರತುಪಡಿಸಿ ಬೇರೆ ಪ್ರದೇಶಗಳಲ್ಲಿ ಕೈಗೊತ್ತಿಕೊಳ್ಳಬೇಕೆಂದು ಮನವಿ ಮಾಡಿರುತ್ತಾರೆ.ಸ್ಥಳೀಯ ಪೊಲೀಸರು ಬಂದೋಬಸ್ತು ವ್ಯವಸ್ಥೆ ಮಾಡಿರುತ್ತಾರೆ.

Farmers' association objects to Sharavati pumped storage

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close