SUDDILIVE || SHIVAMOGGA
ಸಚಿವ ಖರ್ಗೆಯವರ ಅಪ್ರಬುದ್ಧತೆಯ ಪತ್ರ- ಮಾಜಿ ಎಂಎಲ್ ಸಿ ವಾಗ್ದಾಳಿ-Minister Kharge's letter of insincerity
04/10/2025 ರಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸಿಎಂಗೆವಪತ್ರ ಬರೆದಿರುವುದು ಚರ್ಚೆಯಾಗುತ್ತಿದೆ. ಸಚಿವರು 2½ ವರ್ಷದಿಂದ ಐಟಿ ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಸ್ಥಾನದಲ್ಲಿದ್ದಾರೆ. ಆ ಸ್ಥಾನದಲ್ಲಿ ಸರಿಯಾಗಿ ನಿರ್ವಹಿಸದೆ ಇಲ್ಲವೆಂದು ಮಾಜಿ ಎಂಎಲ್ ಸಿ ಆರ್ ಕೆ ಸಿದ್ದರಾಮಣ್ಣ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಷಯ ಬಿಟ್ಟು ಅವರಿಗೆ ಆರ್ ಎಸ್ ಎಸ್ ಬಗ್ಗೆನೆ ಮಾತನಾಡುತ್ತಿದ್ದಾರೆ. ನಡುವಳಿಕೆ ಗೊತ್ತು ನಡವಳಿ ಎಂದು ಉಲ್ಲೇಖಿಸಿದ್ದಾರೆ. ಪತ್ರದ ಉಲ್ಲೇಖದಲ್ಲಿ ನಡವಳಿ ಎಂಬುದನ್ನ ಸ್ಪಷ್ಟಪಡಿಸಬೇಕು. ಪ್ರೊಸೀಡಿಂಗ್ಸ್ ಎನ್ನುವುದಾದರೆ ಎಲ್ಲಿ ನಡೆಯಿತು ಎಂಬುದನ್ನ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಸಂಘದ ವಿರುದ್ಧ ದ್ವೇಷ ಬಿಟ್ಟರೆ ಬೇರೆಯಿಲ್ಲ. ವಿಭಜಕ ಶಕ್ತಿ ಯಾಗುತ್ತಿದೆ. ಅದನ್ನ ನಿಗ್ರಹಿಸಬೇಕಿದೆ. ಆ ಶಕ್ತಿ ಸರ್ಕಾರಕ್ಕೆ ಇದೆ. ಸರ್ಕಾರಿ ಮೈದಾನ ಬಳಸಿಕೊಂಡು ಘೋಷಣೆಕೂಗುತ್ತಾ ಭಾರತದ ಏಕತೆ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತಿದೆ. ಪೊಲೀಸರ ಅನುಮತಿ ಪಡೆಯದೆ ಆಕ್ರಮಣಕಾರಿ ಮನಸ್ಥಿತಿ ಬಳಸಿಕೊಳ್ಳಲಾಗುತ್ತಿದೆ. ಈ ಚಟುವಟಿಕೆಯನ್ನ ಸರ್ಕಾರಿ ಸ್ಥಳದಲ್ಲಿ ನಿರ್ಬಂಧಿಸಬೇಕು ಎಂದು ಸಿಎಂಗೆ ಪತ್ರಬರೆಯಲಾಗಿದೆ ಸಿಎಂ ಮುಖ್ಯ ಕಾರ್ಯದರ್ಶಿಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದು ಎಂದು ನೋಟ್ ಹಾಕಿದ್ದಾರೆ.
ತಮಿಳು ನಾಡಿನಲ್ಲಿ ಈ ಸಂಘಟನೆಗೆ ನಿರ್ಬಂಧಿಸಲಾಗುವುದು ಎಂದು ಹೇಳಿದ್ದಾರೆ. ಸಂಘದ ಶಾಖಾ ಚಟುವಟಿಕೆ ನಿನ್ನೆ ಮೊನ್ನೆಯದಲ್ಲ. 1925 ರ್ಲಿ ಆರಂಭವಾಗಿರುವುದು ಇವತ್ತಿಗೂ ನಡೆಯುತ್ತಿದೆ. ಸಂಘದ ವಿಚಾರದಲ್ಲಿ ಬೇರೆಯಿಲ್ಲ. ದೇಶದಲ್ಲಿರುವ ಹಿಂದೂ ಸಮಾಜದ ಸಂಘಟನೆ ಆಗಬೇಕು ಏಕತೆ ಅಖಂಡತೆ ಉಳಿಯಲಿದೆ. ಪ್ರಜಾಪ್ರಭುತ್ವ ಉಳಿಯಲಿದೆ. ಜಾತ್ಯಾತೀತ ಭಾವನೆ ಉಳಿಯಲಿದೆ ಎಂದು ಸಂಘ ಮೊದಲಿನಿಂದಲೂ ಹೇಳುತ್ತಿದೆ.
ರಾಹುಲ್ ಗಾಂಧಿ ಸಂವಿಧಾನದ ಪುಸ್ತಕ ಹಿಡಿದುಕೊಂಡು ಬಂದಂತೆ ನಾನು ಸಂವಿಧಾನ ಪುಸ್ತಕವನ್ನ ಹಿಡಿದುಕೊಂಡು ಬಂದಿರುವ ಎಂದ ಆರ್ ಸಿದ್ದರಾಮಣ್ಣ, ಸಚಿವರಿಗೆ ಆರ್ ಎಸ್ ಎಸ್ ಹೇಳುವ ವಿಚಾರವನ್ನೇ ಸಂವಿಧಾನದ ಪ್ರಸ್ತಾಪನೆಯಲ್ಲಿದೆ. ಹಿಂದೂ ಎಂಬುದು ಮತ ಮತ್ತು ಪಂಥವಲ್ಲ. ದೇಶದಲ್ಲಿ ಸಾವಿರಾರು ವರ್ಷದಿಂದ ಹುಟ್ಟಿಕೊಂಡು ಬೆಳೆದುಬಂದಿದೆ. ಹಿಂದೂ ಎಂವುದು ಸಂಸ್ಕೃತಿ ಎಂದು ಹೇಳಲಾಗುತ್ತಿದೆ. ಪೂಜೆ, ಭಾಷೆಗಳಲ್ಲಿ ಸಂವಿಧಾನದಲ್ಲಿ ಹೇಳುವ ಬಗ್ಗೆ ಸಂಘವೂ ಹೇಳಿದೆ ಎಂದು ವಿವರಿಸಿದರು.
ಸಚಿವರು ದ್ವೇಶಬಿತ್ತುವ ವಿಭಜಕ ಶಕ್ತಿ ಎಂದು ಉಲ್ಲೇಖಿಸಿದ್ದಾರೆ. ಸಂಘದಲ್ಲಿ ಧ್ವಜ ಗುರುವಾಗಿದೆ. ಶಾಖೆಯಲ್ಲಿ ವ್ಯಾಯಾಮ, ಆಟವಿದೆ. ಅಲ್ಲಿ ಎಲ್ಲರೂ ಒಂದು ಎಂಬ ಭಾವನೆ ತರುವ ಸಂದೇಶವಿದೆ. ಸಚಿವರ ಹೇಳಿಕೆ ಹೈಕಮಾಂಡ್ ಗೆ ತೃಪ್ತಿ ತರುವ ಪ್ರಯತ್ನವಿದ್ದಂತೆ ಅನಿಸುತ್ತಿದೆ.ಸಚಿವ ಖರ್ಗೆ ಅವರ ಹೇಳಿಕೆ ರಾಜಕೀಯ ಹೇಳಿಕೆಗೆ ಸೀಮಿತವಾಗಿದೆ. ಪ್ರಭುದ್ಧತೆಯನ್ನ ಸಚಿವರು ತೋರಿಸಬೇಕಿತ್ತು. ಅವರ ನಾಯಕ ರಾಹುಲ್ ಗಾಂಧಿ ಅವರು ಯಾವ ಯಾವ ರೀತಿ ಪ್ರಬುದ್ಧತೆಯನ್ನ ಪ್ರದರ್ಶಿಸುತ್ತಿದ್ದಾರೆ ಎಂಬುದು ದೇಶದ ಜನ ನೋಡಿದ್ದಾರೆ. ದೇಶದ ಶಿಕ್ಷಣದ ಬಗ್ಗೆ ವ್ಯಾಖ್ಯಾನಿಸಿದ್ದಾರೆ. ಒಳ್ಳೆಯ ನಾಗರೀಕನಾಗುವುದು ಶಿಜ್ಷಣದ ಗುರಿ ಆಗಿದೆ. ಸಂಘದ ವಿಷಯವೂ ಆಗಿದೆ ಎಂದರು.
ದೊಣ್ಣೆ ಆರ್ಮ್ಸ್ ಆಕ್ಟ್ ನಲ್ಲಿ ಬರೊಲ್ಲ. ದೊಣ್ಣೆಯನ್ನ ಸಂಘದಲ್ಲಿ ವ್ಯಾಯಾಮಕ್ಕಾಗಿ ಬಳಸಲಾಗುತ್ತಿದೆ. ಗರಡಿ ಮನೆಯಲ್ಲಿರುವ ಫೈಲ್ವಾನ್ ದಂಡ ಹಿಡಿದು ವ್ಯಾಯಾಮ ಮಾಡುತ್ತಾನೆ. ದಂಡಕ್ಕೆ ಅನುಮತಿ ಪಡೆಯುವ ಅವಶ್ಯಕತೆಯಿಲ್ಲ. ಮನೆಯಲ್ಲಿ ಚೂರಿ ಹಿಡಿಯಲು ಅನುಮತಿ ಬೇಕಿಲ್ಲ ಹಾಗಾಗಿ ಇವುಗಳು ಆರ್ಮ್ಸ್ ಆಕ್ಟ್ ನಲ್ಲಿ ಬರೊದಿಲ್ಲ ಎಂಬುದನ್ನ ಸಚಿವರು ತಿಳಿಯದೆ ಇರುವುದು ದುರಂತ ಎಂದರು.
ವ್ಯಕ್ತಿ ನಿರ್ಮಾಣದ ಕೆಲಸ ಸಂಘದಲ್ಲಿದೆ. ದೇಶದ ಪ್ರಧಾನಿ ಸಹ ಸಂಘದಿಂದ ಬಂದಿದ್ದಾರೆ. ನಮಸ್ತೆ ಸದಾ ವತ್ಸಲ ಮಾತೃಭೂಮಿಯ ಸಂಘದ ಹಾಡಿನಲ್ಲೂ ಸಹ ಭಾರತೀಯತೆಯಿದೆ. ಅದನ್ನ ಡಿಸಿಎಂ ಡಿಕೆಶಿ ಸಹ ಸದನದಲ್ಲಿ ಹೇಳಿದ್ದಾರೆ. ಭಾರತ್ ಮಾತಾಕಿ ಜೈ ಎನ್ನುವುದು 140 ಕೋಟಿ ದೇಶದ ಜನರಿಗೆ ಜೈ ಎನ್ನುವುದಾಗಿದೆ. ಸಚಿವರಿಗೆ ಈ ಘೋಷಣೆ ಆತಂಕ ಸೃಷ್ಠಿಯಾಗುವುದಾದರೆ. ಪಾಕಿಸ್ತಾನ್ ಕಿ ಜೈ ಎಂದರೆ ವಿಭಜಕ ಅಂಶ ಕಾಣದೆ ಇರುವುದು ವಿಪರ್ಯಾಸ ಎಂದರು.
ಪಾಕಿಸ್ತಾನ್ ಜಿಂದಾಬಾದ್ ಎಂದವರ ಬಗ್ಗೆ ಕ್ರಮ ಕೈಗೊಳ್ಳದೆ ಇರುವುದು ಮತಬ್ಯಾಂಕಿಗಾಗಿ ಎಂಬುದು ಸ್ಪಷ್ಟವಾಗಿದೆ. ಆರ್ ಎಸ್ ಎಸ್ ನಿಷೇಧ ಮಾಡಲು ಸಾಧ್ಯವಾಗಿಲ್ಲ. ಸರ್ಕಾರ ಸಾರ್ವಜನಿಕ ಸ್ಥಳದಲ್ಲಿ ನಿಷೇಧ ಹೇರಬಹುದು ಆದರೆ ಸಂಘದ ಮೇಲೆ ನಿರ್ಬಂಧಿಸಲು ಸಾಧ್ಯವಿಲ್ಲ. ಸಿಎಂ ಸಿದ್ದರಾಮಯ್ಯನವರು ಆರ್ ಎಸ್ ಎಸ್ ಮೇಲೆ ಜರುಗಿಸಲು ತೆಗೆದುಕೊಳ್ಳುತ್ತಿರುವ ಕ್ರಮವನ್ನಕೈಬಿಡಬೇಕು ಎಂದು ಆಗ್ರಹಿಸಿದರು.
ಆರ್ ಎಸ್ ಎಸ್ ನೋಂದಣಿ ಆಗದ ಸಂಘಟನೆ ಬಗ್ಗೆ ಕೇಳಿದ ಪ್ರಶ್ನೆಗೆ ಯಾಕೆ ಆಗಬೇಕು ಎಂದ ಮಾಜಿ ಎಂಎಲ್ ಸಿ, ಸಂಘದ ಚಟುವಟಿಕೆ ಅನೈತಿಕ ಚಟುವಟಿಕೆಯಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಎಂಎಲ್ ಎ ಚೆನ್ನಬಸಪ್ಪ, ಎಂಎಲ್ ಸಿ ಡಾ.ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಎಸ್ಟಿ ಮೋರ್ಚಾದ ಅಧ್ಯಕ್ಷ ಹರೀಶ್ ಮೊದಲಾದವರು ಉಪಸ್ಥಿತರಿದ್ದರು.
Minister Kharge's letter of insincerity