SUDDILIVE || SHIVAMOGGA
ಇಎಸ್ಐ ಆಸ್ಪತ್ರೆಯಲ್ಲಿನ ಸಮಸ್ಯೆ ಬಗೆಹರಿಸಿಕರವೇ ಸ್ವಾಭಿಮಾನಿ ಬಳಗ ಆಗ್ರಹ-Swabhimani group demands resolution of ESI hospital problem
ಶಿವಮೊಗ್ಗದ ಇಎಸ್ ಐ ಆಸ್ಪತ್ರೆಗಳಲ್ಲಿ ಕಾರ್ಮಿಕರಿಗೆ ಸೂಕ್ತ ಸೇವೆ ಸಿಗದೆ ವಂಚಿತರಾಗುತ್ತಿರುವುದಾಗಿ ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಶಿವಮೊಗ್ಗದ ಸವಿ ಬೇಕರಿ ಮತ್ತು ಹೊಸ ತೀರ್ಥಹಳ್ಳಿ ರಸ್ತರಯಲ್ಲಿರುವ ಇಎಸ್ಐ ಆಸ್ಪತ್ರೆ ಸರ್ಕಾರದ ಸುತ್ತೋಲೆಯಂತೆ ಬೆಳೆಗೆ 9 ರಿಂದ ಸಂಜೆ 4:00 ವರೆಗೆ ಸಮಯ ನಿಗದಿಯಾಗಿದ್ದರು ಆಸ್ಪತ್ರೆಗಳು ಬೆಳಗ್ಗೆ 9 ರಿಂದ 1 ಗಂಟೆವರೆಗೆ ತೆರೆದು ನಂತರ ಸಂಜೆ ಐದು ಗಂಟೆಯಿಂದ 6:30ರವರೆಗೆ ತೆಗೆದಿರುವುದು ದುರದೃಷ್ಟಕರವಾಗಿದೆ.
ಸಿ ಸಿ ಕೆ ಎಲ್ ಕ್ಯಾಮೆರಾ ಅಳವಡಿಕೆ ಮೂಲಭೂತ ಸೌಕರ್ಯ ಬಯೋಮೆಟ್ರಿಕ್ ಹಾಜರಾತಿ ಆಸ್ಪತ್ರೆಯ ನಾಮಫಲಕ ಎಲ್ಲಾ ಸಮಸ್ಯೆಗಳನ್ನು ಹೊಂದಿರುವ ಇಎಸ್ಐ ಆಸ್ಪತ್ರೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂದು ಸಂಘಟನೆ ಮನವಿಯಲ್ಲಿ ಆರೋಪಿಸಿದೆ ಒಂದು ವೇಳೆ ಸಮಸ್ಯೆ ಬಗೆಹರಿಸದಿದ್ದರೆ ಸಂಘಟನೆಯೂ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದೆ. ಕಿರಣ್ ಕುಮಾರ್ ಮತ್ತು ಜೀವನ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.
Swabhimani group demands resolution of ESI hospital problem