SUDDILIVE || SHIVAMOGGA
ವಿಮಾನ ನಿಲ್ದಾಣದ ಎದುರು ರೈತರ ಹೋರಾಟ-Farmers' protest in front of the airport
ಶಿವಮೊಗ್ಗ ವಿಮಾನ ನಿಲ್ದಾಣದ ಮುಂಭಾಗದಲ್ಲಿ ನಿಲ್ದಾಣಕ್ಕೆ ಜಮೀನು ನೀಡಿದ ರೈತರ ಪ್ರತಿಭಟನೆ ನಡೆದಿದೆ. ಜಮೀನು ನೀಡಿದ ಸಂತ್ರಸ್ಥರಿಗೆ ನಿವೇಶನ ಹಂಚದೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಸೋಗಾನೆ ಭೂಮಿ ಹಕ್ಕು ರೈತರ ಹೋರಾಟ ಸಮಿತಿಯು ಪ್ರತಿಭಟಿಸಿದೆ.
ನೊಂದ ರೈತರಿಂದ ಏರ್ಪೋರ್ಟ್ ಮುಂಭಾಗವೇ ಪ್ರತಿಭಟನೆನಡೆದಿದೆ. ವಿಮಾನ ನಿಲ್ದಾಣಕ್ಕಾಗಿ ನಾವು ಭೂಮಿಯನ್ನು ಕಳೆದುಕೊಂಡಿದ್ದೇವೆ ಎಂದು ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೆ ನಿವೇಶನ ನೀಡುವುದಾಗಿ ಹೇಳಿದ್ದ ಜಿಲ್ಲಾಡಳಿತ ನಿವೇಶನ ಇನ್ನೂ ನೀಡಿಲ್ಲವೆಂದು ಆರೋಪಿಸಲಾಗಿದೆ.
ನ್ಯಾಯಾಲಯ ಕೂಡ ನಮಗೆ ನಿವೇಶನ ನೀಡಿ ಎಂದು ಆದೇಶ ಮಾಡಿದರೂ ನೀಡಿಲ್ಲವೆಂದು ಆರೋಪಿಸಲಾಗಿದೆ. ವಿಮಾನ ನಿಲ್ದಾಣ ಉದ್ಘಾಟನೆಗೆ ಮೊದಲೇ ನಿವೇಶನ ನೀಡಬೇಕಿದ್ದ ಜಿಲ್ಲಾಡಳಿತ ಈವರೆಗೂ ನೀಡಿಲ್ಲವೆಂದು ಆರೋಪಿಸಲಾಗಿದೆ.
ಆದರೂ ಕೂಡ ನಮಗೆ ನಿವೇಶನ ಹಂಚಿಕೆಯಾಗಿಲ್ಲ ಎಂದು ರೈತರು ಗರಂ ಆಗಿದ್ದಾರೆ. ಸಂತ್ರಸ್ಥ, ರೈತರಿಗೆ ಮೂರು ತಿಂಗಳ ಒಳಗೆ ನಿವೇಶನ ಹಂಚಿಕೆ ಮಾಡಲು ಸಂತ್ರಸ್ಥರಾದ ನಮ್ಮಗಳ ಪರವಾಗಿ ಉಚ್ಛ ನ್ಯಾಯಾಲಯ ಆದೇಶ ನೀಡಿದೆ. ಇಷ್ಟಾದರೂ ಜಿಲ್ಲಾಡಳಿತ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಲಾಗಿದೆ. ನಮಗೆ ನಿವೇಶನ ಹಂಚಿಕೆ ಪತ್ರ ನೀಡಿಲ್ಲ ಎಂದು ರೈತರ ಆಕ್ರೋಶ ವ್ಯಕ್ತಪಡಿಸಿದ ರೈತರು ಜಿಲ್ಲಾಡಳಿತ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.
Farmers' protest in front of the airport