SUDDILIVE ||SHIKARIPURA
ಸರಕಾರ ಟೋಲ್ ತೆರವುಗೊಳಿಸದಿದ್ದ ಸಾರ್ವಜನಿಕರೆ ತೆರವುಗೊಳಿಸಲಿದ್ದಾರೆ-ವಿರೋಧ ಸಮಿತಿ ಅಧ್ಯಕ್ಷರ ಎಚ್ಚರಿಕೆ-The public will remove the tolls that the government has not removed
ಅವೈಜ್ಞಾನಿಕ ಟೋಲ್ ತೆರವಿಗೆ ಆಗ್ರಹಿಸಿ ಕರೆಕೊಡಲಾಗಿದ್ದ ಶಿಕಾರಿಪುರ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಯಶಸ್ವಿಯಾದ ಬಂದ್ ನಡೆದಿದ್ದು, ಶಿಕಾರಿಪುರದಲ್ಲಿ ಟೋಲ್ ಗೆ ವಿರೋಧ ವ್ಯಕ್ತಪಡಿಸಲಾಗಿದೆ.
ನಗರದ ಹುಚ್ಚರಾಯ ದೇವಸ್ಥಾನದದಿಂದ ಹೊರಟ ಪ್ರತಿಭಟನಾ ಮೆರವಣಿಗೆ ತಾಲೂಕು ಕಚೇರಿ ಖಾಸಗಿ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತದ ಮೂಲಕ ಪ್ರತಿಭಟನೆಯು ಮತ್ತೆ ತಾಲೂಕು ಕಚೇರಿಗೆ ಬಂದು ತಲುಪಲಿದೆ. ಅಲ್ಲಿ ಪ್ರತಿಭಟನಾ ಧರಣಿ ನಡೆದಿದೆ.
ಈ ವೇಳೆ ಮಾತನಾಡಿದ ಟೋಲ್ ಗೇಟ್ ವಿರೋಧ ಸಮಿತಿಯ ಅಧ್ಯಕ್ಷ ಶಿವರಾಜ್ ಒಂದು ವರ್ಷದಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಶಾಸಕರು ಸದನದಲ್ಲಿ ಮಾತನಾಡಿ ಟೋಲ್ ತೆರವಿಗೆ ಮನವಿ ಮಾಡಿದರೂ ಸಹ ಸರ್ಕಾರ ಉತ್ತರ ನೀಡಿಲ್ಲ. ಸಚಿವರು ಟೋಲ್ ವಿರುದ್ಧ ತುಟಿಬಿಚ್ಚುತ್ತಿಲ್ಲ.
ಈ ಹಿನ್ನಲೆಯಲ್ಲಿ ನಾವು ಇಂದು ಶಿಕಾರಿಪುರ ಬಂದ್ ಗೆ ಕರೆ ನೀಡಲಾಗಿದೆ. ಈಗ ಸವಳಂಗ ರಸ್ತೆಯಲ್ಲಿರುವ ಟೋಲ್ ಗಳಿಗೆ, ಟೋಲ್ ನಂಬರ್ 57 ಎಂದು ಕುಟ್ರಳ್ಳಿ ಟೋಲ್ ನ್ನ ರಾಜ್ಯ ಹೆದ್ದಾರಿ 17 ಎಂದು ನಾಮಕರಣಗೊಳಿಸಲಾಗಿದೆ. ಇದೆಲ್ಲ ಕಣ್ಣುವರೆಸುವ ತಂತ್ರವಾಗಿದೆ. ಒಂದು ವೇಳೆ ಟೋಲ್ ತೆರವುಗೊಳಿಸದಿದ್ದರೆ ಪ್ರತಿದಿನ ಟೋಲ್ ಬಳಿ ಪ್ರತಿಭಟನೆ ನಡೆಸಲಾಗುವುದು. ಇದಕ್ಕೂ ಬಗ್ಗದಿದ್ದರೆ ನಾವೇ ಟೋಲ್ ತೆರವುಗೊಳಿಸುತ್ತೇವೆ ಎಂದು ಎಚ್ಚರಿಸಿದರು.
ಮೆಡಿಕಲ್ ಶಾಪ್ ಹೊರತು ಪಡಿಸಿ ಇಂದು ಶಿಕಾರಿಪುರದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಖಾಸಗಿ ಬಸ್ ನಿಲ್ದಾಣದ ಬಳಿ ಟಯರ್ ಸುಡಲಾಯಿತು. ಬಂದ್ ನಲ್ಲಿ ಬಸ್ ಮಾಲೀಕರ ಸಂಘ, ರೈತರ ಸಂಘ, ಕಿರಾಣಿ ವರ್ತಕರ ಸಂಘ, ಗ್ಯಾರೇಜ್ ವರ್ಕ್ ಶಾಪ್ , ಆಟೋಮೊಬೈಲ್ ಶಾಪ್, ವಕೀಲರ ಸಂಘ ಮೊದಲಾದ ಸಂಘಗಳು ಭಾಗಿಯಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವು.
The public will remove the tolls that the government has not removed