ad

ಬಾಲಣ್ಣನ ಬಗ್ಗೆ ಮಾಧ್ಯಮ ವರದಿ ಕಂಡು ಅರಣ್ಯ ಸಚಿವರ ಪತ್ರ- Forest Minister Khandre wrote a letter after seeing Balanna's report

SUDDILIVE || SHIVAMOGGA

ಬಾಲಣ್ಣನ ಬಗ್ಗೆ ಮಾಧ್ಯಮ ವರದಿ ಕಂಡು ಅರಣ್ಯ ಸಚಿವರ ಪತ್ರ-  Forest Minister Khandre wrote a letter after seeing Balanna's report  

Balanna, Khandre

ಶಿವಮೊಗ್ಗ ದಸರಾ ಆನೆ ಬಾಲಣ್ಣಗೆ ಕಿವಿಗೆ ಗಾಯ ಆದ ವಿಚಾರದಲ್ಲಿ ಮಾಧ್ಯಮ ವರದಿ ಬೆನ್ನಲ್ಲೇ ಸಚಿವ ಈಶ್ವರ್ ಖಂಡ್ರೆಯಿಂದ ಪತ್ರ ಬರೆದಿದ್ದಾರೆ. 4 ಆನೆಗಳ ಅನಾರೋಗ್ಯದ ಬೆನ್ನಲ್ಲೇ ಸಚಿವರ ಈ ಪತ್ರ ಮಹತ್ವಪಡೆದುಕೊಂಡಿದೆ. 

ಸಕ್ಕರೆಬೈಲಿನ ಬಾಲಣ್ಣ ಗೆ ಗಾಯ ಆದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಸಚಿವ ಈಶ್ವರ ಖಂಡ್ರೆ ಸೂಕ್ತ ತನಿಖೆ ನಡೆಸಿ ಒಂದು ವಾರದೊಳಗೆ ವರದಿ ನೀಡುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿದ್ದಾರೆ. 


ಬಾಲಣ್ಣನ ಅನಾರೋಗ್ಯಕ್ಕೆ ಸಂಬಂಧ ಪಟ್ಟ ಅಧಿಕಾರಿ ಹಾಗೂ ಸಿಬ್ಬಂದಿಗೆ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಹಾಗೂ ಆನೆ ಶಿಬಿರಗಳಲ್ಲಿ ಹಾಗೂ ಮೃಗಾಲಯಗಳಲ್ಲಿ ಸಮರ್ಪಿತ ವೈದ್ಯಾಧಿಕಾರಿಗಳನ್ನು ತಕ್ಷಣವೇ ನೇಮಿಸಿಕೊಳ್ಳುವಂತೆ ಸೂಚನೆ ನೀಡಿದರೂ ಸಚಿವ ಈಶ್ವರ್ ಖಂಡ್ರೆ ನೇಮಿಸಿಕೊಳ್ಳದ ಹಿನ್ನಲೆಯಲ್ಲಿ ಸೂಕ್ತ ನಿರ್ದೇಶನ ನೀಡಿದ್ದಾರೆ. 

ಸಕ್ರೆಬೈಲಿನಲ್ಲಿ ಡಾ.ವಿನಯ್ ನಂತರ ವೈದ್ಯರ ಕೊರತೆ ಎದ್ದುಕಾಣುತ್ತಿದೆ. ಡಾ.ವಿನಯ್ ಇದ್ದಾಗ ಸಕ್ರೆಬೈಲು ಸರಿಯಾಗಿ ಸ್ಪಂಧಿಸುತ್ತಿದ್ದರು. ಈಗ ಅವರ ಜಾಗದಲ್ಲಿ ಕೊರತೆ ಕಾಣುತ್ತಿದೆ. 

Forest Minister Khandre wrote a letter after seeing Balanna's report

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close