SUDDILIVE || HOLEHONNURU
ಕಳಸ ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕೆ ಚೋಟುವಿನ ಮೇಲೆ ದಾಳಿ-Chotu attacked for informing Kalasa police
ಹೊಳೆಹೊನ್ನೂರು ಹೋಬಳಿಯ ಮೂಡಲ ವಿಠಲಾಪುರದಲ್ಲಿ ಸೈಯದ್ ತೌಫಿಕ್ ಯಾನೆ ಚೋಟು ಮೇಲೆ ಶಿವಮೊಗ್ಗದ ಟಿಪ್ಪು ನಗರದ ನಿವಾಸಿ ಗೌತಮ್ ಯಾನೆ ಇರ್ಫಾನ್ ಮತ್ತು ಆತನ ಐವರ ಗುಂಪು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಘಟನೆ ಎಫ್ಐಆರ್ ಆಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ. ಚೋಟುನನ್ನ ಅಟ್ಟಿಸಿಕೊಂಡು ಹೋದ ದೃಶ್ಯ ಸಿಸಿ ಟಿವಿಯಲ್ಲಿ ಪತ್ತೆಯಾಗಿದೆ.
ನಡೆದಿದ್ದೇನು?
ತೌಫಿಕ್ ಪರಿಚಯಸ್ಥರಾದ ಜಾವದ್ ಮತ್ತು ಕೋಡಮಗ್ಗಿಯ ಪಾಪ ಎಂಬುವರ ಜೊತೆ ಹೊಳೆಹೊನ್ನೂರಿನಿಂದ ಬೊಲೆರೋ ಗಾಡಿಯಲ್ಲಿ ಮೂಡಲವಿಠಲಾಪುರದಲ್ಲಿ ಅ.19 ರಂದು ಬೆಳಿಗ್ಗೆ ಟಿಫನ್ ಮಡ್ತಾಇದ್ದರು. ಈ ವೇಳೆ ರಿಟ್ಜ್ ವಾಹನದಲ್ಲಿ ಗೌತಮ್ ಯಾನೆ ಇರ್ಫಾನ್, ಮುಬಾರಕ್, ಫಹಾದ್, ಮಸೂದ್ ಮತ್ತು ಸುಹೇಲ್ ಮತ್ತಿತರರು ಆರೋಪಿಗಳು ಮಾರಕಾಸ್ತ್ರಗಳಿಂದ ದಾಳಿಯಿಟ್ಟಿದ್ದಾರೆ.
ಕಾರಣವೇನು?
ತೌಫಿಕ್ ಗೆ ವ್ಯಾಪಾರದಲ್ಲಿ ಮುಬಾರಕ್, ಗೌತಮ್ ಪರಿಚಯಸ್ಥರಿದ್ದರು. ಎರಡು ತಿಂಗಳ ಹಿಂದೆ ತೌಫಿಕ್ ಯಾನೆ ಚೋಟು ದನಕಳ್ಳತನದ ಆರೋಪದ ಅಡಿ ಕಳಸಾ ಪೊಲೀಸರಿಂದ ಬಂಧಿತನಾಗಿ ಜೈಲು ಸೇರಿದ್ದ. ಜೈಲು ಸೇರಿದ್ದ ಚೋಟು ಇತ್ತೀಚೆಗೆ ಜಾಮೀನಿನ ಮೇಲೆ ಹೊರಗೆ ಬಂದಿದ್ದ. ಕಳಸಾ ಪೊಲೀಸರು ಗೌತಮ್ ಯಾನೆ ಇರ್ಫಾನ್ ಮತ್ತು ಆತನಗ್ಯಾಂಗನ್ನೂ ವಿಚಾರಣೆ ಮಾಡಿದ್ದರು.
ಇಷ್ಟೆ ವಿಷಯ, ಈ ವಿಷಯದಲ್ಲಿ ಗೌತಮ್ ಯಾನೆ ಇರ್ಫಾನ್ ಮತ್ತು ಆತನ ಕಡೆಯವರು ಚೋಟು ವಿರುದ್ಧ ದ್ವೇಕಾರಲು ಆರಂಭಿಸಿದ್ದರು. ಪೊಲೀಸರಿಗೆ ನಮ್ಮಬಗ್ಗೆ ಮಾಹಿತಿ ಕೊಡ್ತೀಯ ಎಂದು ಹಲ್ಲು ಮಸಿಯುತ್ತಿದ್ದು ಎಲ್ಲಾದರೂ ಸಿಗು ಅಲ್ಲೇ ನಿನ್ನನ್ನ ಮಣ್ಣು ಮಾಡ್ತೀವಿ ಎಂಬ ದ್ವೇಷಕ್ಕೆ ಇವರ ಪರಿಚಯ ತಿರುಗಿತ್ತು.
ಅ.19 ರಂದು ಬೆಳಿಗ್ಗೆ 8 ಗಂಟೆಗೆ ಮೂಹೂರ್ತ ಇಟ್ಟ ಗ್ಯಾಂಗ್ ತಿಂಡಿತಿನ್ನುತ್ತಿದ್ದ ಚೋಟುವಿನಮೇಲೆ ಮಾರಕಾಸ್ತಗಳಿಂದ ಮುಗಿದು ಬಿದ್ದಿದೆ. ದಾಳಿಯಲ್ಲಿ ಗಾಯಗೊಂಡು ಜೀವ ಉಳಿಸಿಕೊಂಡಿದ್ದ ಚೋಟು ಪ್ರಾಣಾಪಾಯದಿಂದ ಬಚಾವ್ ಆಗಿದ್ದಾನೆ. ಒಟ್ಟಿನಲ್ಲಿ ಗೋವು ಕಳ್ಳಸಾಗಾಣಿಕೆಯ ವಿಷಯದಲ್ಲಿ ಈ ಗಲಾಟೆ ನಡೆದಿದೆ ಎನ್ನಬಹುದು.
Chotu attacked for informing Kalasa police