ad

ಕೇವಲ ದಂಡ, ಪ್ರಚಾರ ಬಯಸುವ ಪಿಎಸ್ಐಗಳ ನಡುವೆ ಸಂಚಲನ ಮೂಡಿಸಿದ ಮಹಿಳ ಪಿಎಸ್ಐ-Woman psi doing a good job

 SUDDILIVE || SHIVAMOGGA

ಕೇವಲ ದಂಡ, ಪ್ರಚಾರ ಬಯಸುವ ಪಿಎಸ್ಐಗಳ ನಡುವೆ ಸಂಚಲನ ಮೂಡಿಸಿದ ಮಹಿಳ ಪಿಎಸ್ಐ-Woman psi doing a good job

Woman, psi

ಸಾಲು ಸಾಲು ರಜೆಗಳಿವೆ. ದೀಪಾವಳಿ ಹಬ್ಬಕ್ಕೆ ಓಡಾಡುವರ ಸಂಖ್ಯೆ ಹೆಚ್ಚು ಬೆನ್ನಲ್ಲೇ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಸ್ವಪ್ನ ಗಪ್ ಚುಪ್ ಆಗಿ ಡ್ರೈವ್(ಕಾರ್ಯಾಚರಣೆ) ನಡೆಸಿದ್ದಾರೆ. ಈ ಡ್ರೈವ್ ನಲ್ಲಿ  ದಾಖಲಾತಿಗಳಿಲ್ಲದ ಆಟೋರಿಕ್ಷಗಳು ಹೆಚ್ಚಾಗಿ ಓಡಾಡುತ್ತಿರುವುದು ಚರ್ಚೆಗೆ ಕಾರಣವಾಗಿದೆ. 

ಶಿವಮೊಗ್ಗ, ಭದ್ರಾವತಿ ಮತ್ತು ತೀರ್ಥಹಳ್ಳಿ ತಾಲೂಕಿನಲ್ಲಿ 7 ಸಾವಿರಕ್ಕೂ ಹೆಚ್ಚು ಆಟೋಗಳು ಓಡಾಡುತ್ತವೆ. ಅರೆರೆ... ಇದೇನಪ್ಪ ದೀಪಾವಳಿ ಹಬ್ಬಕ್ಕೂ ಆಟೋ ರೀಕ್ಷಾದವರಿಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ? ಲಿಂಕ್ ಇದೆ. ಸಾಲು‌ ಸಾಲು ಹಬ್ಬಕ್ಕಾಗಿ ಶಿವಮೊಗ್ಗಕ್ಕೆ ಓಡಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ. ಈ ಆಟೋದವರು ಹಬ್ಬ ಹರಿದಿನಗಳಲ್ಲಿ ಗ್ರಾಹಕರಿಂದ ಹೆಚ್ಚು ಹಣ ವಸೂಲಿ ಮಾಡುವ ಆರೋಪದ ಹಿನ್ನಲೆಯಲ್ಲಿ ಈ ಡ್ರೈವ್ ಹೆಚ್ಚು ಗಮನಸೆಳೆಯಲಿದೆ.  

ಈ ಹೆಚ್ಚಾಗುವ ವಸೂಲಿಗೆ ಪ್ರಯಾಣಿಕರು ಎಚ್ಚೆತ್ತುಕೊಳ್ಳಬೇಕಿದೆ. ಕಾರಣ 2022 ರಲ್ಲಿ,  ಬಸ್ ನಿಲ್ದಾಣದಿಂದ ಉಷಾ ನರ್ಸಿಂಗ್ ಹೋಮ್ ಗೆ ಪ್ರಯಾಣ ಬಯಸುವ ಪ್ರಯಾಣಿಕರೊಬ್ವರ ಬಳಿ ಇದೇ ದೀಪಾವಳಿಗೆ 120-130 ರೂ. ಹಣ ವಸೂಲಿ ಮಾಡಿದ್ದ ಉದಾಹರಣೆ ಇನ್ನೂ ಕಣ್ಣುಮುಂದೆ ಹಾಗೆ ಇದೆ. ಇದನ್ನ ಪ್ರಯಾಣಿಕರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಮಾಧ್ಯಮಗಳಲ್ಲಿ ಪ್ರಕಟವೂ ಆಗಿತ್ತು.

ಈ ಹಿನ್ನಲೆಯಲ್ಲಿ ಪಿಎಸ್ಐ ಸ್ವಪ್ನರವರ ಈ ಸಣ್ಣ ಡ್ರೈವ್ ಪ್ರಯಾಣಿಕರಲ್ಲಿ ಭರವಸೆ ಮೂಡಿಸಿದೆ. ನಿನ್ನೆ ಸಂಜೆಯ ಮೇಲೆ ಪಿಎಸ್ಐ ಸ್ವಪ್ನ ಮತ್ತು ಅವರ ಸಿಬ್ಬಂದಿಗಳು ಮಫ್ತಿಯಲ್ಲಿ ಡ್ರೈವ್ ನಡೆಸಿ 36 ಆಟೋಗಳನ್ನ ತಪಾಸಣೆಗೊಳಪಡಿಸಿದ್ದಾರೆ. 36 ಆಟೋಗಳಲ್ಲಿ 22 ಆಟೋಗಳಿಗೆ FC ಇಲ್ಲ, ಇನ್ಸೂರೆನ್ಸು ಇಲ್ಲ. ಇಂತಹ ಆಟೋಗಳನ್ನ ಠಾಣೆಗೆ ತಂದಿರಿಸಿದ್ದಾರೆ. 

ಈ ಆಟೋಗಳನ್ನ ಇಂದು ಆರ್ ಟಿ ಒಗೆ ಹಸ್ತಾಂತರಿಸಿದ್ದಾರೆ. ಆರ್ ಟಿ ಒದವರು ಏನು ಮಾಡಲಿದ್ದಾರೆ ಎಂಬುದು ಇನ್ನೂ ಕುತೂಹಲಕಾರಿಯಾಗಿದೆ. 61% ಕ್ಕೂ ಹೆಚ್ಚು ಆಟೋಗಳಿಗೆ FC ಮತ್ತು ಇನ್ಸೂರೆನ್ಸು ಇಲ್ಲದೆ ಆಟೋಗಳು ಓಡಾಡುವುದು  ಪತ್ತೆಯಾಗಿದೆ. ಇನ್ನೂ ಮೂರು ತಾಲೂಕಿನಲ್ಲಿ 7000 ಆಟೋಗಳಿವೆ ಇದರಲ್ಲಿ ಸಿಟಿಯಲೇ 4 ಸಾವಿರ ಕ್ಕೂ ಹೆಚ್ಚು ಆಟೋಗಳು ಓಡಾಡುತ್ತಿವೆ. ಹೀಗಿರುವಾಗ ಶೇಕಡವಾರು ತೆಗೆದರೆ 2000 ಕ್ಕೂ ಹೆಚ್ಚು ಆಟೋಗಳು ದಾಖಲಾತಿಯಿಲ್ಲದಿರುವುದು ಪತ್ತೆಯಾಗಲಿದೆ. 

ನಿನ್ನೆ ಠಾಣೆಯಲ್ಲಿ ಆಟೋಚಾಲಕರನ್ನ ಕೂರಿಸಿಕೊಂಡು 15 ದಿನಗಳಲ್ಲಿ ದಾಖಲೆ ಪಡೆಯಲು ಮಹಿಳ ಪಿಎಸ್ಐ ಸೂಚಿಸಿದ್ದರು. ಆದರೆ ಈಗ 36 ಆಟೋಗಳನ್ನ ಆರ್ ಟಿ ಒದವರಿಗೆ ಹಸ್ತಂತರಿಸಿರುವುದಾಗಿ ತಿಳಿದು ಬಂದಿದೆ.  ಇದು ಪಿಎಸ್ಐ ಅವರ ಕಾರ್ಯಾಚರಣೆ, ಇದೇ ಠಾಣೆಯ ಈ ಹಿಂದಿನ ಪಿಎಸ್ಐಗೂ ಈಗಿನ‌ ಮಹಿಳಾ‌ ಪಿಎಸ್ಐಗೂ ಅಜಗಜಾಂತರ ವ್ಯತ್ಯಾಸವಿದೆ. ಒಬ್ಬ ಪಿಎಸ್ಐ ಕೇವಲ ದಂಡ ವಸೂಲಿಗೆ ಇಳಿದು ಪ್ರಚಾರ ಪಡೆಯುವರ ಮಧ್ಯೆ ಮಹಿಳ ಪಿಎಸ್ಐ ಅವರು ಸಂಚಲನ ಮೂಡಿಸಿದ್ದಾರೆ.  

ಪ್ರೀಪೇಯ್ಡ್ ಆಟೋಗೆ ತಯಾರಿ

Woman, psi

ಇನ್ನೂ ಶಿವಮೊಗ್ಗದಲ್ಲಿ ಅಸಾಧ್ಯವಾಗಿದ್ದ ಆಟೋ ಪ್ರೀಪೇಯ್ಡ್ ಕೆಲಸಕ್ಕೆ ಪಿಐ ದೇವರಾಜ್ ಸಾಧ್ಯಗೊಳಿಸುತ್ತಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರನ್ನ ಕೂರಿಸಿಕೊಂಡು ಹೋಗಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಬ್ಯಾರಿಕೇಡ್ ಗಳನ್ನ ಬಿಗಿದು ವ್ಯವಸ್ಥೆ ಮಾಡಿದ್ದಾರೆ. ಮೊದಲಿಗೆ ಟೆಸ್ಟಿಂಗ್ ನಡೆಸಿ ಪ್ರೀಪೇಯ್ಡ್ ಆಟೋಗೆ ಅನುವು ಮಾಡುತ್ತಿದ್ದಾರೆ. ನಂತರ ಇದು ಬಸ್ ನಿಲ್ದಾಣಕ್ಕೆ ಅಪ್ಲೈ ಮಾಡುವ ಯೋಜನೆಯೂ ಇದೆ ಎಂಬ ಮಾಹಿತಿ ಲಭ್ಯವಾಗಿದೆ. 

Woman psi doing a good job

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close