ad

ಜಿಲ್ಲಾ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷರಾಗಿ ಗಜೇಂದ್ರ ಸ್ವಾಮಿ, ಉಪಾಧ್ಯಕ್ಷರಾಗಿ ರಂಜಿತ್ ಆಯ್ಕೆ- Gajendra Swamy elected as President

SUDDILIVE || SHIVAMOGGA

ಜಿಲ್ಲಾ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷರಾಗಿ ಗಜೇಂದ್ರ ಸ್ವಾಮಿ, ಉಪಾಧ್ಯಕ್ಷರಾಗಿ ರಂಜಿತ್ ಆಯ್ಕೆ-Gajendra Swamy elected as President

Gajendra, swamy

ದಿನನಿತ್ಯ ಪ್ರಕಟಗೊಳ್ಳುವ ದಿನ ಪತ್ರಿಕೆಗಳ ಸಂಪಾದಕರಗಳ ಒಕ್ಕೂಟವಾದ ಶಿವಮೊಗ್ಗ ಜಿಲ್ಲಾ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷರಾಗಿ ತುಂಗಾತರಂಗ ದಿನ ಪತ್ರಿಕೆಯ ಸಂಪಾದಕ ಎಸ್ ಕೆ ಗಜೇಂದ್ರ ಸ್ವಾಮಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸಹ್ಯಾದ್ರಿ ದಿನಪತ್ರಿಕೆಯ ಸಂಪಾದಕ ಮಂಜುನಾಥ್ ಅವರನ್ನು ನೇಮಕ ಮಾಡಲಾಗಿದ್ದು, ಖಜಾಂಚಿಯಾಗಿ ಹೊಸ ನಾವಿಕ ದಿನಪತ್ರಿಕೆಯ ಸಂಪಾದಕ ರಾಕೇಶ್ ಡಿಸೋಜಾ ಅವರನ್ನು ನೇಮಕ ಮಾಡಲಾಗಿದೆ.

 ಹಿರಿಯ ಪತ್ರಿಕಾ ಸಂಪಾದಕರಾದ ಜಿ. ಪದ್ಮನಾಭ್ ಅವರ ಅಧ್ಯಕ್ಷತೆಯಲ್ಲಿ ಶಿವಮೊಗ್ಗ ಪತ್ರಿಕಾ ಭವನದಲ್ಲಿ  ಇಂದು ಬೆಳಿಗ್ಗೆ ನಡೆದ ಸಭೆಯಲ್ಲಿ ಈ ಮೂವರನ್ನು ಆಯ್ಕೆ ಮಾಡಲಾಗಿದೆ. ಸಂಘದ ಉಪಾಧ್ಯಕ್ಷರಾಗಿ ರಂಜಿತ್, ಭರತೇಶ್, ಹಿತಕರ್ ಜೈನ್, ಸುಭಾಷ್ ಕಾರ್ಯದರ್ಶಿಗಳಾಗಿ ನಾಗರಾಜ್ ಶೆಣೈ, ಲಿಯಾಕತ್, ರಾಘವೇಂದ್ರ, ಸಹ ಕಾರ್ಯದರ್ಶಿಗಳಾಗಿ ಜಿ. ಚಂದ್ರಶೇಖರ,  ಹೆಚ್.ಎನ್. ಮಂಜುನಾಥ್ ಆಯ್ಕೆ ಯಾಗಿದ್ದಾರೆ.

ಈ ಸಂದರ್ಭದಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಹಾಗೂ ಸಂಘದ ಹಿರಿಯ ನಿರ್ದೇಶಕರಾದ ಎನ್. ಮಂಜುನಾಥ್ ಕಾರ್ಯದರ್ಶಿ ನಾಗರಾಜ್ ನೇರಿಗೆ, ಖಜಾಂಚಿ ಜೇಸುದಾಸ್ ಅವರು ನೂತನ ಪದಾಧಿಕಾರಿಗಳಿಗೆ ಅಭಿನಂದಿಸಿ, ಸಂಘದ ಮೂಲಕ ಶಿವಮೊಗ್ಗ ಜಿಲ್ಲಾ ಪತ್ರಿಕೆಗಳ ಒಳಿತಿಗೆ ಕಾರ್ಯನಿರ್ವಹಿಸಲು ನಿರ್ವಹಿಸಲು ಕೋರಿದರು.ಈ ವೇಳೆ ಶಿವಮೊಗ್ಗ ಜಿಲ್ಲೆಯಿಂದ ಪ್ರಕಟವಾಗುವ ದಿನಪತ್ರಿಕೆಗಳ 25ಕ್ಕೂ ಹೆಚ್ಚು ಸಂಪಾದಕರು ಹಾಜರಿದ್ದರು.

Gajendra Swamy elected as President

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close