SUDDILIVE || SHIVAMOGGA
ಪಂಚ ಪರಿವರ್ತನೆ ಸಂಘದ ಗುರಿ- RSSನ ಕ್ಷೇತ್ರೀಯ ಕಾರ್ಯವಾಹ ಘೋಷಣೆ-Goal of Panch transition- Declaration of regional action of RSS
ಶಿವಮೊಗ್ಗದಲ್ಲಿ ಆರ್ ಎಸ್ ಎಸ್ ನ ಶತಬ್ದಿ ಆಚರಣೆಯ ಹಿನ್ನಲೆಯಲ್ಲಿ ಗಣವೇಶಧಾರಿಗಳ ಭರ್ಜರಿ ಪಥಸಂಚಲನ ನಡೆದಿದೆ. ರಾಮಣ್ಣ ಶ್ರೇಷ್ಠಿ ಪಾರ್ಕಿನಿಂದ ಫ್ರೀಡಂಪಾರ್ಕ್ ನ ವರೆಗೆ ಪಥ ಸಂಚಲನ ನಡೆದಿದೆ.
ಅಲ್ಲಲ್ಲಿ ಗಣವೇಷಧಾರಿಗಳು ನಡಧು ಬಂದ ರೂಟ್ ಮಾರ್ಚ್ ನಲ್ಲಿ ರಂಗೋಲಿ ಬಿಡಿಸುವುದು. ನೀರು ಹಾಕಿ ಹೂವಿನ ಗುಚ್ಚ ಹಾಕುವ ಮೂಲಕ ಸ್ವಾಗತಿಸಲಾಗಿದೆ. ಮಹಿಳೆಯರು ಗಣವೇಶ ಧಾರಿಗಳಿಗೆ ಆರತಿ ಬೆಳಗಿ ಪಥಸಂಚಲನಕ್ಕೆ ಚಾಲನೆ ನೀಡಿದರು. ಪಥಸಂಚಲನವು ರಾಮಣ್ಣ ಶ್ರೇಷ್ಟಿ ಪಾರ್ಕ್, ಗಾಂಧಿಬಜಾರ್ ಮುಖ್ಯ ರಸ್ತೆ, ಶಿವಪ್ಪ ನಾಯಕ ವೃತ್ತ, ಎಎ ವೃತ್ತ, ನೆಹರು ರಸ್ತೆ, ಟಿ. ಸೀನಪ್ಪ ಶೆಟ್ಟಿ ವೃತ್ತ, ದುರ್ಗಿಗುಡಿ ಮುಖ್ಯ ರಸ್ತೆ, ಜೈಲ್ ವೃತ್ತ, ಜೈಲ್ ರಸ್ತೆ ಮೂಲಕ ಅಲ್ಲಮಪ್ರಭು ಮೈದಾನ ತಲುಪಿದೆ.
ಫ್ರೀಡಂ ಪಾರ್ಕ್ ಗೆ ಗಣವೇಷಧಾರಿಗಳು ಪ್ರವೇಶಿಸಿದಂತೆ ಸಂಘದ ಕ್ಷೇತ್ರೀಯ ಕಾರ್ಯವಾಹರಾದ ನಾ ತಿಪ್ಪೇಸ್ವಾಮಿ ರವರು ಸ್ವಯಂಸೇವಕರನ್ನು ಕುರಿತು ಮಾತನಾಡಿ, ಸಣ್ಣದಾಗಿ ಹುಟ್ಟಿದ RSS ಇಂದು ದೊಡ್ಡದಾಗಿ ಬೆಳೆದಿದೆ. 100 ವರ್ಷ ಪೂರೈಸಿದೆ.
ಸಂಘದ ಆರಂಭದಲ್ಲಿ ಆಸ್ಮಿತೆಯಾದ ಹಿಂದೂ ಎಂದು ಹೇಳಲು ನಮ್ಮಲ್ಲಿ ಸಂಕುಚಿತ ಭಾವನೆಯಿತ್ತು. ಹಿಂದೂ ಎನ್ನಲು ಮಾನಸಿಕತೆಯಿತ್ತು. ಇಂದು ಸಣ್ಣ ಬಾಲಕ ಗರ್ವದಿಂದ ಹೇಳ್ತಾನೆ ನಾನೊಬ್ಬ ಹಿಂದೂ ಎಂದು ಅದಕ್ಕೆ ಸಂಘದ ಕಾಣಿಕೆ ಬಹಳ ದೊಡ್ಡದು ಎಂದರು.
ಸಂಘ ಶತಮಾನ ಪೂರೈಸಿದ ಹಿನ್ನಲೆಯಲ್ಲಿ ಈ ವರ್ಷ ಪೂರ್ತಿ ಯೋಜನೆಯನ್ನ ರೂಪಿಸಲಾಗಿದೆ. ಡಿ.7 ರಿಂದ 28 ರವರೆಗೆ ಮನೆ ಮನೆಗೆ ಭೇಟಿ ನೀಡಿ ಸಂಘದ ವಿಚಾರ ತಿಳಿಸಬೇಕು. ರಾಷ್ಟಜಾಗರಣ ಸಂದರ್ಭದಲ್ಲಿ ರಾಜ್ಯ 29 ಸಾವಿರ ಗ್ರಾಮಗಳನ್ನ ಭೇಟಿ ಮಾಡಲಾಗಿದೆ ಅಯೋಧ್ಯದಲ್ಲಿ ರಾಮಮಂದಿರ ನಿರ್ಮಾಣದ ವೇಳೆ ಅಕ್ಷತ ಕಾಳು ವಿತರಿಸಲು ಈ ಮನೆಗಳನ್ನ ಮುಟ್ಟಲಾಗಿತ್ತು. ಅದರಂತೆ ಈ ಬಾರಿ ಪುಸ್ತಕ ಹಂಚಲು ಅನುಸರಿಸಲಾಗುವುದು ಎಂದರು.
ಪಂಚ ಪರಿವರ್ತನೆ ಸಂಘದ ಗುರಿಯಾಗಿದೆ ಇದರಲ್ಲಿ ಹಿಂದೂ ಮನೆಗಳು ಹೇಗಿರಬೇಕು ಎಂಬುದರ ಬಗ್ಗೆ ಚಿಂತಿಸಲಾಗಿದೆ. ಸ್ವಾತಂತ್ರ್ಯ ಸಾಮರಸ್ಯಕ್ಕೆ ಒತ್ತು ನೀಡಲಾಗುತ್ತಿದೆ. ಅಸ್ಪೃಶ್ಯತೆ ಹೋಗಲಾಡಿಸಲು ಮಂದಿರದಲ್ಲಿ ಸ್ಮಶಾನದಲ್ಲಿ ಮತ್ತು ಗ್ರಾಮದಲ್ಲಿನ ಹಬ್ಬದಲ್ಲಿ ಒಟ್ಟಿಗೆ ಪಾಲ್ಗೊಳ್ಳುವ ಮೂಲಕ ಸಾಮಾಜಿಕ ಸಾಮರಸ್ಯಕ್ಕೆ ಒತ್ತುನೀಡಲಾಗುವುದು. ಸ್ವದೇಶಿ ವಸ್ತು ಬಳಕೆಗೆ ಒತ್ತು ನೀಡಲಾಗುವುದು. ಮಾತೃಭಾಷೆಯನ್ನ ಹೆಚ್ಚು ಬಳಕೆ ಮಾಡುವ ಬಗ್ಗೆ ಒತ್ತು ನೀಡಲಾಗುವುದು ಹಾಗೂ ನಾಗರೀಕ ಕರ್ತವ್ಯಕ್ಕೆ ಒತ್ತು ನೀಡಲಾಗುತ್ತದೆ ಎಂದರು.
ಈ ಐದು ವಿಷಯಗಳಿಗೆ ಈ ವರ್ಷ ಹೆಚ್ಚು ಒತ್ತು ನೀಡಲಾಗವುದು. ಇದನ್ನ ಅನುಷ್ಠಾನಕ್ಕೆ ತರಲು ಮನೆ ಮನೆಗೆ ಭೇಟಿ ನೀಡಲು ನಿರ್ಧರಿಸಲಾಗಿದೆ. ಇದರ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದ ಅವರು ಯುವ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಇದು ಜನವರಿಯಲ್ಲಿ ಪ್ರತಿ ಗ್ರಾಮಪಂಚಾಯಿತಿ ಮಟ್ಟದಲ್ಲಿ ನಡೆಸಲಾಗುವುದು. ಗ್ರಾಮದ ಸಮಸ್ಯಯ ಬಗ್ಗೆ ಯೋಚಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ನಾಗರೀಕ ಗೋಷ್ಠಿಯ ಮೂಲಕ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು ಮಾರ್ಚ್ ನಲ್ಲಿ ತಾಲೂಕು ಮಟ್ಟದಲ್ಲಿ ಸದ್ಭಾವ ಕಾರ್ಯಕ್ರಮ ನಡೆಸಲಾಗುವುದು. ಶತಮಾನದ ಹಿನ್ನಲೆಯಲ್ಲಿ ಗ್ರಾಮ ಮಟ್ಟದಲ್ಲಿ ಹೆಚ್ಚು ಶಾಖೆ ನಿರ್ಮಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ವಿಸ್ತಾರಕರನ್ನ ನೇಮಿಸಲಾಗುತ್ತಿದೆ. ವಿಸ್ತಾರಕರು ವಾರದಲ್ಲಿ ಎರಡು ಮೂರು ದಿನ ಸಮಯ ನೀಡಲು ಕರೆನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ. ಶಾಸಕರಾದ ಚೆನ್ನಿ. ಡಾ.ಧನಂಜಯ್ ಸರ್ಜಿ, ಡಿಎಸ್ ಅರುಣ್, ಸಂಸದರು, ಪ್ರಮುಖರಾದ ಸಿದ್ದ ರಾಮಣ್ಣ. ಗಿರೀಶ್ ಪಟೇಲ್.ಪಟ್ಟಾಭಿರಾಮ್. ಸೇರಿದಂತೆ ಪ್ರಮುಖರು ಬಾಗಿಯಾಗಿದ್ದರು.
Goal of Panch transition- Declaration of regional action of RSS