SUDDILIVE || SHIVAMOGGA
ರಸ್ತೆ ಅಪಘಾತದಲ್ಲಿ ಸೆಕ್ಯೂರಿಟಿ ಗಾರ್ಡ್ ಸಾವು-Security guard dies in road accident
ರಸ್ತೆ ದಾಟುವಾಗ ಕಾರು ಡಿಕ್ಕಿ ಹೊಡೆದು ಸೆಕ್ಯೂರಿಟಿ ಗಾರ್ಡ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಿವಮೊಗ್ಗ – ಭದ್ರಾವತಿ ರಸ್ತೆಯ ನಿದಿಗೆ ಬಸ್ ನಿಲ್ದಾಣದ ಬಳಿ ಘಟನೆ ಸಂಭವಿಸಿದೆ.
ಭದ್ರಾವತಿಯ ಜಿಂಕ್‌ಲೈನ್ ರಸ್ತೆ ನಿವಾಸಿ ನಂಜುಂಡ.ಬಿ (57) ಅಪಘಾತದಕ್ಲಿ ಮೃತಪಟದಟಿದ್ದಾರೆ. ನಿಧಿಗೆಯ ಜೈನ್ ಪಬ್ಲಿಕ್ ಶಾಲೆಯಲ್ಲಿ ಸೆಕ್ಯೂರಿಟಿಯಾಗಿ ಕಾರ್ಯನಿರ್ವಹಿಸುತ್ತಿದ್ದ ನಂಜುಂಡ ಶುಕ್ರವಾರ ಸಂಜೆ ಕರ್ತವ್ಯಕ್ಕೆ ಹಾಜರಾಗಿ ಸ್ವಲ್ಪ ಸಮಯದ ಬಳಿಕ ಟೀ ಕುಡಿಯಲು ತೆರಳಿದ್ದರು.
ನಿದಿಗೆ ಬಸ್ ನಿಲ್ದಾಣದ ಕಡೆಗೆ ತೆರಳಲು ರಸ್ತೆ ದಾಟುವಾಗ ಮಲವಗೊಪ್ಪ ಕಡೆಯಿಂದ ಬಂದು ಕಾರು ಡಿಕ್ಕಿ ಹೊಡೆದು ನಂಜುಂಡ ಅವರ ತಲೆಗೆ ತೀವ್ರ ಪೆಟ್ಟಾಗಿತ್ತು. ಕೂಡಲೆ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆ ಹೊತ್ತಿಗಾಗಲೆ ಅವರು ಮೃತಪಟ್ಟಿದ್ದರು. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Security guard dies in road accident