ad

ನ್ಯಾಯಾಲಯದಿಂದ ವಾಪಾಸ್ ಆಗುವ ವೇಳೆ ಕೈದಿಯ ಬಳಿ ಮೊಬೈಲ್ ಪತ್ತೆ-Mobile phone found on prisoner as he was returning from court

SUDDILIVE || SHIVAMOGGA

ನ್ಯಾಯಾಲಯದಿಂದ ವಾಪಾಸ್ ಆಗುವ ವೇಳೆ ಕೈದಿಯ ಬಳಿ ಮೊಬೈಲ್ ಪತ್ತೆ-Mobile phone found on prisoner as he was returning from court

Jail, prisioner

ಶಿವಮೊಗ್ಗದ ನ್ಯಾಯಾಲಯಕ್ಕೆ ಹಾಜರಾಗಿ ಜೈಲಿಗೆ ಹಿಂತಿರುಗಿದ ಖೈದಿಯನ್ನ ಪರಿಶೀಲನೆ ನಡೆಸಿದಾಗ, ಆತನಲ್ಲಿ ಕೀ ಪ್ಯಾಡ್‌ ಮೊಬೈಲ್‌ ಪತ್ತೆಯಾಗಿರುವ ಘಟನೆ ವರದಿಯಾಗಿದೆ. 

ಶಿವಮೊಗ್ಗ ಕೇಂದ್ರ ಕಾರಾಗೃಹದ ಶಿಕ್ಷಾ ಬಂಧಿ ಮುಜೀಬ್‌ನನ್ನು ಪ್ರಕರಣವೊಂದರ ವಿಚಾರಣೆಗೆ ಭದ್ರಾವತಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಜೈಲಿಗೆ ಬಂದ ಮುಜೀಬ್‌ನನ್ನು ಜೈಲಿನ ಪ್ರವೇಶದ್ವಾರದಲ್ಲಿ ಕೆಎಸ್‌ಐಎಸ್‌ಎಫ್‌ ಸಿಬ್ಬಂದಿ ಪರಿಶೀಲಿಸಿದರು. ಆತನ ಬಲಗಾಲಿನ ಮೊಣಕಾಲಿನ ಬಳಿ ಕಾರ್ಬನ್‌ ಪೇಪರ್‌ನಿಂದ ಸುತ್ತಿರುವ ವಸ್ತು ಪತ್ತೆಯಾಗಿತ್ತು.

ಕಾರ್ಬನ್‌ ಪೇಪರ್‌ ತೆಗೆದು ಪರಿಶೀಲಿಸಿದಾಗ ಕೆಂಪು ಬಣ್ಣದ ಕೀ ಪ್ಯಾಡ್‌ ಮೊಬೈಲ್‌ ಸಿಕ್ಕಿದೆ. ಘಟನೆ ಸಂಬಂಧ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ರಂಗನಾಥ್‌.ಪಿ ಅವರು ತುಂಗಾ ನಗರ ಠಾಣೆಗೆ ದೂರು ನೀಡಿದ್ದಾರೆ.

Mobile phone found on prisoner as he was returning from court

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close