SUDDILIVE || SHIVAMOGGA
ಸಮೀಕ್ಷೆಗೆ ಉತ್ತಮ ಸ್ಪಂಧನೆ, ನಮಗೆ ನೆಟವರ್ಕ್ ದೇ ಸಮಸ್ಯೆ-ಡಿಸಿ-Good response to survey, network is the problem for us-DC
ಶಿವಮೊಗ್ಗ ಜಿಲ್ಲೆಯಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ485446 ಮನೆ ಗುರಿಯಾಗಿಸಿದೆ. ನಾಳೆ ಸಮೀಕ್ಷೆ ಮುಗಿಯಲಿದ್ದು, 3,86,248 ಮನೆಗಳಲ್ಲಿ ಸಮೀಕ್ಷೆ ಮುಗಿದಿದ್ದು 80% ಸಮೀಕ್ಷೆ ಮುಗಿದಿದೆ. 20% ಸಮಸ್ಯೆಯಾಗುತ್ತಿದೆ. ಎರಡು ದಿನದಲ್ಲಿಮುಕ್ತಾಯವಾಗಲಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಅವರು ಸುದ್ದಿಗೋಷ್ಸಿಯಲ್ಲಿ ಮಾತನಾಡಿ, ಸಮೀಕ್ಷೆಗಳಲ್ಲಿ ಗುರಿಸಾಧಿಸವರಿಗೆ ಅಭಿನಂದಿಸಿದ ಡಿಸಿ ಸೊರಬದಲ್ಲಿ ಶೇ. 100 ರಷ್ಟು ಸಮೀಕ್ಷೆ ಮುಗಿದಿದೆ. 30 ಸಾವಿರ ಮನೆಗಳಲ್ಲಿ ನೆಟವರ್ಕ್ ಸಮಸ್ಯೆಯಾಗುತ್ತಿದೆ. ನ್ಯಾಯಾಲಯದ ನಿರ್ದೇಶನದಂತೆ ಒತ್ತಾಯದ ಮಾಹಿತಿ ಪಡೆಯಲು ಸಾಧ್ಯವಿಲ್ಲ. ಆದರೂ ಸಾರ್ವಜನಿಕರಿಗೆ ಎಲ್ಲರೂ ಮಾಹಿತಿ ನೀಡಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಡಿಸಿ ಮನವಿ ಮಾಡಿಕೊಂಡರು.
ಕಮರ್ಷಿಯಲ್ ಮೀಟರ್ ಗಳಿಗೆ ಯುಹೆಚ್ಐಡಿ ಜನರೇಟರ್ ಆಗಿದೆ. ಧಾರ್ಮಿಸ್ಥಳದಲ್ಲಿ ಕಮರ್ಷಿಯಲ್ ಇದೆ. ಜಿಯೋಟ್ಯಾಗ್ ಮಾಡಿ ಕ್ಲೋಸ್ ಮಾಡ್ತೀವಿ. ಈ ಸಮಸ್ಯೆ 4-5% ಇದೆ. ಸಾರ್ವಜನಿಕರು ಪೂರ್ಣಪ್ರಮಾಣದ ಗಣತಿಯಲ್ಲಿ ಭಾಗಿಯಾಗಲು ಮನವಿ ಮಾಡಿಕೊಂಡರು.
ಜಿಪಂ ಸಿಇಒ ಮಾತನಾಡಿ, 5543 ಗ್ರಾಪಂ ನಲ್ಲಿ ಹಳ್ಳಿಗಳಲ್ಲಿ ನೆಟ್ ವರ್ಕ್ ಇಲ್ಲ. ಎಲ್ಲಿ ನೆಟವರ್ಕ್ ಇಲ್ಲವೋ ಪಿಡಿಒ ವಾಟರ್ ಮ್ಯಾನ್ ಮೊದಲಾದವರನ್ನ ಬಳಸಿಕೊಂಡು ಶ್ಯಾಡೋ ಏರಿಯಾ ಎಂದು ಗುರುತಿಸಲಾಗಿದೆ. ಸಾಗರ ಹೊಸನಗರ ಮತ್ತು ತೀರ್ಥಹಳ್ಳಿಯಲ್ಲಿ ಶ್ಯಾಡೋ ಏರಿಯಾ ಗುರುತಿಸಲಾಗಿದೆ. 250 ಪಾಯಿಂಟ್ ಗುರುತಿಸಿ ಅಲ್ಲಿಗೆ ಜನರನ್ನ ತಂದು ಸಮೀಕ್ಷೆ ನಡೆಸಲಾಗುತ್ತಿದೆ ಎಂದರು.
ಸಾಗರ ತಾಲೂಕಿನಲ್ಲಿ ಬರೂರ್ ಗ್ರಾಪಂ ನಲ್ಲಿ ಸಮೀಕ್ಷೆ ಬಹಿಷ್ಕರಿಸಲಾಗಿದೆ . ಮನೆಗೆ ಬನ್ನಿ ಎಂದು ಪ್ರತಿಭಟನೆ ನಡೆಯುತ್ತಿಧ. ನೆಟವರ್ಕ್ ಇಲ್ಲದ ಕಾರಣ ಸಮಸ್ಯೆಯಾಗಿದೆ. 120 ಟವರ್ ಆಗಿದೆ. ಏಕಾಏಕಿ ಟವರ್ ನಿರ್ಮಿಸಲಾಗದು. ಸಮಸ್ಯೆಗೆ ಪರಿಹಾರ ಸೂಚಿಸಬಹುದು ಆದರೆ ನೆಟವರ್ಕ್ ಬಾರದ ಹಿನ್ನಲೆಯಲ್ಲಿ ಶ್ಯಾಡೋ ಏರಿಯಾ ಗುರುತಿಸಿ ನಿಗದಿತ ಸ್ಥಳಕ್ಕೆ ಜನರನ್ನ ಕರೆತಂದು ಸಮೀಕ್ಷೆ ಮಾಡಲಾಗುತ್ತಿದೆ. ಸಧ್ಯಕ್ಕೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ ಎಂದರು.
ಸಮೀಕ್ಷೆಯಲ್ಲಿ ಉತ್ತರಕನ್ನಡ ಜಿಲ್ಲೆಕ್ಕಿಂತ ಬೆಟರ್ ಇದ್ದೇವೆ. ಚಿಕ್ಕಮಗಳೂರು ಜಿಲ್ಲೆಗಿಂತ ಕೊಂಚ ಕಡಿಮೆಯಿದೆ. ನೆಟವರ್ಕ್ ಸಮಸ್ಯೆಯಿರಲಿಲ್ಲ ಎಂದರೆ 5 ನೇ ಸ್ಥಾನದಲ್ಲಿ ಇರುತ್ತಿದ್ವಿ. ಈ ಸಮಸ್ಯೆಗೆ 12-15 ನೇ ಸ್ಥಾನ ಪಡೆಯಲಿದ್ದೇವೆ ಎಂದರು.
ಶರಾವತಿ ಪಂಪ್ಡ್ ಸ್ಟ್ಓರೇಜ್ ಯೋಜನೆಗೆ 400 ಕ್ಕೂ ಹೆಚ್ಚು ಸಾರ್ವಜನಿಕ ಕುಂದುಕೊರತೆ ಪತ್ರಬರೆಯಲಾಗಿದೆ. ಇದರ ಮೇಲೆ ಅರಣ್ಯ ಕ್ಲಿಯರೆನ್ಸ್ ಸಿಗುವ ಬಗ್ಗೆ ನಿರ್ಧಾರವಾಗಲಿದೆ.
ಒಂದು ಟೋಲ್ ಬಂದ್ ಗೆ ಸರ್ಕಾರಕ್ಕೆ ಪತ್ರ
ಶಿಕಾರಿಪುರದಲ್ಲಿ ಟೋಲ್ ವಿರುದ್ಧ ಅ.9 ರಂದು ಶಿಕಾರುಪುರದ ಬಂದ್ ಗೆ ಕರೆಕೊಡಲಾಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿಸಿಗಳು ಜನಪ್ರತಿಗಳು ಸಹಿತ ಈ ಟೋಲ್ ತೆಗೆಯಬೇಕೆಂಬ ಕೂಗಿದೆ. 6೦ ಕಿಮಿ ಒಳಗೆ ಎರಡು ಟೋಲ್ ತೆಗೆಯಲಾಗಿದೆ. ಕೆಆರ್ ಡಿಸಿಎಲ್ ನ ಅಡಿ ನಡೆಸುತ್ತಿರು ಒಂದು ಟೋಲ್ ನ್ನ ಹಾನ್ ಗಲ್ ಕಡೆ ಹಾಕಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.
Good response to survey, network is the problem for us-DC