SUDDILIVE || SHIVAMOGGA
ಕೊಲೆ ಆರೋಪಿಗೆ ಕಠಿಣ ಸಜೆ-Harsh punishment for murder accused
ಕೊಲೆ ಆರೋಪಿಗೆ 7 ವರ್ಷಕಠಿಣ ಸಜೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ಘನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿ ಆದೇಶಿಸಿದೆ.
ದಿನಾಂಕ 09-08-2021 ರಂದು ರಾಹಿಲ್ 21 ವರ್ಷ ವಾಸ ಬಾಪೂಜಿನಗರ ಶಿವಮೊಗ್ಗ ವಾಸ ಈತನ ಮೇಲಿನ ಹಳೇ ದ್ವೇಷದ ಹಿನ್ನೆಲೆಯಲ್ಲಿ ಅಜ್ಗರ್ ಖಾನ್ 21 ವರ್ಷ ಟ್ಯಾಂಕ್ ಮೊಹಲ್ಲಾ ಶಿವಮೊಗ್ಗ ಮತ್ತು ಅತೀಖ್ ಪಾಷಾ 36 ವರ್ಷ ರಾಗಿಗುಡ್ಡ ಶಿವಮೊಗ್ಗ ಇಬ್ಬರೂ ಸೇರಿಕೊಂಡು ರಾಹಿಲ್ ನ ಮೇಲೆ ಚಾಕುವಿನಿಂದ ಹಲ್ಲೆಮಾಡಿ ಕೊಲೆ ಮಾಡಿರುತ್ತಾರೆಂದು ಮೃತನ ಸೋದರ ಮಾವ ನೀಡಿದ ದೂರಿನ ಮೇರೆಗೆ ಕೋಟೆ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ: 0109/2021 ಕಲಂ 302, 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಗಳಾದ ಚಂದ್ರಶೇಖರ್ ಟಿ.ಕೆ ಪಿಐ ಕೋಟೆ ಪೊಲೀಸ್ ಠಾಣೆ ರವರು ಪ್ರಕರಣದ ತನಿಖೆ ಪೂರೈಸಿ ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.
ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶಾಂತರಾಜ್, ಸರ್ಕಾರಿ ಅಭಿಯೋಜಕರವರು, ವಾದ ಮಂಡಿಸಿದ್ದು, ಘನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, 1ನೇ ಆರೋಪಿ ಅಜ್ಗರ್ ಖಾನ್ 21 ವರ್ಷ ಟ್ಯಾಂಕ್ ಮೊಹಲ್ಲಾ ಶಿವಮೊಗ್ಗ ಈತನ ವಿರುದ್ಧ ಆರೋಪ ದೃಡ ಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧೀಶರಾದ ಯಶವಂತ್ ಕುಮಾರ್ ರವರು ದಿನಾಂಕಃ 08-10-2025 ರಂದು 1ನೇ ಆರೋಪಿತನಿಗೆ 7 ವರ್ಷ ಕಠಿಣ ಕಾರಾಗೃಹವಾಸ ಶಿಕ್ಷೆ ಮತ್ತು ರೂ 10,000/- ದಂಡ ವಿಧಿಸಿ ಆದೇಶಿಸಿರುತ್ತಾರೆ.
Harsh punishment for murder accused