SUDDILIVE SHIKARIPURA
ಶಿಕಾರಿಪುರ ಬಂದ್ ಗೆ ಸಕಲಸಿದ್ದತೆ-Shikaripura Bandh
ಟೋಲ್ ವಿರೋಧಿಸಿ ಶಿಕಾರಿಪುರ ಬಂದ್ ಇನ್ನೂ ಕಾವು ಪಡೆದುಕೊಳ್ಳಬೇಕಿದೆ. ಶಿಕಾರಿಪುರ ಬಂದ್ ಗೆ ಅಲ್ಲಲ್ಲಿ ನಗರದಲ್ಲಿ ಫ್ಲೆಕ್ಸ್ ಹಾಕಲಾಗಿದೆ. ಖಾಸಗಿ ಬಸ್ ನಿಲ್ದಾಣದಲ್ಲಿ ಬಂದ್ ಹಿನ್ನಲೆಯಲ್ಲಿ ತಮಟೆ ಬಾರಿಸಲಾಗುತ್ತಿದೆ.
ನಗರದಲ್ಲಿ ಖಾಸಗಿ ಬಸ್ ಗಳು ಸಂಚಾರಿಸುತ್ತಿದ್ದು, ಪ್ರತಿಭಟನಾಕಾರರು ಬಂದ್ ಹಿನ್ನಲೆಯಲ್ಲಿ ನಿಲ್ಲಿಸಲು ಸೂಚಿಸುತ್ತಿದ್ದಾರೆ. ಕುಟ್ರಳ್ಳಿ ಟೋಲ್ ನ್ನ ಕಳೆದ ಒಂದು ವರ್ಷದಿಂದ ನಿಲ್ಲಿಸುವಂತೆ ಹೋರಾಟ ನಡೆಸಿಕೊಂಡು ಬರುತ್ತಿದ್ದರೂ ಸಹ ಸರ್ಕಾರ ಕ್ರಮಕೈಗೊಳ್ಳದ ಹಿನ್ನಲೆಯಲ್ಲಿ ಶಿಕಾರಿಪುರ ಬಂದ್ ಗೆ ಕರೆ ನೀಡಲಾಗಿದೆ.
ವಾಹನಗಳಲ್ಲಿ ಮೈಕ್ ಕಟ್ಟಿಕೊಂಡು ಬಂದ್ ಗೆ ಅನೌನ್ಸ್ ಮಾಡಲಾಗುತ್ತಿದೆ. ಶಾಲಾ ಕಾಲೇಜುಗಳಿಗೆ ಬಂದ್ ಹಿನ್ನಲೆಯಲ್ಲಿ ಯಾವುದೇ ರಜೆ ಘೋಷಿಸಿಲ್ಲ. ಹುಚ್ಚರಾಯ ಸ್ವಾಮಿ ದೇವಸ್ಥಾನದಿಂದ, ದೊಡ್ಡಪೇಟೆ, ಮೂಲಕ ಶಿವಮೊಗ್ಗ ಸರ್ಕಲ್ ಗೆ ಬಂದು ನಂತರ ತಾಲೂಕು ಕಚೇರಿಗೆ ಪ್ರತಿಭಟನಾ ಮೆರವಣಿಗೆ ತಲುಪಲಿದೆ.
ಪ್ರತಿಭಟನಾ ಮೆರವಣಿಗೆಗೂ ಮುನ್ನ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಮೆರವಣಿಗೆ ಹೊರಡುವ ವೇಳೆ ಯಾವುದೇ ವಾಹನಗಳು ಓಡಾಡದಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ.
Shikaripura bandh