ad

2028 ರ ನಂತರ ಪ್ರತಿಗ್ರಾಮದಲ್ಲೂ ಹಿಂದೂ ಸಮಾಜೋತ್ಸವ-ಯತ್ನಾಳ್ ಘೋಷಣೆ- Hindu Samajotsava-Yatnal declared in every village after 2028

 SUDDILIVE || SHIVAMOGGA

2028 ರ ನಂತರ ಪ್ರತಿಗ್ರಾಮದಲ್ಲೂ ಹಿಂದೂ ಸಮಾಜೋತ್ಸವ-ಯತ್ನಾಳ್ ಘೋಷಣೆ-  Hindu Samajotsava-Yatnal declared in every village after 2028 

Hindu, samajyothsav



ರಾಜ್ಯದಲ್ಲಿ 2028ರ ನಂತರ ಬದಲಾವಣೆ ಅಲೆ ಬೀಸಲಿದೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ

ನಗರದ ವಿದ್ಯಾ ನಗರದಲ್ಲಿ ಕೇಸರಿಯುವಪಡೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಣಪತಿ ವಿಸರ್ಜನಾ ಮೆರವಣಿಗೆಯನ್ನು ಉದ್ದೇಶಿಸಿ ಅವರು ಮಾತನಾಡಿ 2028ರ ನಂತರ ಜೆಸಿಬಿ ಆಡಳಿತ ರಾಜ್ಯದಲ್ಲಿ ಬರಲಿದೆ ಯಾವುದೇ ಓಲೈಕೆ ಸರ್ಕಾರಗಳು ಬರುವುದಿಲ್ಲ 150ಕ್ಕೂ ಹೆಚ್ಚು ಸ್ಥಾನವನ್ನು ಗಳಿಸಲಿರುವ ಪಕ್ಷವೊಂದು ಅಧಿಕಾರ ಹಿಡಿಯಲಿದೆ ಎಂದು ತಿಳಿಸಿದರು.

ಈ ಹಿಂದೆ ನಮ್ಮ ಸರ್ಕಾರವೇ ಅಧಿಕಾರದಲ್ಲಿದ್ದು ಆ ವೇಳೆ ಇಂದು ಸಮಾಜಕ್ಕೆ ಅನ್ಯಾಯವಾದಾಗ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಸರ್ಕಾರ ಇತ್ತು ವಿನಹ ಯಾವುದೇ ರಕ್ಷಣೆ ಮಾಡುವಂತಹ ಸರ್ಕಾರವಿರಲಿಲ್ಲ. ಈ ಹಿನ್ನೆಲೆಯಲ್ಲಿ 2028 ರ ನಂತರ ಹಿಂದೂ ರಕ್ಷಣೆ ಮಾಡುವ ಸರ್ಕಾರ ಅಧಿಕಾರದಲ್ಲಿ ಬರಲಿದ್ದು ಪ್ರತಿ ಗ್ರಾಮದಲ್ಲೂ ಹಿಂದೂ ಸಮಾಜೋತ್ಸವವನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು

ನಮ್ಮ ಸರ್ಕಾರ ಬಂದಾಗ ಯಾವುದೇ ಗಣೇಶೋತ್ಸವಕ್ಕೆ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ ಯಾವುದೇ ಮಸೀದಿಯ ಮುಂದೆ ಎಷ್ಟು ಹೊತ್ತು ಬೇಕಾದರೂ ಕುಣಿಯುವ ಅವಕಾಶವಿರುತ್ತದೆ ಈಗಿರುವ ಸರ್ಕಾರ ಸುಪ್ರೀಂಕೋರ್ಟ್ ಆದೇಶವಿದ್ದರೂ ಸಹ ಆಜಾದ್ ಕೂಗಲು ನಿಗದಿತ ಸಮಯ ನಿಗದಿಪಡಿಸದೇ ಉಲ್ಲಂಘಿಸುತ್ತಿದೆ ಇಂಥ ಸರ್ಕಾರ ಹೆಚ್ಚು ದಿನ ಇರುವುದಿಲ್ಲವೆಂದು ಹೇಳಿದರು.

ನಾನು ಈ ಜಿಲ್ಲೆಗೆ ಬರುತ್ತೇನೆ ಎಂದರೆ ಈ ಹಿಂದೆ ಕೆಲವು ಶಕ್ತಿಗಳು ತೊಡೆಯುತ್ತಿದ್ದವು ಆದರೆ ಗಜಾನನ ಮಂಡಳಿಯವರು ವಿದ್ಯಾನಗರದವರೆಗೆ ಕರೆದುಕೊಂಡು ಬಂದಿದ್ದಾರೆ ಅವರಿಗೆ ನಾನು ಚಿರಋಣಿ ಹಾಗೂ ಈಶ್ವರಪ್ಪನವರಿಗೂ ಚಿರಋಣಿ ಎಂದು ಬಿಎಸ್ ವೈ ಕುಟುಂಬದ ಹೆಸರು ಹೇಳದೆ ಚಾಟಿ ಬೀಸಿದರು.

Hindu Samajotsava-Yatnal declared in every village after 2028 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close