SUDDILIVE || SHIVAMOGGA
ಸೂಳೆಬೈಲು ವೃತ್ತದಲ್ಲಿ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ- Fatal attack on a person in Sulebailu Circle
ಶಿವಮೊಗ್ಗದ ಸೂಳೆಬೈಲು ವೃತ್ತದಲ್ಲಿ 32 ವರ್ಷದ ಯುವಕನೊರ್ವನಿಗೆ ಬರ್ಬರವಾಗಿ ಹಲ್ಲೆ ಮಡಲಾಗಿದ್ದು ಆತನನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನ ಶಬ್ಬೀರ್ (32) ವರ್ಷದ ವ್ಯಕ್ತಿಯೆಂದು ಗುರುತಿಸಲಾಗಿದ್ದು, ಪ್ರೀತಿ ಪ್ರೇಮದ ವಿಚಾರದಲ್ಲಿ ಹಲ್ಲೆ ನಡೆದಿದೆ ಎಂದು ಶಂಕಿಸಲಾಗುತ್ತಿದೆ. ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್, ಅಡಿಷನಲ್ ಎಸ್ಪಿ ಕಾರ‌್ಯಪ್ಪ, ತುಂಗ ನಗರ ಪೊಲೀಸ್ ಠಾಣೆಯ ಪಿಐ ಗುರುರಾಜ್ ಮತ್ತಿದ್ದರು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
![]() |
ಹಲ್ಲೆಗೊಳಗಾದ ಶಬ್ಬೀರ್ |
ಸಾಲ್ಮೀಯ ಎಂಬ ಯುವತಿ ಫರ್ದೀನ್ (21) ಪ್ರೀತಿಸಿ ಮದುವೆಯಾಗಿದ್ದ, ಈ ಮದುವೆ ಕುರಿತಂತೆ ತಕರಾಗಿತ್ತು. ಅಣ್ಣ ಶಾಬಾಜ್ ಮತ್ತು ಸಂಬದಿಕ ಶಬ್ಬೀರ್ ನ ಮೇಲೆ ತಂಗಿಯ ಪತಿಯ ಕಡೆಯವರು ಬಂದು ಹಲ್ಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮತ್ತೋರ್ವನು ಇದರಲ್ಲಿಗಾಯಗೊಂಡಿದ್ದಾನೆ.
ಶಿವವಮೊಗ್ಗದಲ್ಲಿ ಭಾರತ್ ಫೌಂಡರಿ ಬಳಿ ಹಲ್ಲೆಗೊಳಗಾದ ಅಮ್ಜದ್ ಸಾವು ಸುಧಾರಿಸಿಕೊಳ್ಳುವ ಮೊದಲೆ ಮತ್ತೊಂದು ಮಾರಣಾಂತಿಕ ಹಲ್ಲೆ ಶಿವಮೊಗ್ಗದ ಜನತೆಯನ್ನ ತಲ್ಲಣಗೊಳಿಸಿದೆ.
Fatal attack on a person in Sulebailu Circle